ಹಿಂದೂ ವಿರೋಧಿ ಟಿಪ್ಪುವಿಗೆ ಆದ ಗತಿಯೇ ಸಿದ್ದರಾಮಯ್ಯ ಸರ್ಕಾರಕ್ಕೂ ಕಾದಿದೆ- ಯಶಪಾಲ್ ಸುವರ್ಣ

Spread the love

ಹಿಂದೂ ವಿರೋಧಿ ಟಿಪ್ಪುವಿಗೆ ಆದ ಗತಿಯೇ ಸಿದ್ದರಾಮಯ್ಯ ಸರ್ಕಾರಕ್ಕೂ ಕಾದಿದೆ- ಯಶಪಾಲ್ ಸುವರ್ಣ

ಉಡುಪಿ: ಬಹುಸಂಖ್ಯಾತ ವರ್ಗದ ತೀವ್ರ ವಿರೋಧವಿದ್ದರೂ ಟಿಪ್ಪು ಜಯಂತಿಯನ್ನು ಆಚರಿಸಿಯೇ ತೀರಬೇಕು ಎಂಬ ಹಠಕ್ಕೆ ಬಿದ್ದಿರುವ ಸಿದ್ದರಾಮಯ್ಯನವರ ಭಂಡ ಸರಕಾರ ಉಡುಪಿ ಜಿಲ್ಲೆಯಲ್ಲಿ ಜನಾಕ್ರೋಶವನ್ನು ಲೆಕ್ಕಿಸದೆ ಸೆಕ್ಷನ್ 144 ಜಾರಿಗೊಳಿಸಿ ಜನರನ್ನು ಭಯಭೀತಗೊಳಿಸಿದೆ. ಸಿದ್ದರಾಮಯ್ಯ ಸರಕಾರ ಕರಾವಳಿ ಭಾಗದ ಜನತೆಗೆ ಮತ್ತೊಮ್ಮೆ ಟಿಪ್ಪು ಸುಲ್ತಾನನ ಕರಾಳ ಶಾಸನಕಾಲವನ್ನು ನೆನಪಿಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಯಶಪಾಲ್ ಸುವರ್ಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಪ್ಪಣೆಯಂತೆ ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸಲಾಗುತ್ತಿದೆ. ಆದರೆ ಕೇವಲ ಕಾಂಗ್ರೆಸಿನ ಮುಖಂಡರು ಮತ್ತು ಕಡ್ಡಾಯ ಹಾಜರಿ ಮೇಲೆ ಕರೆಸಲಾದ ಸರಕಾರಿ ಅಧಿಕಾರಿಗಳನ್ನು ಬಿಟ್ಟರೆ ಈ ಮತಾಂಧ, ನರಹಂತಕ ಟೀಪು ಸುಲ್ತಾನನ ಜಯಂತಿಯ ಸಿಹಿ ತಿನ್ನಲು ಬೇರೆ ಯಾರೂ ಬರುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಧಿಕಾರಿ ಕಚೇರಿಯ ಮೂಲೆಯಲ್ಲಿ ನಲವತ್ತು ಜನ ಕೂರುವ ಕೋಣೆಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಜನರ ತೆರಿಗೆ ಹಣದಲ್ಲಿ ಕಾಟಾಚಾರಕ್ಕಾಗಿ ನಡೆಯಲಿರುವ ಈ ಟಿಪ್ಪು ಜಯಂತಿಯಲ್ಲಿ ನೆಟ್ಟಗೆ ಐವತ್ತು ಜನರೂ ಭಾಗವಹಿಸುವುದು ಅನುಮಾನ. ಜನರಿಂದಲೇ ತಿರಸ್ಕೃತವಾದ ಈ ಜಯಂತಿಗೆ ಪೂರ್ವಭಾವಿಯಾಗಿ ಪೊಲೀಸರು ಸೆಕ್ಷನ್೧೪೪ ಹಾಕಿರುವುದು ಮೂರ್ಖತನದ ಪರಮಾವಧಿ ಎಂದು ಅವರು ಹೇಳಿದ್ದಾರೆ.

ಪ್ರಜಾಪೀಡಕನಾಗಿ, ಮೊಂಡುವಾದಿಯಾಗಿ, ಸರ್ವಾಧಿಕಾರಿ ಧೊರಣೆಯಿಂದ ನಡೆದು ದುರಂತ ಅಂತ್ಯವನ್ನು ಕಂಡ ಟಿಪ್ಪು ಸುಲ್ತಾನನಿಗೂ ಈಗ ರಾಜ್ಯದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಸಾಕಷ್ಟು ವಿಚಾರಗಳಲ್ಲಿ ಸಾಮ್ಯತೆ. ಇದೆ. ಟಿಪ್ಪ ಸುಲ್ತಾನನನ್ನೇ ಆದರ್ಷವಾಗಿರಿಸಿಕೊಂಡು ಬಹುಸಂಖ್ಯಾತರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿರುವ,ಹಿಂದೂ ಸಂಘಟನೆಗಳ ಯುವಕರ ಹತ್ಯೆಗೆ ಪರೋಕ್ಷ ಬೆಂಬಲ ನೀಡುತ್ತಾ ಬಂದಿರುವ ಜಗಮೊಂಡ ಸಿದ್ದರಾಮಯ್ಯನವರ ರಾಜಕೀಯ ಬದುಕು ಕೂಡ ಬಹುತೇಕ ಅಂತ್ಯಗೊಳ್ಳುವುದು ಖಚಿತವಾಗಿದೆ. ಈ ಬಾರಿಯ ಟಿಪ್ಪು ಜಯಂತಿ ರಾಜ್ಯದ ಕಟ್ಟ ಕಡೆಯ ಟಿಪ್ಪು ಜಯಂತಿಯಾಗಲಿದೆ. ಮುಂದಿನ ಬಾರಿ ಎಲ್ಲಾ ಟಿಪ್ಪು ಭಕ್ತ ಕಾಂಗ್ರೆಸಿಗರನ್ನು ರಾಜ್ಯದ ಮತದಾರರು ನೇರ ಮನೆಗೆ ಕಳುಹಿಸಿ ಮನೆಯಲ್ಲೇ ಟಿಪ್ಪು ಜಯಂತಿ ಆಚರಿಸಿಕೊಳ್ಳುವಂತೆ ಮಾಡಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love