ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಧರ್ಮ ಸಂಸತ್ ಮುನ್ನುಡಿಯಾಗಲಿ : ಗೋಪಾಲ್ ಜೀ
ಉಡುಪಿ: ಜನರ ನಡುವೆ ಹೆಣೆದಿರುವ ಜಾತಿಯ ಸಂಕೋಲೆಯನ್ನು ದೂರವಾಗಿಸಿ ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸುವ ಕಾರ್ಯಕ್ಕೆ ಧರ್ಮ ಸಂಸತ್ ಮುನ್ನುಡಿಯಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ನ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ ಹೇಳಿದರು.
ವಿಶ್ವ ಹಿಂದು ಪರಿಷತ್ ಯಾವುದೇ ಒಂದು ಜಾತಿ, ವರ್ಗಕ್ಕೆ ಸೀಮಿತವಾಗಿಲ್ಲಘಿ. ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತಿದೆ. ಯುವಕ-ಯುವತಿಯರನ್ನು, ಹಿರಿಯರನ್ನು, ತಾಯಂದಿರನ್ನು ಹಾಗೂ ಸಮಾಜದ ಎಲ್ಲಾ ಜಾತಿ, ವರ್ಗಗಳನ್ನು ಪ್ರತಿನಿಧಿಸುವುದರ ಜೊತೆಗೆ ನೈಜ ಹಿಂದೂ ಸಮಾಜದ ನೇತೃತ್ವವನ್ನು ವಿಎಚ್ಪಿ ವಹಿಸಿಕೊಂಡಿದೆ ಎಂದರು.
ಕರ್ನಾಟಕ ರಾಜ್ಯದಲ್ಲಿ ರಾಜಕಾರಣ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ರಾಜಕಾರಣಿಗಳು ಇಡೀ ರಾಜ್ಯವನ್ನು ಛಿದ್ರಗೊಳಿಸಿ, ತಾವೇ ಅಧಿಕಾರವನ್ನು ಅನುಭವಿಸಬೇಕೆಂಬ ದುರಾಸೆಯಿಂದ ಜಾತಿ-ಜಾತಿಗಳ ನಡುವೆ ಸಂಘರ್ಷವನ್ನು ಎಬ್ಬಿಸಿ, ಸಮುದಾಯದೊಳಗೆ ಇನ್ನೊಂದು ಸಮುದಾಯವನ್ನು ಹುಟ್ಟುಹಾಕುವ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ರಾಜಕೀಯ ಸಮಾಜವನ್ನು ಬೇರ್ಪಡಿಸುವ ಕೆಲಸ ಮಾಡಿದರೆ, ಧರ್ಮ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ. ಅಂತಹ ಶಕ್ತಿ ಧರ್ಮಕ್ಕೆ ಮಾತ್ರ ಇರುವುದು. ಒಡೆದ ಮನಸ್ಸುಗಳನ್ನು ಒಂದಾಗಿಸಿ, ಜಾತಿಯ ದೂರಾಭಿಮಾನ ದೂರ ಮಾಡಿ ಹಿಂದುತ್ವದ ಸ್ವಾಭಿಮಾನಕ್ಕೆ ಹೃದಯದಲ್ಲಿ ಅಂಕಿತ ಹಾಕಬೇಕು. ಅಂತಹ ಕಾರ್ಯಕ್ಕೆ ಧರ್ಮ ಸಂಸತ್ ನಾಂದಿ ಹಾಡಬೇಕು ಎಂದರು.
ಗೋ ಹತ್ಯೆಘಿ, ಲವ್ ಜಿಹಾದ್, ಮತಾಂತರ ಹಾಗೂ ಶ್ರದ್ಧಾ ಕೇಂದ್ರ, ಸಂಸ್ಕøತಿಯ ಮೇಲಾಗುತ್ತಿರುವ ಆಕ್ರಮಣಗಳಿಗೆ ಹಿಂದೂ ಸಮಾಜ ಸೂಕ್ತ ಉತ್ತರ ಕೊಡುವಂತಾಗಬೇಕು. ಈ ಕಾರ್ಯ ನಡೆಯಬೇಕಾದರೆ ಗ್ರಾಮ ಗ್ರಾಮಗಳಲ್ಲಿಘಿ, ನಗರ ನಗರಗಳಲ್ಲಿ ಹಿಂದೂ ಸಮಾಜದ ಉನ್ನತಿಗೆ ಕೆಲಸ ಮಾಡಬೇಕು. ತನ್ನ ಮೇಲಾಗುವ ಎಲ್ಲಾ ದಾಳಿಗಳಿಗೆ ಉತ್ತರ ಕೊಡುವ ಪರಾಕ್ರಮದ ಹಿಂದೂ ಸಮಾಜ ನಿರ್ಮಾಣ ಆಗಬೇಕು. ಇಡೀ ಜಗತ್ತಿನಲ್ಲಿ ಹಿಂದೂ ಸಮಾಜದ ದಿಗ್ವಿಜಯ ಗಳಿಸಬೇಕು. ಆದರೆ ನಾವು ಶಸಾಸ್ತದ ಮೂಲಕ ವಿಜಯ ಸಾಧಿಸುವುದಲ್ಲಘಿ, ಸಂಸ್ಕøತಿ, ಹೃದಯ ವೈಶಾಲ್ಯತೆಯಿಂದ ವಿಜಯ ಸಾಧಿಸಬೇಕಾಗಿದೆ ಎಂದರು.
1985ರಲ್ಲಿ ಉಡುಪಿಯಲ್ಲಿ ನಡೆದ ಧರ್ಮ ಸಂಸತ್ ರಾಮಜನ್ಮ ಭೂಮಿಯ ಆಂದೋಲನಕ್ಕೆ ನಾಂದಿ ಹಾಡಿತ್ತು. ಈಗ ಮತ್ತೊಂದು ಅವಕಾಶ ನಮ್ಮ ಪಾಲಿಗೆ ಬಂದಿದ್ದುಘಿ, ಅದನ್ನು ಹಿಂದೂ ಸಮಾಜದ ಉದ್ಧಾರಕ್ಕೆ ಬಳಸಬೇಕಾಗಿದೆ ಎಂದು ಕರೆನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಎಚ್ಪಿ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್, ಹಿಂದೂ ಸಮಾಜಕ್ಕೆ ಸರಿಯಾದ ದಿಕ್ಕು ತೋರಿಸುವ ಕೆಲಸ ಆಗಬೇಕು. ಹಿಂದೂ ವಿರೋಧಿ ಅಲೆ ಈ ರಾಜ್ಯದಲ್ಲಿ ಸಂಪೂರ್ಣವಾಗಿ ನಿರ್ನಾಮ ಆಗಬೇಕು. ಅಂಥಾ ಕಾರ್ಯಕ್ಕೆ ಧರ್ಮ ಸಂಸತ್ ನಾಂದಿಹಾಡಬೇಕು. ಹಿಂದೂ ಸಮಾಜಕ್ಕೆ ಗೌರವ ನೀಡುವವರಿಗೆ ಮಾತ್ರ ಮನ್ನಣೆ ನೀಡಬೇಕು. ಜಾತಿ, ಭಾಷೆ, ವಿವಿಧ ಆಚಾರ-ವಿಚಾರಗಳ ಆಧಾರದಲ್ಲಿ ನಮ್ಮನ್ನು ಬೇರ್ಪಡಿಸುವ ದುಷ್ಟಶಕ್ತಿಗಳಿಗೆ ಈ ಮೂಲಕ ಉತ್ತರ ನೀಡಬೇಕು. ಹಿಂದೂ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಜವಾಬ್ದಾರಿ ಮಠಾಧೀಶರ ಮೇಲಿದೆ. ರಾಷ್ಟ್ರ ಪ್ರೇಮ, ಧರ್ಮದ ಕಳಕಳಿ, ಸಂಸ್ಕøತಿಯನ್ನು ಪುನರುಜ್ಜೀವನಗೊಳಿಸುವುದು ಅವರ ಕರ್ತವ್ಯ ಎಂದರು.
ವಿಎಚ್ಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್ ಘಟಕಗಳ ಜವಾಬ್ದಾರಿ ಘೋಷಣೆ ಮಾಡಿದರು.
ವಿಎಚ್ಪಿ ಪ್ರಾಂತ ಅಧ್ಯಕ್ಷೆ ಡಾ. ವಿಜಯಲಕ್ಷ್ಮೀ ದೇಶಮಾನಿ, ಧರ್ಮ ಪ್ರಸಾರ ಪ್ರಮುಖ್ ಕುಸುಮ ನಾರಾಯಣ ನಾಯಕ್, ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ರತ್ನಾಕರ ಅಮೀನ್, ಬಜರಂಗದಳ ಮಂಗಳೂರು ವಿಭಾಗದ ಸಹ ಸಂಚಾಲಕ ಸುನಿಲ್ ಕೆ.ಆರ್., ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಜಿಲ್ಲಾ ಸುರಕ್ಷಾ ಪ್ರಮುಖ್ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಉಡುಪಿ ನಗರ ಅಧ್ಯಕ್ಷ ಸಂತೋಷ್ ಸುವರ್ಣ ಉದ್ಯಾವರ ಸ್ವಾಗತಿಸಿದರು.