Home Mangalorean News Kannada News ಹಿಂಸೆಯನ್ನೆದುರಿಸಲು ಅಹಿಂಸೆಯೇ ಮಂತ್ರ- ಡಾ. ರಾಮದಾಸ ಪ್ರಭು

ಹಿಂಸೆಯನ್ನೆದುರಿಸಲು ಅಹಿಂಸೆಯೇ ಮಂತ್ರ- ಡಾ. ರಾಮದಾಸ ಪ್ರಭು

Spread the love

ಹಿಂಸೆಯನ್ನೆದುರಿಸಲು ಅಹಿಂಸೆಯೇ ಮಂತ್ರ- ಡಾ. ರಾಮದಾಸ ಪ್ರಭು

ಉಡುಪಿ: ಯಾವುದೇ ಕೆಲಸ ಮಾಡುವಾಗ ನಮ್ಮೊಳಗಿನ ಒಳ ಮನಸ್ಸು ಹೇಳುವುದನ್ನು ಗಮನವಿಟ್ಟು ಕೇಳಿ; ಆತ್ಮಾವಲೋಕನ ಮಾಡಿಕೊಂಡು ಮುಂದುವರಿದರೆ ಮಾನವನಲ್ಲಿನ ಹಿಂಸಾ ಗುಣವನ್ನು ನಿಯಂತ್ರಿಸಲು ಬೇರೆ ಯಾವುದೇ ಕಾನೂನುಗಳ ಅಗತ್ಯವಿಲ್ಲ ಎಂದು ಡಾ. ರಾಮದಾಸ ಪ್ರಭು ಹೇಳಿದರು.

ಅವರು ಸೋಮವಾರ , ವಾರ್ತಾ ಮತು ಸಾರ್ವಜನಿಕ ಸಂಪರ್ಕ ಇಲಾಖೆ, ಉಡುಪಿ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಕಾರಾಗೃಹ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಗಾಂಧೀಜಿ ಮತ್ತು ಅಹಿಂಸೆ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಕಾರಾಗೃಹ ವಾಸಿಗಳಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಹಿಂಸೆಯ ಮೂಲಕ ಸಾಧಿಸುವ ಯಾವುದೇ ಗೆಲುವುಗಳ ನಂತರ ಸಂತೋಷ ಎಂಬುದು ಇರುವುದಿಲ್ಲ, ಭಾರತದ ಇತಿಹಾಸದಲ್ಲಿ ನಡೆದ ಯುದ್ಧಗಳಿರಬಹುದು ಅಥವಾ ಇಡೀ ವಿಶ್ವ ಕಂಡ ಎರಡು ಮಹಾಯುದ್ದಗಳೇ ಇದಕ್ಕೆ ಸಾಕ್ಷಿ, ಯುದ್ದದಲ್ಲಿ ಗೆದ್ದ ದೇಶಗಳು ಹಾಗೂ ಸೋತ ದೇಶಗಳು ಎರಡೂ ಅಪಾರ ಪ್ರಮಾಣದ ಮಾನವ ಹಾನಿ ಸೇರಿದಂತೆ ಎಲ್ಲಾ ಬಗೆಯ ಹಾನಿಗೆ ಒಳಗಾಗಿದ್ದುವು, ಹಿಂಸೆಯ ಮೂಲಕ ಪಡೆಯುವ ಗೆಲುವಿನಿಂದ ಸಂತೋಷ ಅಥವಾ ಸೃಷ್ಟಿ ಸಾಧ್ಯವಿಲ್ಲ; ಹಿಂಸೆಗೆ ಬಲಿಷ್ಠ ಎದುರಾಳಿ ಅಹಿಂಸೆ ಮಾತ್ರ, ವಿಶ್ವದ ಹಲವು ರಾಷ್ಟ್ರಗಳನ್ನು ತಮ್ಮ ತೋಳ್ಬಲದ ಮೂಲಕ ವಶಪಡಿಸಿಕೊಂಡಿದ್ದ ಬ್ರಿಟೀಷರು ಗಾಂಧೀಜಿಯಯವರ ಅಹಿಂಸೆಗೆ ಶರಣಾಗಿ ಭಾರತಕ್ಕೆ ಸ್ವಾತಂತ್ರ್ಯ ನೀಡಿದರು. 1947 ರಲ್ಲಿ ಭಾರತ ವಿಭಜನೆಯ ನಂತರ ನಡೆದ ಹಿಂಸಾಚಾರವನ್ನು ಶಮನಗೊಳಿಸದ್ದು, ಗಾಂಧೀಜಿಯವರ ಅಹಿಂಸೆಯ ಮಾರ್ಗ, ಹಿಂಸೆಯಲ್ಲಿ ಎದುರಾಳಿಗಳಿಗೆ ಹಾನಿ ಮಾಡಿ ಸೋಲಿಸಬೇಕೆನ್ನುವ ಗುರಿ ಇದ್ದರೆ, ಅಹಿಂಸೆಯಲ್ಲಿ, ಎದುರಾಳಿಯ ಮನಃಪರಿವರ್ತನೆ ಮಾಡುವ ಗುರಿ ಇರುತ್ತದೆ. ಹೃದಯ ಕಾಠಿಣ್ಯತೆ ಇರುವವರನ್ನು ಒಡೆಯುವ ಬದಲು ಅಹಿಂಸೆಯಿಂದ ಅವರ ಹೃದಯವನ್ನು ಕರಗಿಸಬೇಕು ಎಂದು ಹೇಳಿದರು.

ಗಾಂಧೀಜಿ ಸ್ವಾತಂತ್ರ್ಯ ಹೋರಾಟ ಮಾತ್ರವಲ್ಲದೇ, ಅಸ್ಪøಶ್ಯತೆ, ಬಡತನ, ಜಾತೀಯತೆಯ ವಿರುದ್ದವೂ ಹೋರಾಡಿದರು; ಅಹಿಂಸೆಯ ಹಾದಿ ತುಳಿಯಲಿಲ್ಲ, ತಪ್ಪುಗಳಾದ ಸಂದರ್ಭದಲ್ಲಿ ಉಪವಾಸ ಮತ್ತು ಮೌನವ್ರತ ಆಚರಿಸುವ ಮೂಲಕ, ತಮಗೆ ತಾವೇ ಶಿಕ್ಷೆ ವಿಧಿಸಿಕೊಳ್ಳುತ್ತಿದ್ದರು, ವ್ಯಕ್ತಿಯು ತಮ್ಮಲ್ಲಿರುವ ಆತ್ಮಬಲವನ್ನುವನ್ನು ವೃದ್ದಿಸಿಕೊಂಡು ಕ್ಷಮಾಗುಣ ಮತು ಸಹನೆಯನ್ನು ಬೆಳಸಿಕೊಳ್ಳುವ ಮೂಲಕ ಹಿಂಸೆಯನ್ನು ತಡೆಗಟ್ಟಲು ಸಾಧ್ಯ ಎಂಬುದನ್ನು ಮಹಾತ್ಮ ಗಾಂಧೀ ನಂಬಿದ್ದರು ಎಂದು ಹೇಳಿದರು.

ವಿವಿಧ ಕಾರಣಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಂಡು ಜೈಲುವಾಸಿಗಳಾಗಿರುವವರು ತಮ್ಮ ತಪ್ಪಿನ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹಾಗೂ ಮನಃ ಪರಿವರ್ತನೆ ಮಾಡಿಕೊಳ್ಳಲು ಜೈಲುಗಳು ಸಹಕಾರಿ, ಜೈಲುಗಳಲ್ಲಿದ್ದವರೇ ಮನಃ ಪರಿವರ್ತನೆ ಮಾಡಿಕೊಂಡು ಮಹಾನ್ ವ್ಯಕ್ತಿಗಳಾಗಿ ರೂಪುಗೊಂಡಿದ್ದಾರೆ, ಹಿಂಸೆಯನ್ನು ಅಹಿಂಸೆಯ ಮೂಲಕ ಪ್ರತಿಭಟಿಸಿ, ಜೈಲುಗಳಲ್ಲಿರುವ ಸಮಯದಲ್ಲಿ ತಮ್ಮನ್ನು ತಾವು ಬದಲಾಯಿಸಿಕೊಳ್ಳುವ ಮೂಲಕ, ಸಮಾಜ ತನ್ನ ಬಗ್ಗೆ ಇಟ್ಟುಕೊಂಡಿರುವ ಚಿತ್ರಣವನ್ನು ಬದಲಾಯಿಸಿ, ನಿಮ್ಮ ವರ್ತನೆಗಳಲ್ಲಿ ಬದಲಾವಣೆ ಮಾಡಿಕೊಳ್ಳಿ, ಹುಳು ಬಣ್ಣದ ಚಿಟ್ಟೆಯಾಗಿ ಪರಿವರ್ತನೆಯಗುವ ರೀತಿಯಲ್ಲಿ, ಪರಿವರ್ತನೆ ಹೊಂದಿ, ಹೊಸ ಜೀವನ ಆರಂಭಿಸುವ ಆಲೋಚನೆ ರೂಢಿಸಿಕೊಳ್ಳಿ, ನಿಮ್ಮ ಒಂದು ಮುಗುಳ್ನಗು, ತಾಳ್ಮೆ ಪ್ರೀತಿಪೂರ್ವಕ ಮಾತು ಎದುರಾಳಿಯ ಮನದಲ್ಲಿ ನಿಮ್ಮ ಬಗ್ಗೆ ಗೌರವ ಮೂಡುವಂತೆ ವ್ಯಕ್ತಿತ್ವ ರೂಪಿಸಿಕೊಳ್ಳಿ, ನಿಮ್ಮ ಕೋಪವನ್ನು ನಿಮ್ಮ ವಿರುದ್ದದ ಅನ್ಯಾಯ ಪ್ರತಿಭಟಿಸಲು ಮಾತ್ರ ಬಳಿಸಿಕೊಳ್ಳಿ, ಇನ್ನೊಬ್ಬರಿಗೆ ಹಾನಿ ಮಾಡುವ ರೀತಿಯಲ್ಲಿ ಕೋಪ ಪ್ರದರ್ಶಿಸಬೇಡಿ , ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಡಾ. ರಾಮದಾಸ್ ಪ್ರಭು ತಿಳಿಸಿದರು.

 


Spread the love

Exit mobile version