ಹಿರಿಯಡ್ಕ : ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂವರ ಬಂಧನ
ಉಡುಪಿ: ಬೆಳ್ಳಂಪಳ್ಳಿ ಗ್ರಾಮದ ಪುಣ್ಚೂರು ಹೊಳೆಯಿಂದ ಅಕ್ಟೋಬರ್ 4ರಂದು ಸಂಜೆ ವೇಳೆ ಟೆಂಪೊದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಮೂವರನ್ನು ಹಿರಿಯಡ್ಕ ಪೊಲೀಸರು ಬಂಧಿಸಿದ್ದಾರೆ,
ಬಂಧಿತರನ್ನು ಬೆಳ್ಳಂಪಳ್ಳಿ ಗ್ರಾಮದ ಮಧುಕರ ಪೂಜಾರಿ, ನಾಗರಾಜ ಶೆಟ್ಟಿ ಮತ್ತು ಗಿರೀಶ್ ಶೆಟ್ಟಿ ಎಂದು ಗುರುತಿಸಲಾಗಿದೆ.
ರಾಘವೇಂದ್ರ ಸಿ, ಪ್ರಭಾರ ಪೊಲೀಸ್ ಉಪನಿರೀಕ್ಷಕರು ಹಿರಿಯಡ್ಕ ಪೊಲೀಸ್ ಠಾಣೆ ಇವರಿಗೆ ಚೆರ್ಕಾಡಿ , ಪೇತ್ರಿ ರೌಂಡ್ಸ್ ಕರ್ತವ್ಯದಲ್ಲಿ ರುವಾಗ ಉಡುಪಿ ತಾಲೂಕು ಬೆಳ್ಳಂಪಳ್ಳಿ ಗ್ರಾಮದ ಪುಣ್ಚೂರು ಹೊಳೆಯಿಂದ ಅಕ್ರಮವಾಗಿ ಮರಳನ್ನು ತೆಗೆದು 407 ಟೆಂಪೊದಲ್ಲಿ ತುಂಬಿಸಿ ಸಾಗಾಟ ಮಾಡುವ ಸಿದ್ದತೆಯಲ್ಲಿದ್ದಾರೆ ಎಂದು ದೊರೆತ ಮಾಹಿತಿಯಂತೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಸ್ಥಳದಲ್ಲಿ ಮರಳು ಹಾಗೂ ಟೆಂಪೊವನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮರಳಿನ ಬೆಲೆ ರೂ 5000 ಹಾಗೂ 407 ಟೆಂಪೊ ಬೆಲೆ ರೂ. 150000 ಆಗಿರುತ್ತದೆ.
ಈ ಕುರಿತು ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.