Home Mangalorean News Kannada News ಹಿರಿಯ ನಾಗರಿಕರಿಗೆ ನಿರ್ಲಕ್ಷ ಬೇಡ- ರಘುಪತಿ ಭಟ್

ಹಿರಿಯ ನಾಗರಿಕರಿಗೆ ನಿರ್ಲಕ್ಷ ಬೇಡ- ರಘುಪತಿ ಭಟ್

Spread the love

ಹಿರಿಯ ನಾಗರಿಕರಿಗೆ ನಿರ್ಲಕ್ಷ ಬೇಡ- ರಘುಪತಿ ಭಟ್

ಉಡುಪಿ: ಹಿರಿಯ ನಾಗರೀಕರನ್ನು ನಿರ್ಲಕ್ಷಿಸುವವರಿಗೆ ಸಮಾಜದಲ್ಲಿ ಗೌರವ ನೀಡದ ವಾತಾವರಣ ಸೃಷ್ಠಿಯಾಗಬೇಕು, ಆ ಮೂಲಕ ಹಿರಿಯ ನಾಗರೀಕರನ್ನು ಅಲಕ್ಷಿಸುವವರಿಗೆ ಎಚ್ಚರಿಕೆ ನೀಡಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಅವರು ಸೋಮವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರು ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಆರೋಗ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲೆ, ವಕೀಲರ ಸಂಘ (ರಿ.) ಉಡುಪಿ, ಹಿರಿಯ ನಾಗರೀಕರ ಸಂಸ್ಥೆಗಳು ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ (ರಿ), ವೃದ್ದಾಶ್ರಮಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ, ಎಂಜಿಎಂನ ರವೀಂದ್ರ ಮಂಟಪದಲ್ಲಿ ನಡೆದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರಿಯ ನಾಗರೀಕರ ರಕ್ಷಣೆಗೆ ಹಲವು ಕಾನೂನುಗಳಿಗೆ, ಸರಕಾರ ವಿವಿಧ ಸೌಲಭ್ಯ ನೀಡುತ್ತಿದೆ ಆದರೆ ವೃದ್ದರು ತಮ್ಮ ಮಕ್ಕಳಿಂದ ಬಯಸುವುದು ಪ್ರೀತಿ ಮತ್ತು ಗೌರವ ಮಾತ್ರ ಆದರೆ ಮಕ್ಕಳು ಹಿರಿಯ ನಾಗರೀಕರನ್ನು ನಿರ್ಲಕ್ಷಿಸುತ್ತಾರೆ, ಹಿರಿಯರನ್ನು ಸಲಹುವುದು ಪ್ರತಿ ಮಕ್ಕಳ ಜವಾಬ್ದಾರಿ ಆಗಿದೆ, ಹಿರಿಯರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಸಮಾಜದಲ್ಲಿ ಗೌರವ ನೀಡದ ವಾತಾವರಣ ಸೃಷ್ಠಿಯಾಗಬೇಕು ಎಂದು ಶಾಸಕರು ಹೇಳಿದರು.

ಹಿರಿಯ ನಾಗರೀಕರನ್ನು ವೃದ್ದಾಶ್ರಮಗಳಿಗೆ ಸೇರಿಸಲಾಗುತ್ತಿದೆ, ವೃದ್ದಾಶ್ರಮಗಳು ಭಾರತೀಯರ ಸಂಸ್ಕಾರವಲ್ಲ, ಈ ಕುರಿತಂತೆ ಸಮಾಜದಲ್ಲಿ ಜನಜಾಗೃತಿ ಮೂಡಿಸಬೇಕಿದೆ, ಉಡುಪಿಯಲ್ಲಿ ಹಿರಿಯ ನಾಗರೀಕರಿಗೆ ಡೇ ಕೇರ್ ಆರಂಭಿಸಲು , ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಅಗತ್ಯ ವ್ಯವಸ್ಥೆಯನ್ನು ಶೀೀಘ್ರದಲ್ಲಿ ಒಗದಿಸಲಾಗುವುದು, ಉಡುಪಿ ನಗರಸಭೆಯಲ್ಲಿ ಹಿರಿಯ ನಾಗರೀಕರಿಗೆ ಹೆಲ್ಪ್ ಡೆಸ್ಕ್ ಮತ್ತು ಪ್ರತ್ಯೇಕ ಕೌಂಟರ್ ತೆರೆಯುವುದರ ಮೂಲಕ , ನಗರಸಭೆಯ ಎಲ್ಲಾ ಸೇವೆಗಳನ್ನು ಅಲ್ಲಿ ನೀಡಲಾಗುವುದು ಎಂದು ಶಾಸಕರು ಹೇಳಿದರು. ಕಾರ್ಯಕ್ರಮದಲ್ಲಿ ಶತಾಯುಷಿ ಗುರುವಾದ ಕೊರಗ ಅವರನ್ನು ಸನ್ಮಾನಿಸಲಾಯಿತು.

ವಿಶ್ವ ಹಿರಿಯ ನಾಗರೀಕ ದಿನಾಚರಣೆ ಅಂಗವಾಗಿ ನಡೆದ ಸಾಂಸ್ಕøತಿಕ ಮತ್ತು ಕ್ರೀಡಾ ಸ್ಪರ್ದೇಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಹಿರಿಯ ನಾಗರೀಕರಿಗಾಗಿ ಉಚಿತ ನೇತ್ರ ಮತ್ತು ಆರೋಗ್ಯ ಶಿಬಿರ ಕಾರ್ಯಕ್ರಮ ಆಯೋಜಿಸಲಾಗಿದ್ದಿತು. ನೇತ್ರದಾನಕ್ಕೆ ನೊಂದಾಯಿಸಿದ 3 ಹಿರಿಯ ನಾಗರೀಕರಿಗೆ ಕಾರ್ಡ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ, ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಹಿರಿಯ ನಾಗರೀಕರಕ ಒಕ್ಕೂಟದ ಅಧ್ಯಕ್ಷ ಎ.ಪಿ.ಕೊಡಂಚ, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಜಿ.ಪಂ. ಸಿಇಓ ಶಿವಾನಂದ ಕಾಪಶಿ, ಎಎಸ್ಪಿ ಕುಮಾರ ಚಂದ್ರ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್, ಉಡುಪಿ ಹಿರಿಯ ನಾಗರೀಕರ ಸಂಸ್ಥೆಯ ಸಿ.ಎಸ್.ರಾವ್, ಕಾರ್ಕಳ ಹಿರಿಯ ನಾಗರೀಕರ ಸಂಸ್ಥೆಯ ರಾಮಕೃಷ್ಣ, ಬೈಂದೂರು ಹಿರಿಯ ನಾಗರೀಕರ ಸಂಸ್ಥೆಯ ವಸಂತ ಹೆಗ್ಡೆ, ಹಿರಿಯ ನಾಗರೀಕರ ಕಾಯ್ದೆ ಅನುಷ್ಠಾನ ಸಮಿತಿಯ ಲಕ್ಷ್ಮೀ ಬಾಯಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ವಿಕಲ ಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ನಿರಂಜನ ಭಟ್ ಸ್ವಾಗತಿಸಿದರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕಿ ಗ್ರೇಶಿ ಗೊನ್ಸಾಲ್ವಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.


Spread the love

Exit mobile version