ಹಿರಿಯ ನ್ಯಾಯವಾದಿ ಯೇಣಗುಡ್ಡೆ ಚಂದ್ರಶೇಖರ ಹೆಗ್ಡೆನಿಧನ
ಉಡುಪಿ: ಉಡುಪಿಯ ಹಿರಿಯ ನ್ಯಾಯವಾದಿ ಯೇಣಗುಡ್ಡೆ ಚಂದ್ರಶೇಖರ ಹೆಗ್ಡೆಯವರು ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ಸಂಜೆ ನಿಧನ ಹೊಂದಿದರು.
ಉಡುಪಿ ನ್ಯಾಯಾಲಯಗಳಲ್ಲಿ 50 ವರ್ಷಕ್ಕೂ ಮಿಕ್ಕಿ ಸಿವಿಲ್ ವಕೀಲರಾಗಿ ಕಾರ್ಯನಿರ್ವಹಿಸಿದ್ದು, ವಿವಿಧ ರಾಷ್ಟ್ರೀಯ ಬ್ಯಾಂಕ್, ಮೆಸ್ಕಾಂ, ಕೆ.ಎಸ್.ಆರ್.ಟಿ.ಸಿ ಸಂಸ್ಥೆಗಳ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿರುತ್ತಾರೆ. ಉಡುಪಿ ನ್ಯಾಯಾಲಯಗಳಲ್ಲಿ ಹಿರಿಯ ಸರಕಾರಿ ವಕೀಲರಾಗಿಯೂ ಸುಮಾರು 20 ವರ್ಷಕ್ಕೂ ಹೆಚ್ಚು ಸಮಯ ಕಾರ್ಯನಿರ್ವಹಿಸಿದ್ದಾರೆ. ತನ್ನ ಸೇವಾವಧಿಯಲ್ಲಿ ಹಲವಾರು ಕಿರಿಯ ವಕೀಲರನ್ನು ತರಬೇತುಗೊಳಿಸಿದ ಇವರು ಅಪಾರ ಜನಾನುರಾಗಿಯಾಗದ್ದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷರಾಗಿ, ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಹಾಗೂ ಟಿ.ಎ.ಪಿ.ಸಿ ಸೊಸೈಟಿಯ ಅಧ್ಯಕ್ಷರಾಗಿಯೂ ಇವರು ಕಾರ್ಯನಿರ್ವಹಿಸಿರುತ್ತಾರೆ. ಇವರ ಅಧ್ಯಕ್ಷತೆಯ ಅವಧಿಯಲ್ಲಿಯೇ ಉಡುಪಿ ಜಿಲ್ಲಾ ನ್ಯಾಯಾಲಯ ಸ್ಥಾಪನೆಯಾಗಿರುತ್ತದೆ.
ಮೃತರು ಪತ್ನಿ, ಮಗಳು, ಅಳಿಯ ಮತ್ತು ಮೊಮ್ಮಕ್ಕಳನ್ನು, ಬಂಧು-ಮಿತ್ರರನ್ನು ಹಾಗೂ ಅಪಾರ ಕಕ್ಷಿಗಾರರನ್ನು ಅಗಲಿರುತ್ತಾರೆ.
ಇವರ ಅಂತ್ಯಕ್ರಿಯೆಯು ಡಿ. 11ರಂದು ಬೆಳಿಗ್ಗೆ 11 ಗಂಟೆಗೆ ಉಡುಪಿಯ ಬೀಡಿನಗುಡ್ಡೆಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.