ಹೆಬ್ರಿ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳ ಶಿಕಾರಿ: ವಿಟ್ಲದ ಇಬ್ಬರ ಸೆರೆ, ಮೂವರು ಪರಾರಿ

Spread the love

ಹೆಬ್ರಿ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳ ಶಿಕಾರಿ: ವಿಟ್ಲದ ಇಬ್ಬರ ಸೆರೆ, ಮೂವರು ಪರಾರಿ

ಹೆಬ್ರಿ: ಹೆಬ್ರಿ ಸಮೀಪ ಅಭಯಾರಣ್ಯದಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಆರೋಪದಲ್ಲಿ ವಿಟ್ಲ ಮೂಲದ ಇಬ್ಬರನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೇರಳದ ಪಾತೂರು ನಿವಾಸಿ ಅಝೀಝ್, ವಿಟ್ಲ ಪಡ್ನೂರು ಗ್ರಾಮದ ಕುಕ್ಕಿಲ ನಿವಾಸಿ ಶಾಹುಲ್ ಹಮೀದ್ ಸಿಕ್ಕಿಬಿದ್ದವರು. ಇವರನ್ನು ಕೋವಿ ಸಹಿತ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೂವರು ಪರಾರಿಯಾಗಿದ್ದಾರೆ.

ಆರೋಪಿಗಳು ಕಬ್ಬಿನಾಲೆ ಅಭಯಾರಣ್ಯದಲ್ಲಿ ಅಳಿವಿನ ಅಂಚಿನಲ್ಲಿರುವ ಬರಿಂಕವನ್ನು ಬೇಟೆಯಾಡಿದ್ದರೆನ್ನಲಾಗಿದೆ. ಈ ವೇಳೆ ಅರಣ್ಯಾಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ತಂಡದಲ್ಲಿದ್ದ ವಿಟ್ಲ ಪಡ್ನೂರು ಗ್ರಾಮದ ಕೊಡಂಗಾಯಿ ನಿವಾಸಿ ಹಮೀದ್ ಯಾನೆ ತಲ್ವಾರ್ ಹಮೀದ್‌ಮತ್ತು ಇನ್ನಿಬ್ಬರು ಪರಾರಿಯಾಗಿದ್ದಾರೆ.

ಆರೋಪಿಗಳಿಂದ ಬೇಟೆಯಾಡಿದ ಬರಿಂಕ ಹಾಗೂ ಅದಕ್ಕೆ ಬಳಸಿದ ಕೋವಿ, ಚೂರಿಗಳು ಹಾಗೂ ಕಾರೊಂದನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.


Spread the love