ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ 3 ತಿಂಗಳು ಪರವಾನಿಗೆ ಅಮಾನತು

OLYMPUS DIGITAL CAMERA
Spread the love

ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ 3 ತಿಂಗಳು ಪರವಾನಿಗೆ ಅಮಾನತು

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನ ಚಾಲನೆ ಮಾಡಿದರೆ 3 ತಿಂಗಳ ಕಾಲ ಪರವಾನಿಗೆ ಅಮಾನತು ಮಾಡಲು ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಕೇಂದ್ರ ಮೋಟಾರು ವಾಹನ ಕಾಯ್ದೆಯ ಪ್ರಕಾರ ದ್ವಿಚಕ್ರ ಸವಾರರು (ಹಿಂಬದಿ ಸವಾರ ಸೇರಿದಂತೆ) ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ.  ಇನ್ನು ಮುಂದೆ ಹೆಲ್ಮೆಟ್ ಧರಿಸದೇ ಸಂಚರಿಸುವ ಎಲ್ಲ ವಾಹನ ಸವಾರರ ವಿರುದ್ಧ ಮೊಟಾರು ವಾಹನಗಳ ಕಾಯ್ದೆ 1988ರ ಕಲಂ 194-ಟಿ ಅನ್ವಯ ದಂಡ ವಸೂಲಾತಿಯೊಂದಿಗೆ ವಾಹನ ಸವಾರರ ಚಾಲನಾ ಪರವಾನಿಗೆಯನ್ನು ಕನಿಷ್ಠ ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಲು ತಕ್ಷಣದಿಂದ ಜಾರಿಗೊಳಿಸಿ ರಾಜ್ಯ ಸರಕಾರ ಈ ಆದೇಶ ಮಾಡಿದೆ.

ಅದೇ ರೀತಿ, ವಿಮೆ (ಇನ್ಶೂರೆನ್ಸ್) ಇಲ್ಲದೆ ವಾಹನ ಚಲಾಯಿಸುವುವರಿಗೆ 2 ಸಾವಿರ ರೂ.ಗಳ ದಂಡ. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುವರಿಗೆ 1 ಸಾವಿರ ರೂ.ಗಳ ದಂಡ ಮತ್ತು 3 ತಿಂಗಳ ಪರವಾನಿಗೆಯನ್ನು ಅಮಾನತುಗೊಳಿಸಲಾಗುತ್ತದೆ.

ಅಲ್ಲದೆ, 2019ರಲ್ಲಿ ತಿದ್ದುಪಡಿಯಾಗಿ ಜಾರಿಗೆ ಬಂದ ರಾಷ್ಟ್ರೀಯ ಮೋಟಾರು ವಾಹನಗಳ ಕಾಯ್ದೆಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಆದೇಶದ ಪತ್ರದಲ್ಲಿ ತಿಳಿಸಲಾಗಿದೆ.


Spread the love