ಹೊರ ಜಿಲ್ಲೆ, ರಾಜ್ಯದಿಂದ ಕೊರೋನಾ ಆಂತಕ ; ಉಡುಪಿ ಜಿಲ್ಲೆಯ ಎಲ್ಲಾ ಗಡಿ ಬಂದ್ ; ಡಿಸಿ ಜಗದೀಶ್
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಕೊರೋನಾ ಆತಂಕ ದೂರವಾಗಿದ್ದರೂ ಸಹ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಇಲ್ಲಿಗೆ ಬರುವವರಿಂದ ಕರೋನಾ ಹರಡುವ ಆತಂಕ ಇದ್ದೇ ಇದೆ ಆದ್ದರಿಂದ ಹೊರ ರಾಜ್ಯದವರು ಮತ್ತು ಜಿಲ್ಲೆಯವರನ್ನು ಗಡಿಯೊಳಗೆ ಬಿಟ್ಟುಕೊಳ್ಳುವುದಿಲ್ಲ . ಈಗಾಗಲೇ ಗಡಿಯ ಜಿಲ್ಲೆಯ ಗಡಿಗಳನ್ನು ಸೀಲ್ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದ್ದಾರೆ.
ಅವರು ಶುಕ್ರವಾರ ವೀಡಿಯೋ ಸಂದೇಶ ಬಿಡುಗಡೆ ಮಾಡಿದ್ದು ಉಡುಪಿ ಜಿಲ್ಲೆಯಲ್ಲಿ ಈತನಕ ಮೂರು ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ಕರೋನಾ ಪಾಸಿಟಿವ್ ಆದವರಿಗೆ ಚಿಕಿತ್ಸೆ ನೀಡಿದ್ದು, ಕೊರೋನಾ ಪಾಸಿಟಿವ್ ಇದ್ದ ಮೂವರು ಪೂರ್ಣ ಗುಣಮುಖರಾಗಿದ್ದಾರೆ. ಗುಣಮುಖರಾದವರನ್ನು ಸದ್ಯದಲ್ಲೇ ಡಿಸ್ ಚಾರ್ಜ್ ಮಾಡಲಿದ್ದೇವೆ. ಕೊರೊನಾ ಪಾಸಿಟಿವ್ ಬಂದವರ ಪ್ರೈಮರಿ ಮತ್ತು ಸೆಕೆಂಡರಿ ಕಾಂಟಾಕ್ಟ್ ಇದ್ದವರ ವರದಿಯೂ ಬಂದಿದ್ದು, ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿದೆ ಎಂದರು.
ಸದ್ಯಕ್ಕೆ ಉಡುಪಿ ಜಿಲ್ಲೆಯ ಒಳಗಡೆ ಕೊರೋನಾ ಸೋಂಕು ಹರಡುವ ಸಾಧ್ಯತೆ ಕಡಿಮೆಯಿದ್ದು ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಜನರು ಉಡುಪಿ ಜಿಲ್ಲೆಗೆ ಪ್ರವೇಶಿಸೊ ಮಾಹಿತಿ ಲಭ್ಯವಾಗಿದೆ. ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಸಂಪೂರ್ಣವಾಗಿ ಸೀಲ್ ಮಾಡಲಾಗಿದ್ದು ಯಾರಿಗೂ ಕೂಡ ಜಿಲ್ಲೆಯ ಒಳಗೆ ಪ್ರವೇಶಿಸಲು, ಅಲ್ಲದೆ ಯಾರಿಗೂ ಹೊರ ಜಿಲ್ಲೆ ರಾಜ್ಯಗಳಿಗೆ ಹೋಗಲು ಅವಕಾಶವಿಲ್ಲ ಎಂದು ಅವರು ಹೇಳಿದ್ದಾರೆ.