ಹೊಸಂಗಡಿ: ಹೊನಲು ಬೆಳಕಿನ ಖೋಖೋ ಪಂದ್ಯಾಟ ಹಾಗೂ ತಾಲ್ಲೋಕು ಖೋಖೋ ಪೆಡೇರೇಶನ್ ಉದ್ಘಾಟನೆ
ಕುಂದಾಪುರ: ಉಡುಪಿ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಎಂಬಂತೆ ತಾಲ್ಲೋಕಿನ ‘ಹೊಸಂಗಡಿ ಗೆಳೆಯರ ಬಳಗ’ದ ನೇತೃತ್ವದಲ್ಲಿ ಹೊನಲು ಬೆಳಕಿನ ಮ್ಯಾಟ್ ಮಾದರಿಯ ಖೋಖೋ ಪಂದ್ಯಾಟ ‘ಹೊಸಂಗಡಿ ಖೋಖೋ ಪ್ರೀಮಿಯರ್ ಲೀಗ್ 2025’ ಹೊಸಂಗಡಿ ಪ್ರೌಢಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು .
ಕುಂದಾಪುರ ಯುವಜನ ಸೇವಾ ಕ್ರೀಡಾ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿಯವರು ದೀಪ ಬೆಳಗಿಸಿ ಪಂದ್ಯಾಟವನ್ನು ಉದ್ಘಾಟಿಸಿದರು.ಸಭಾಧ್ಯಕ್ಷತೆ ಯನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾಂತಿ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೂಸಂಗಡಿ ಇಲ್ಲಿನ ನಿವೃತ್ತ ದೈಹಿಕ ಶಿಕ್ಷಕರಾದ ಸುಭಾಷ್ ಚಂದ್ರ ಶೆಟ್ಟಿ ,ತೀರ್ಥಹಳ್ಳಿ ಸ.ಪ.ಪೂ.ಕಾಲೇಜಿನ ಉಪನ್ಯಾಸಕರಾದ ಎನ್ ಜಿ ಸ್ವಾಮಿ ,ಸರ್ಕಾರಿ ಪ್ರೌಢಶಾಲೆ ಹೊಸಂಗಡಿಯ ಮುಖ್ಯ ಶಿಕ್ಷಕರಾದ ಗುರುಪ್ರಸಾದ್ ಉಡುಪಿ ಜಿಲ್ಲಾ ಕೋಕೋ ಫೆಡರೇಶನ್ ನ ಕಾರ್ಯದರ್ಶಿಯಾದ ವಿನಯ್ ದೇವಾಡಿಗ, ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ದಿವಾಕರ್ ಶೆಟ್ಟಿ, ಪಂದ್ಯಾಟದ ಮುಖ್ಯ ರೂವಾರಿಗಳಾದ ಚೇತನ್ ಯಾದವ್,ಉಲ್ಲಾಸ್ ಶೆಟ್ಟಿ,ಪ್ರದೀಪ್ ಆಚಾರಿ ,ಸುಜಯ್ ಗೊಲ್ಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ್ ಪೂಜಾರಿ ಶುಭ ಹಾರೈಸಿದರು
ಇದೇ ಸಂದರ್ಭದಲ್ಲಿ ‘ಕುಂದಾಪುರ ತಾಲೂಕು ಖೋಖೋ ಫೆಡರೇಷನ್’ ಉದ್ಘಾಟನೆಯನ್ನು ನಡೆಸಲಾಯಿತು.ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ನಡೆದ ಈ ಪಂದ್ಯಾ ಕೂಟದಲ್ಲಿ ಕುಂದಾಪುರ ಬೈಂದೂರು, ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಿಂದ ವಿವಿಧ ತಂಡಗಳು ಭಾಗವಹಿಸಿದ್ದವು ಪುರುಷರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ‘ತೀರ್ಥಹಳ್ಳಿ ಪ್ರೆಂಡ್ಸ್ ‘ ತಂಡ ಪಡೆದರೇ ದ್ವಿತೀಯ ಬಹುಮಾನವನ್ನು ‘ಉಪ್ಪುಂದ ಪ್ರೆಂಡ್ಸ್ ‘ತಂಡದ ಪಾಲಾಯಿತು.’ಉಲ್ಲಾಸ್ ಪ್ರೆಂಡ್ಸ್ ಹೊಸಂಗಡಿ’ತಂಡ ತೃತೀಯ ಬಹುಮಾನಕ್ಕೆ ತೃಪ್ತಿ ಪಡೆದುಕೊಂಡರು.
ರಂಜಿತ್ (ಉಪ್ಪುಂದ ಪ್ರೆಂಡ್ಸ್ ತಂಡ ) ಉತ್ತಮ ಚೇಸರ್ ಬಹುಮಾನಕ್ಕೆ ಭಾಜನರಾದರೇ, ಉತ್ತಮ ಡಿಫೆಂಡರ್ ಬಹುಮಾನವನ್ನು ಸುದೀಪ್ (ತೀರ್ಥಹಳ್ಳಿ ಪ್ರೆಂಡ್ಸ್ ತಂಡ) ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ‘ಸಿದ್ದೇಶ್ವರ ಗೊಳಿಹೊಳೆ’ ತಂಡದವರು ಪಡೆದುಕೊಂಡರೇ, ದ್ವಿತೀಯ ಬಹುಮಾನವನ್ನು ‘ಎಸ್ ಎಂ ಪಿ ಎಸ್ ಕೊಲ್ಲೂರು ಎ ‘ತಂಡದವರು ಪಡೆದರೇ, ಉತ್ತಮ ತಂಡ ಪ್ರಶಸ್ತಿಯನ್ನು ‘ಎಸ್ಎಂಪಿಎಸ್ ಕೊಲ್ಲೂರು ಬಿ’ ತಂಡದವರ ಪಾಲಾಯಿತು. ಉತ್ತಮ ಚೇಸರ್ ಪ್ರಶಸ್ತಿಯ ನ್ನು ಎಸ್ ಎಂ ಪಿ ಎಸ್ ಕೊಲ್ಲೂರು ತಂಡದ ದೀಪ್ತಿ ಮೂಡಿಗೇರಿಸಿಕೊಂಡರೇ ,ಉತ್ತಮ ಡಿಪೆಂಡರಾಗಿ ಗೋಳಿಹೊಳೆ ಸಿದ್ದೇಶ್ವರ ತಂಡದ ಶಶಿಕಲಾರ ಪಾಲಾಯಿತು .
ಹೊಸಂಗಡಿ ಯಲ್ಲಿ ಸೇವೆ ಸಲ್ಲಿಸಿದ ದೈಹಿಕ ಶಿಕ್ಷಕರುಗಳಾ ದ ಸುಕುಮಾರ ಶೆಟ್ಟಿ, ಎನ್ ಜಿ ಸ್ವಾಮಿ, ಹಾಗೂ ಸುಭಾಷ್ಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕ್ರೀಡಾಕೂಟ ಯಶಸ್ವೀಯಾಗಿ ನಡೆಯಲು ಸಹಕರಿಸಿದವರೆಲ್ಲರಿಗೂ ಗೌರವ ಸ್ಪರಣಿಕೆಯನ್ನ ನೀಡಿ ಗೌರವಿಸಲಾಯಿತು.
ಪಂದ್ಯಾಟದ ನಿರ್ಣಾಯಕರಾಗಿ ಉಡುಪಿ ಜಿಲ್ಲಾ ಕೋಕೋ ಪೆಡೇರೇಶನ್ ಕಾರ್ಯದರ್ಶಿಯಾದ ವಿನಯ್ ದೇವಾಡಿಗ, ಆಳ್ವಾಸ್ ಕಾಲೇಜು ಮೂಡಬಿದ್ರೆ ಉಪನ್ಯಾಸಕರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕೋಕೋ ತರಬೇತಿದಾರರಾದ ಪ್ರದೀಪ್ , ಸ.ಪ.ಪೊ ಕಾಲೇಜು ಕೋಟ ಇದರ ಉಪನ್ಯಾಸಕರು ಹಾಗೂ ಕೋ,ಕೋ ಕ್ರೀಡಾ ರಾಜ್ಯ ರೆಫರಿಯಾದ ವಿಶ್ವನಾಥ್ , ಚೈತನ್ಯ ಕಾಲೇಜು ಬೆಂಗಳೂರು ಇಲ್ಲಿನ ದೈಹಿಕ ಶಿಕ್ಷಕರು,ರಾಜ್ಯ ಕೋಕೋ ಫೆಡರೇಶನ್ ಸದಸ್ಯರೂ ಆದ ಮಂಜುನಾಥ್, ಮುಖ್ಯ ಪಾತ್ರ ವಹಿಸಿದ್ದರು.
ಕಿರಣ್ ಗೊಲ್ಲ ಭದ್ರಾಪುರ ಪ್ರಾಸ್ತಾವಿಕ ಭಾಷಣ ಮಾಡಿದರು.ಶಿವಕುಮಾರ್ ಬಾಳೆಜೆಡ್ಡು ಕಾರ್ಯಕ್ರಮ ನಿರ್ವಹಿಸಿದರು.ರವೀಶ್ ಕೆಪ್ಪೆಗೊಂಡ ಸ್ವಾಗತಿಸಿ ವಂದಿಸಿದರು.