ಹೊಸ ವರ್ಷ, ವರ್ಷಾಂತ್ಯದ ರಜೆ ಹಿನ್ನೆಲೆ: ಉಡುಪಿಯಲ್ಲಿ ವಾಹನ ಸಂಚಾರದಲ್ಲಿ ಮಾರ್ಪಾಡು
ಉಡುಪಿ: ಹೊಸ ವರ್ಷ ಮತ್ತು ವರ್ಷಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದ್ದು, ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಈ ಕೆಳಕಂಡ ಮಾರ್ಗಗಳಲ್ಲಿ ಮಾರ್ಪಾಡು ಮಾಡಿ ಜಿಲ್ಲಾ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
- ಮಣಿಪಾಲ ಕಡೆಯಿಂದ ಬರುವ ಸರಕು ಲಘು ವಾಹನ, ಮಂಗಳೂರು, ಕಾಪು ಕಡೆ ಹೋಗುವವರು ಶಾರದಾ ಕಲ್ಯಾಣ ಮಂಟಪದ ಕಡೆಯಿಂದ ಚಲಿಸುವುದು.
ಕಲ್ಸಂಕ ವೃತ್ತ
- ಗುಂಡಿಬೈಲು ಕಡೆಯಿಂದ ಬರುವ ವಾಹನಗಳು ಕಡಿಯಾಳಿ ಎದುರು ತಿರುಗಿಸಿಕೊಂಡು ಕೃಷ್ಣಮಠ ಮತ್ತು ಉಡುಪಿ ಕಡೆ ಬರುವುದು.
- ಮಣಿಪಾಲ ಕಡೆಯಿಂದ ಬಂದು ಗುಂಡಿಬೈಲು ಕಡೆ ಹೋಗುವವರು ಸಿಟಿ ಬಸ್ಸು ನಿಲ್ದಾಣದ ಹತ್ತಿರ ತಿರುಗಿಸಿಕೊಂಡು ಬರುವುದು.
ಕರಾವಳಿ ಜಂಕ್ಷನ್
- ಮಲ್ಪೆಯಿಂದ ಬರುವವರು ಕರಾವಳಿಗೆ ಬಂದು ಎಡಕ್ಕೆ ತಿರುಗಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ನಿಟ್ಟೂರು(ಆಭರಣ ಮೋಟರ್ಸ್ ಎದುರಿಗೆ ಯೂ ಟರ್ನ್ ಮಾಡಿಕೊಂಡು ನಗರದ ಕಡೆ ಬರುವುದು.
- ಮಂಗಳೂರು ಕಡೆಯಿಂದ ಬರುವವರು ಮಲ್ಪೆ ಹೋಗುವವರನ್ನು ಹೊರತುಪಡಿಸಿ ಉಳಿದವರೆಲ್ಲರೂ ನಿಟ್ಟೂರು (ಆಭರಣ ಮೋಟರ್ಸ್) ಎದುರು ತಿರುಗಿಸಿ ಉಡುಪಿಗೆ ಬರುವುದು.
ಮಲ್ಪೆ
- ಮಲ್ಪೆ ಬೀಚ್ ಕಡೆಯಿಂದ ಬರುವವರು ಬಲರಾಮ ಸರ್ಕಲನಿಂದ ಹೊರಟು ಹೂಡೆ, ನೇಜಾರು ಮಾರ್ಗ ಬಳಸಿ ಸಂತೆಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ ಸೇರುವುದು.
ಸಾರ್ವಜನಿಕರು ಡಿಸೆಂಬರ್ 28 ರಿಂದ 2025 ಜನವರಿ 1 ರ ಸಂಜೆ 4.00 ಗಂಟೆಯಿಂದ ರಾತ್ರಿ 9.00 ಗಂಟೆಯ ವರೆಗೆ ಈ ನಿಯಮ ಜಾರಿಯಲ್ಲಿರುತ್ತದೆ. ಸೂಚಿಸಿದ ಮಾರ್ಗಗಳಲ್ಲಿ ಚಲಿಸಿ ಪೊಲೀಸರೊಂದಿಗೆ ಸಹಕರಿಸಲು ಕೋರಿದೆ.