ಅಂಡರ್‍ಗ್ರ್ಯಾಜುವೇಟ್  ಸರ್ಜರಿ ಕ್ವಿಜ್  2018

Spread the love

ಅಂಡರ್‍ಗ್ರ್ಯಾಜುವೇಟ್ (ಪದವಿ ಪೂರ್ವ) ಸರ್ಜರಿ ಕ್ವಿಜ್ (ರಸಪ್ರಶ್ನೆ) 2018

ಮಂಗಳೂರು: ಫಾದರ್ ಮುಲ್ಲರ್ ಮೆಡಿಕಲ್‍ಕಾಲೇಜಿನಜನರಲ್ ಸರ್ಜರಿ ವಿಭಾಗವುಅಂಡರ್‍ಗ್ರ್ಯಾಜುಯೆಟ್ (ಪದವಿ ಪೂರ್ವ ) ಸರ್ಜರಿಕ್ವಿಜ್ (ರಸಪ್ರಶ್ನೆ) 2018ಅನ್ನು ದಿನಾಂಕ 24/11/2018 ರಂದುಜ್ಞಾನಕೇಂದ್ರ ,ಎ.ವಿ. ಸಭಾಂಗಣದಲ್ಲಿ ನೆರವೇರಿಸಿತು.

ಮಂಗಳೂರು ಹಾಗು ಸುತ್ತ ಮುತ್ತಲಿನ ಏಳು ವೈದ್ಯಕೀಯಕಾಲೇಜುಗಳ  ಎಂ.ಬಿ.ಬಿ.ಎಸ್  ವಿದ್ಯಾರ್ಥಿಗಳ 35 ತಂಡಗಳು ರಸ ಪ್ರಶ್ನೆಯಲ್ಲಿ ಭಾಗವಹಿಸಿದ್ದರು.ಕಾರ್ಯಕ್ರಮವು ದೀಪ ಬೆಳಗಿಸುವ ಮೂಲಕ ಆರಂಭವಾಯಿತು. ಡಾ.ಲಿಯೋ ಫ್ರಾನ್ಸಿಸ್‍ತಾವ್ಹರೋ (ಆಡಿ ಐeo ಈಡಿಚಿಟಿಛಿis ಖಿಚಿuಡಿo) ,ವಿಭಾಗದ ಮುಖ್ಯಸ್ಥರು ಹಾಗು ಪ್ರಾಧ್ಯಾಪಕರು ಸ್ವಾಗಾತಾ ಭಾಷಣ ಮಾಡಿದರು. ಫಾದರ್ ಮುಲ್ಲರ್ ಮೆಡಿಕಲ್‍ಕಾಲೇಜಿನಡೀನ್‍ಡಾ.ಜಯಪ್ರಕಾಶ್ ಆಳ್ವರವರು ಸ್ಪರ್ಧಾಥಿಗಳನ್ನು ಅಭಿನಂದಿಸಿ ,ವಿಭಾಗದ ಭೋದನಾ ಸದಸ್ಯರನ್ನು ಶ್ಲಾಘಿಸಿದರು.

ಫಾರುಡಾಲ್ಫ್‍ರವಿ ಡೇಸಾ ,ಫಾದರ್ ಮುಲ್ಲರ್‍ಆಸ್ಪತ್ರೆಯ ಆಡಳಿತಾಧಿಕಾರಿಯವರು ಅಧ್ಯಕ್ಷತೆ ವಹಿಸಿದ್ದರು.

ರಸಪ್ರಶ್ನೆಯು ಪ್ರಾರ್ಥಮಿಕಆಯ್ಕೆಯ ಸುತ್ತನ್ನು ಒಳಗೊಂಡಿತು.ಇದರಲ್ಲಿ ಆಯ್ಕೆಯಾದಐದುಉತ್ತಮ ತಂಡಗಳೊಂದಿಗೆ ಅಂತಿಮರಸಪ್ರಶ್ನೆಯಲ್ಲಿಐದು ಸುತ್ತುಗಳ ಪ್ರಶ್ನೆಗಳಿದ್ದವು.ಕ್ರಮವಾಗಿ ಶಸ್ತ್ರಚಿಕಿತ್ಸಾ ಲಕ್ಷಣ,ಶಸ್ತ್ರಚಿಕಿತ್ಸೆಯ ಉಪಕರಣಗಳ ಅರಿವು,ಕೌನ್ ಬನೇಗಾ ಸರ್ಜನ್,ಸರ್ಜರಿಒಂದುಕಲೆ,ಕ್ಷಿಪ್ರ ಪ್ರಶ್ನೆಗಳು ಗಳನ್ನೊಳಗೊಂಡಿತು.

ಡಾಜಾರ್ಜ್‍ತಾಲಿಯತ್‍ಕ್ವಿಜ್ ಮಾಸ್ಟರ್‍ಆಗಿದ್ದರು.ಡಾಚಿರಾಗ್ ಪಿರೇರಾ ಸಹಕರಿಸಿದರು.ಮಂಗಳೂರಿನ ಕಸ್ತೂರ್ಬಾ ಮೆಡಿಕಲ್‍ಕಾಲೇಜಿನ ಮನೀಶ್ ಶೆಟ್ಟಿ ಮತ್ತು ವಿಖ್ಯಾನ್ ಶೆಟ್ಟಿ ಮೊದಲ ಸ್ಥಾನ, ಫಾದರ್ ಮುಲ್ಲರ್ ಮೆಡಿಕಲ್‍ಕಾಲೇಜಿನ ಶಾಹನವಾಜ್ ಮತ್ತು   ಶಶಾಂಕ್ ಬಂಗೇರ,ಎರಡನೇ ಸ್ಥಾನ,ಹಾಗು ಯೆನಪೋಯ ಮೆಡಿಕಲ್‍ಕಾಲೇಜಿನಕೆ.ಎನ್ .ಸುಹಾಸ್ ಮತ್ತು ಮಾಲಿ ಅಭಿಷೇಕ್‍ರವರು ಮೂರನೇ ಸ್ಥಾನವನ್ನು ಗಳಿಸಿದರು.ಅತ್ಯುತ್ತಮ ತಂಡದ ಹೆಸರು “ಟ್ರಾಮಾಟ್ರೂಪರರ್ಸ್”(ಖಿಡಿಚಿumಚಿ ಖಿಡಿooಠಿeಡಿs),ಶ್ರೀನಿವಾಸ್ ಮೆಡಿಕಲ್‍ಕಾಲೇಜಿನ ಮಹಿಮಾ ಮತ್ತು ಪೂಜಾರವರು ಗಳಿಸಿದರು.ಬಹುಮಾನ ವಿತರಣೆಯನ್ನು ವಿಭಾಗದ ಮುಖ್ಯಸ್ಥರು ಹಾಗೂ ಇತರ ಪ್ರಾಧ್ಯಾಪಕರು ನೆರವೇರಿಸಿದರು.ಡಾ ನಯನ್ ಪಿಂಟೋ,ಸ್ನಾತಕೋತರ ವಿಧ್ಯಾರ್ಥಿಯವರುಕಾರ್ಯಕ್ರಮವನ್ನು ನಿರೂಪಿಸಿದರು.


Spread the love