ಅಂತರಾಜ್ಯ ವಾಹನ ಕಳ್ಳತನ ಮೂವರ ಬಂಧನ

Spread the love

ಅಂತರಾಜ್ಯ ಮೋಟಾರ್ ವಾಹನ ಕಳ್ಳತನ ಮೂವರ ಬಂಧನ

ಮಂಗಳೂರು: ಅಂತರಾಜ್ಯ ಮೋಟಾರ್ ವಾಹನ ಕಳ್ಳತನದ 15 ಪ್ರಕರಣಗಳನ್ನು  ಭೇದಿಸಿ 3 ಜನ ಆರೋಪಿಗಳನ್ನು ಮತ್ತು 20 ಲಕ್ಷ ರೂಪಾಯಿ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ಸ್ವಾದೀನಪಡಿಸಿಕೊಳ್ಳುವಲ್ಲಿ ಉಳ್ಳಾಲ ಪೊಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು  ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಮಂಜೇಶ್ವರ ನಿವಾಸಿ ಶಾಹಿರ್ (23), ಮೊಹಮ್ಮದ್ ಆದೀಲ್ (26), ಅಬ್ದುಲ್ ಮುನಾವರ್ @ ಮುನ್ನ (21) ಎಂದು ಗುರುತಿಸಲಾಗಿದೆ.

ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಈ ಕೆಳಕಂಡ ಪೊಲೀಸ್ ಠಾಣಾ ವ್ಯಾಪ್ತಿಗಳಿಂದ ಬುಲೆಟ್ ಸೇರಿದಂತೆ ಒಟ್ಟು 15 ದ್ವಿಚಕ್ರ  ವಾಹನಗಳನ್ನು ಕಳ್ಳತನ ನಡೆಸಿರುವುದು ಪತ್ತೆಯಾಗಿರುತ್ತದೆ.

  1. ಉಳ್ಳಾಲ ಠಾಣಾ ವ್ಯಾಪ್ತಿಯ 4 ಪ್ರಕರಣಗಳಲ್ಲಿ ಒಟ್ಟು 4 ಬುಲೆಟ್ ಮೋಟಾರ್ ಸೈಕಲ್ ಗಳು.
  2. ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿ 6 ಪ್ರಕರಣಗಳಲ್ಲಿ ಒಟ್ಟು 5 ಬುಲೆಟ್ ಮೋಟಾರ್ ಸೈಕಲ್ ಮತ್ತು 1 ಸ್ಕೂಟರ್
  3. ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿ 2 ಪ್ರಕರಣಗಳಲ್ಲಿ ಒಟ್ಟು 1 ಬುಲೆಟ್ ಮೋಟಾರು ಸೈಕಲ್ ಮತ್ತು 1 ಮೋಟಾರು ಸೈಕಲ್
  4. ಮಂಗಳುರು ಉರ್ವ ಪೊಲಿಸ್ ಠಾಣಾ ವ್ಯಾಪ್ತಿ 2 ಪ್ರಕರಣಗಳಲ್ಲಿ ಒಟ್ಟು 2 ಬುಲೆಟ್ ಮೋಟಾರು ಸೈಕಲ್.
  5. ಮಂಗಳುರು ಪೂರ್ವ ಪೊಲಿಸ್ ಠಾಣಾ ವ್ಯಾಪ್ತಿಯ 1 ಪ್ರಕರಣದಲ್ಲಿ 1 ಮೋಟಾರು ಸೈಕಲ್.

ಪ್ರರಕಣದ ಆರೋಪಿಗಳು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ  ಒಟ್ಟು 15 ಮೋಟಾರ್ ಸೈಕಲ್ ಕಳವು ಪ್ರಕರಣಗಳನ್ನು  ನಡೆಸಿರುತ್ತಾರೆ.  ಆರೋಪಿತರುಗಳು ಕಳ್ಳತನ ನಡೆಸಿರುವ ವಾಹನಗಳ ಅಂದಾಜು ಮೌಲ್ಯ 20 ಲಕ್ಷ ರೂಪಾಯಿ ಆಗಿರುತ್ತದೆ.  ಆರೋಪಿತರುಗಳ ಮೂಲಕ  15 ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳಲ್ಲಿ ಒಟ್ಟು 12 ಬುಲೆಟ್ ಮೋಟಾರ್ ಸೈಕಲ್  ಗಳನ್ನು ಹಾಗೂ 2 ಮೋಟಾರ್ ಸೈಕಲ್ ಮತ್ತು 1 ಸ್ಕೂಟರ್ ದ್ವಿಚಕ್ರ ವಾಹನ ಸೇರಿದಂತೆ 20 ಲಕ್ಷ ರೂಪಾಯಿ ಮೌಲ್ಯದ ಒಟ್ಟು 15 ದ್ವಿ ಚಕ್ರ ವಾಹನಗಳನ್ನು ಸ್ವಾದೀನಪಡಿಸಿಕೊಳ್ಳಲಾಗಿದೆ.

ಪೊಲೀಸ್‌ ಅಯುಕ್ತರಾದ ಟಿ.ಆರ್.ಸುರೇಶ್, ಐ.ಪಿ.ಎಸ್,  ಮಂಗಳೂರು ನಗರ ರವರ ನಿರ್ದೇಶನದಂತೆ, ಹನುಮಂತರಾಯ, ಐ.ಪಿ.ಎಸ್, ಡಿ.ಸಿ.ಪಿ ಕಾನೂನು ಮತ್ತು ಸುವ್ಯವಸ್ಥೆ, ಹಾಗೂ ಉಮಾ ಪ್ರಶಾಂತ್, ಡಿ.ಸಿ.ಪಿ, ಅಪರಾಧ ಮತ್ತು ಸಂಚಾರ, ರವರುಗಳ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್‌ ಅಯುಕ್ತರಾದ ರಾಮರಾವ್‌ ಕೆ ರವರ ಸೂಚನೆಯಂತೆ ಉಳ್ಳಾಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ಗೋಪಿಕೃಷ್ಣ ಕೆ.ಅರ್‌. ಅವರ ನೇತೃತ್ವದಲ್ಲಿ ಠಾಣಾ ಪಿಎಸ್‌ಐ ಗಳಾದ ವಿನಾಯಕ ತೋರಗಲ್‌ ಮತ್ತು ಗುರಪ್ಪ ಕಾಂತಿ, ಹಾಗೂ ಎ.ಎಸ್.ಐ ಗಳಾದ ವಿಜಯರಾಜ್, ಮೋಹನ್.ಕೆ.ವಿ,  ರಾಧಕೃಷ್ಣ ವಳಾಲ್, ವಿಶ್ವನಾಥ ರೈ ಹಾಗೂ ಸಿಬ್ಬಂದಿಗಳಾದ  ದಿನೇಶ್‌ ಹೆಚ್‌ಸಿ, ಸುರೇಶ್  ಹೆಚ್‌ಸಿ, ಜಯಪ್ರಕಾಶ್ ಹೆಚ್.ಸಿ. , ಪ್ರವೀಣ್ ಹೆಚ್.ಸಿ., ಶಾಂತಪ್ಪ ಹೆಚ್.ಸಿ.,  ಪ್ರಶಾಂತ್‌ ಪಿಸಿ,  ಪಿಸಿ ವಾಸುದೇವ, ಪಿಸಿ  ರಂಜಿತ್‌, ಲಿಂಗರಾಜ್‌ ಪಿಸಿ, ಚಿದಾನಂದ ಪಿಸಿ,  ಅಕ್ಬರ್‌ ಪಿಸಿ, ಸುರೇಶ್‌ ಪಿಸಿ  ರವರುಗಳು ಪತ್ತೆ ಕಾರ್ಯದಲ್ಲಿ ಸಹಕರಿಸಿರುತ್ತಾರೆ.


Spread the love