ಅಂತರ್‍ಜಿಲ್ಲಾ ಕ್ರೀಡಾಕೂಟದಲ್ಲಿ “ಸಾನಿಧ್ಯ”ದ ವಿಶೇಷ ಸಾಧನೆ
ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಉಡುಪಿ,ಡಾ| ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಮಹಾವಿದ್ಯಾಲಯ, ಅಜ್ಜೆರಕಾಡು, ಲಯನ್ಸ್‍ಕ್ಲಬ್ ಪರ್ಕಳ ಹಾಗೂ ಸ್ಪೆಷಲ್ ಒಲಿಂಪಿಕ್ಸ್ ಭಾರತ್ ಕರ್ನಾಟಕ ಸಂಯೋಜಿಸಿದ್ದ ಅಂತರ್‍ಜಿಲ್ಲಾ ಸ್ಪೆಷಲ್ ಒಲಿಂಪಿಕ್ಸ್ ಕ್ರೀಡಾಕೂಟ ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ಜರುಗಿತು. ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಂಗಳೂರು ಶಕ್ತಿನಗರದಲ್ಲಿರುವ “ಸಾನಿಧ್ಯ” ಭಿನ್ನಸಾಮಥ್ರ್ಯದ ಮಕ್ಕಳ ವಸತಿಯುತ ಶಾಲೆಯ ವಿಶೇಷ ಮಕ್ಕಳು 10ಚಿನ್ನ, 9ಬೆಳ್ಳಿ ಹಾಗೂ 5ಕಂಚಿನ ಪದಕಗಳನ್ನು ಗಳಿಸಿದರು. ಪುರುಷರು 4ಘಿ100 ಮೀಟರ್ ರಿಲೇಯಲ್ಲಿ ಬಂಗಾರದ ಪದಕವನ್ನೂ, ಮಹಿಳೆಯರು “ಬೊಚಿ” ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ಹಾಗೂ ಪಥ ಸಂಚಲನದಲ್ಲಿ ತೃತೀಯ ಸ್ಥಾನವನ್ನು ಸಾನಿಧ್ಯ ಗೆದ್ದುಕೊಂಡಿತು.
ವಿಶೇಷ ಕ್ರೀಡಾಪಟುಗಳ ಜೊತೆ ಸಾನಿಧ್ಯದ ಆಡಳಿತಾಧಿಕಾರಿ ವಸಂತ್‍ಕುಮಾರ್ ಶೆಟ್ಟಿ, ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ಸುಮಾ ಡಿ’ಸಿಲ್ವಾ, ಪ್ರಾಂಶುಪಾಲೆ ಶ್ರೀಮತಿ ಮೀನಾಕ್ಷಿ ಎಂ.ಕೆ., ತರಬೇತಿದಾರರಾದ ಶಿಕ್ಷಕರÀನ್ನು ಕಾಣಬಹುದು.