ಅಂತಾರಾಷ್ಟ್ರೀಯ ಒಲಿಂಪಿಯಾಡ್ ಸಿ.ಎಫ್.ಎ.ಎಲ್, ಮಂಗಳೂರಿನ 4 ವಿದ್ಯಾರ್ಥಿಗಳ ಆಯ್ಕೆ
ಸೆಂಟರ್ ಫಾರ್ ಅಡ್ವಾನ್ಸ್‍ಡ್ ಲರ್ನಿಂಗ್ (ಸಿಎಫ್‍ಎಎಲ್)ನಲ್ಲಿ ತರಬೇತಿ ಪಡೆಯುತ್ತಿರುವ4 ವಿದ್ಯಾರ್ಥಿಗಳು ಹೋಮಿ ಬಾಬಾ ವಿಜ್ಞಾನ ಸಂಸ್ಥೆಯು ನಡೆಸುತ್ತಿರುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯ ಮೂರನೇ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳು ಮುಂಬೈಯ ಹೋಮಿಬಾಬ ವಿಜ್ಞಾನ ಮತ್ತು ಸಂಶೋಧನಕೇಂದ್ರದಲ್ಲಿ 3-4 ವಾರಗಳ ಆಯ್ಕೆ ಶಿಬಿರದಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ. ಈ ಶಿಬಿರಗಳಲ್ಲಿ ನಡೆಸುವ ಪರೀಕ್ಷೆಗಳಲ್ಲಿ, ಚರ್ಚಾಕೂಟಗಳಲ್ಲಿ ಮತ್ತು ಪ್ರಯೋಗಗಳಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸುವ ಪ್ರಾವೀಣ್ಯತೆಯ ಮೇಲೆ ಪ್ರಥಮ4-6 ವಿದ್ಯಾರ್ಥಿಗಳನ್ನು ಅಂತರಾಷ್ಟ್ರೀಯ ಒಲಿಂಪಿಯಾಡ್U ಆಯ್ಕೆ ಮಾಡಲಾಗುತ್ತದೆ.
ಹೋಮಿಬಾಬಾ ವಿಜ್ಞಾನ ಸಂಸ್ಥೆ ದೇಶದ ಪ್ರಮುಖಒಲಿಂಪಿಯಾಡ್ ಕಾರ್ಯಕ್ರಮಗಳಿಗೆ ಕೇಂದ್ರವಾಗಿದೆ, ಒಲಿಂಪಿಯಾಡ್ ಪರೀಕ್ಷೆಯು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ, ಜೀವಶಾಸ್ತ್ರ, ಖಗೋಳ ಶಾಸ್ತ್ರ ಮತ್ತುಜೂನಿಯಾರ್ ವಿಜ್ಞಾನ ಎಂಬ ವಿಭಾಗದಲ್ಲಿ ನಡೆಯುತ್ತದೆ.ಈ ಪರೀಕ್ಷೆಗಳು ವಿದ್ಯಾರ್ಥಿಗಳ ಬೌದ್ಧಿಕÀ ಬೆಳವಣಿಗೆಗೆ ಸಹಕಾರಿಯಾಗಿವೆ.
ವಿದ್ಯಾರ್ಥಿಗಳ ವಿವರ ಕೆಳಗಿನಂತಿವೆ.
ಶ್ರೇಯಸ್ : ಜೀವಶಾಸ್ತ್ರಒಲಿಂಪಿಯಾಡಿಗೆ ನಮ್ಮದೇಶದಿಂದಆಯ್ಕೆಯಾದ 35 ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿದ್ದಾರೆ. ಇವರು ಪ್ರಸ್ತುತಘಿIನೇ ತರಗತಿಯಲ್ಲಿಓದುತ್ತಿದ್ದರೂಘಿIIನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ, ಆಯ್ಕೆಯಾಗಿದ್ದಾರೆ.
ಅನೀಶ್ ಹೆಬ್ಬಾರ್ :ಗಣಿತ ಶಾಸ್ತ್ರಒಲಿಂಪಿಯಾಡಿಗೆ ನಮ್ಮದೇಶದಿಂದಆಯ್ಕೆಯಾದ 31 ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿದ್ದಾರೆ.
ಆದಿತ್ಯ ಪ್ರಕಾಶ್: ಗಣಿತ ಶಾಸ್ತ್ರಒಲಿಂಪಿಯಾಡಿಗೆ ನಮ್ಮದೇಶದಿಂದಆಯ್ಕೆಯಾದ 12ಸೀನಿಯರ್ ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿದ್ದಾರೆ. ಹಾಗೂ2017ರಲ್ಲಿ ಬ್ರೆಜಿಲ್‍ನಲ್ಲಿ ನಡೆದಅಂತಾರಾಷ್ಟ್ರೀಯಒಲಿಂಪಿಯಾಡಿನಲ್ಲಿ ಭಾರತವನ್ನು ಪ್ರತಿನಿಧಿಸಿದ ಆರು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದರು.
ಪ್ರತ್ಯೂಷ್ : ಖಗೋಳಶಾಸ್ತ್ರ ಒಲಿಂಪಿಯಾಡಿಗೆ ನಮ್ಮದೇಶದಿಂದಆಯ್ಕೆಯಾದ 25 ವಿದ್ಯಾರ್ಥಿಗಳ ಪೈಕಿ ಒಬ್ಬರಾಗಿದ್ದಾರೆ.