Home Mangalorean News Kannada News ಅಂತಾರಾಷ್ಟ್ರೀಯ ಕಲಾ ಶಿಬಿರಕ್ಕೆ ಭಾರತದಿಂದ ಅಭಿಜ್ಞಾನ್ ಪ್ರಕಾಶ್ ಮತ್ತು ಆರತಿ ಜಯರಾಜನ್ ಆಯ್ಕೆ

ಅಂತಾರಾಷ್ಟ್ರೀಯ ಕಲಾ ಶಿಬಿರಕ್ಕೆ ಭಾರತದಿಂದ ಅಭಿಜ್ಞಾನ್ ಪ್ರಕಾಶ್ ಮತ್ತು ಆರತಿ ಜಯರಾಜನ್ ಆಯ್ಕೆ

Spread the love

ಅಂತಾರಾಷ್ಟ್ರೀಯ ಕಲಾ ಶಿಬಿರಕ್ಕೆ ಭಾರತದಿಂದ ಅಭಿಜ್ಞಾನ್ ಪ್ರಕಾಶ್ ಮತ್ತು ಆರತಿ ಜಯರಾಜನ್ ಆಯ್ಕೆ

ಮಂಗಳೂರು: ದಕ್ಷಿಣ ಕೊರಿಯಾದ ಸಿಯೋಲ್‍ನಲ್ಲಿ ಇದೇಅಗಸ್ಟ್ 01 ರಿಂದ ಅಗಸ್ಟ್ 06 ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಕಲಾ ಶಿಬಿರಕ್ಕೆ ಭಾರತದಿಂದ ಅಭಿಜ್ಞಾನ್ ಪ್ರಕಾಶ್ ಮತ್ತು ಆರತಿ ಜಯರಾಜನ್ ಆಯ್ಕೆಯಾಗಿದ್ದಾರೆ.

ಕೇರಳದ ಪಯ್ಯನ್ನೂರಿನ ಫೋಕ್‍ಲ್ಯಾಂಡ್ ಸಂಸ್ಥೆಯನ್ನು ಪ್ರತಿನಿಧಿಸುತ್ತಿರುವ ಇವರು ನಮ್ಮ ದೇಶದ ಜಾನಪದ ನೃತ್ಯ, ಹಾಡುಗಳು, ಮೋಹಿನಿ ಆಟ್ಟಂ ಮತ್ತು ಆಹಾರ ಪದ್ಧತಿಯ ಕುರಿತಂತೆ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಿದ್ದಾರೆ.  ಯುವಜನಾಂಗದಲ್ಲಿ ನಮ್ಮ ಸಂಸ್ಕøತಿ ಮತ್ತು ಪರಂಪರೆಯ ಬಗ್ಗೆ ಉತ್ತೇಜನ ನೀಡುವ ಸಲುವಾಗಿ ನಡೆಯುವ ಈ ಶಿಬಿರವನ್ನು   ಆಯೋಜಿಸಿದೆ.

ಅಭಿಜ್ಞಾನ್ ಪ್ರಕಾಶ್ ಮಂಗಳೂರಿನ ಸಂತ ತೆರೆಸಾ ಶಾಲೆ, ಕೆನರಾ ಪಿ.ಯು ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಇವರು ಸ.ಪ್ರ.ದ.ಕಾಲೇಜು ರಥಬೀದಿಯ ಪ್ರಾಧ್ಯಾಪಕ ಡಾ. ಪ್ರಕಾಶ ಚಂದ್ರ ಶಿಶಿಲ ಅವರ ಪುತ್ರ.

ಆರತಿ ಜಯರಾಜನ್ ಅವರು ಮಂಗಳೂರಿನ ಸಂತ ಆಗ್ನೇಸ್ ಪಿ.ಯುಕಾಲೇಜು, ರೋಶನಿ ನಿಲಯದ ಹಳೆ ವಿದ್ಯಾರ್ಥಿನಿಯಾಗಿದ್ದು, ಮುಂಬಯಿಯ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ನಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು ಪಯ್ಯನ್ನೂರಿನ ಫೋಕ್‍ಲ್ಯಾಂಡ್ ಸಂಸ್ಥೆಯ ಅಧ್ಯಕ್ಷರಾದ ಡಾ. ವಿ. ಜಯರಾಜನ್ ಅವರ ಪುತ್ರಿ.


Spread the love

Exit mobile version