ಅಂಬಲಪಾಡಿ ಜಂಕ್ಷನ್ ನಲ್ಲಿ ಎಲಿವೇಟೆಡ್ ಪ್ಲೆ ಓವರ್ ನಿರ್ಮಾಣಗೊಳ್ಳಲಿ -ರಮೇಶ್ ಕಾಂಚನ್

Spread the love

ಅಂಬಲಪಾಡಿ ಜಂಕ್ಷನ್ ನಲ್ಲಿ ಎಲಿವೇಟೆಡ್ ಪ್ಲೆ ಓವರ್ ನಿರ್ಮಾಣಗೊಳ್ಳಲಿ -ರಮೇಶ್ ಕಾಂಚನ್

ಉಡುಪಿ:  ಅಂಬಲಪಾಡಿಯ ಜಂಕ್ಷನ್ ನಲ್ಲಿ ಅಂಡರ್ ಪಾಸ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಅನುಮೋದನೆ ನೀಡಿರುವುದನ್ನು ಪುನರ್ ಪರಿಶೀಲಿಸಿ ಇಲ್ಲಿಗೆ ಸೂಕ್ತವಾದ ಎಲಿವೇಟೆಡ್ ಪ್ಲೆ ಓವರ್ ನಿರ್ಮಿಸುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆಗ್ರಹಿಸಿದ್ದಾರೆ.

ಉಡುಪಿ, ಕುಂದಾಪುರದಲ್ಲಿ ಈ ಹಿಂದೆ ನಿರ್ಮಿಸಲ್ಪಟ್ಟ ಅಂಡರ್ ಪಾಸ್ ನಿಂದ ಪ್ರಯಾಣಿಕರು, ಸಾರ್ವಜನಿಕರು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಜೋರಾಗಿ ಮಳೆ ಬಂದ ಸಂದರ್ಭದಲ್ಲಿ ಅಂಡರ್ ಪಾಸ್ ಸಂಪರ್ಕದ ಸರ್ವಿಸ್ ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆಅಡಚಣೆ ಉಂಟಾಗುತ್ತದೆ.ಹಾಗೂ ಅಂಡರ್ ಪಾಸ್ ನಿರ್ಮಾಣಗೊಂಡಿರುವ ಪ್ರದೇಶದ ಎರಡು ಪಾರ್ಶ್ವಗಳು ಪರಸ್ಪರ ಗೋಚರಿಸುವುದಿಲ್ಲ. ಇದೀಗ ಸಂತೆಕಟ್ಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಡರ್ ಪಾಸ್ ಕಾಮಗಾರಿಯು ಕೂಡ ಅವೈಜ್ಞಾನಿಕ ವಾಗಿರುವುದು ಪ್ರತ್ಯಕ್ಷಸಾಕ್ಷಿಯಾಗಿರುತ್ತದೆ.

ಎಲಿವೇಟೆಡ್ ಪ್ಲೆ ಓವರ್ ಇದು ಸಾರ್ವಜನಿಕರ ಹಲವಾರು ವರ್ಷಗಳ ಬೇಡಿಕೆಯಾಗಿದೆ. ಅಂಡರ್ ಪಾಸ್ ನಿರ್ಮಾಣದಿಂದ ಆಗುವ ತೊಂದರೆಗಳು ಮತ್ತು ಎಲಿವೇಟೆಡ್ ಪ್ಲೆ ಓವರ್ ನಿರ್ಮಾಣದಿಂಧ ಆಗುವ ಅನುಕೂಲತೆಗಳ ಬಗ್ಗೆ ಸರಿಯಾಗಿ ವಿಮರ್ಶೆ ಮಾಡಿಕೊಂಡು ಪ್ಲೆ ಓವರ್ ಗಾಗಿ ನಿಸ್ವಾರ್ಥವಾಗಿ ಹೋರಾಟ ನಡೆಸುತ್ತಿರುವವರು ಹಾಗೂ ಸಾರ್ವಜನಿಕರು ಎಲ್ಲರೂ ಒಗ್ಗೂಡಿ ಅಂಬಲಪಾಡಿ ಜಂಕ್ಷನ್ ನಲ್ಲಿ ಎಲಿವೇಟೆಡ್ ಪ್ಲೆ ಓವರ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಕ್ಕೊರಲಿನಿಂದ ಆಗ್ರಹಿಸುವಂತೆ ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ಕೋರಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments