ಅಂಬಲಪಾಡಿ ರಾ.ಹೆದ್ದಾರಿ 66 ಕಾಮಗಾರಿ: ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

Spread the love

ಅಂಬಲಪಾಡಿ ರಾ.ಹೆದ್ದಾರಿ 66 ಕಾಮಗಾರಿ: ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ

ಉಡುಪಿ: ತಾಲೂಕಿನ ಅಂಬಲಪಾಡಿ ಗ್ರಾಮದ ಅಂಬಲಪಾಡಿ ಜಂಕ್ಷನ್ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ರಸ್ತೆ ಕಾಮಗಾರಿ ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವರೆಗೂ ಎಲ್ಲಾ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ವ್ಯವಸ್ಥೆ ಮಾಡಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಆದೇಶಿಸಿದ್ದಾರೆ.

  1. ಸ್ವಾಗತ ಗೋಪುರದಿಂದ-ಅಂಬಲಪಾಡಿ-ಕರಾವಳಿ ಜಂಕ್ಷನ್ ವರೆಗೆ ಹಾದುಹೋಗಿರುವ ಸರ್ವೀಸ್ ರಸ್ತೆಯಲ್ಲಿ ಏಕಮುಖವಾಗಿ ಎಲ್ಲಾ ವಾಹನಗಳು ಸಂಚರಿಸುವುದು.
  2.  ಕರಾವಳಿಯಿಂದ ಅಂಬಲವಾಡಿ-ಸ್ವಾಗತ ಗೋಪುರದ ಕಡೆಗೆ ಹಾದುಹೋಗಿರುವ ಸರ್ವೀಸ್ ರಸ್ತೆಯಲ್ಲಿ ಏಕಮುಖವಾಗಿ ಎಲ್ಲಾ ವಾಹನಗಳು ಸಂಚರಿಸುವುದು.
  3. ಬ್ರಹ್ಮಗಿರಿ ಕಡೆಯಿಂದ ಅಂಬಲಪಾಡಿ-ಕಿದಿಯೂರು ಕಡೆಗೆ ಹೋಗುವ ಎಲ್ಲಾ ವಾಹನಗಳು ಬ್ರಹ್ಮಗಿರಿ- ಕಾಂಗ್ರೆಸ್ ಭವನ-ಅಗ್ನಿಶಾಮಕ ದಳದ ಕಡೆಯಿಂದ ಸ್ವಾಗತ ಗೋಪುರದವರೆಗೆ ಬಂದು ನಂತರ ಸರ್ವೀಸ್ ರಸ್ತೆಯಿಂದ ಅಂಬಲಪಾಡಿ ಕಡೆಗೆ ಹೋಗುವುದು.
  4. ಬ್ರಹ್ಮಗಿರಿ ಕಡೆಯಿಂದ ಅಂಬಲಪಾಡಿ ಕರಾವಳಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬ್ರಹ್ಮಗಿರಿ ಕಡೆಯಿಂದ ಪೊಲೀಸ್ ಅಧೀಕ್ಷಕರ ಕಛೇರಿ ರಸ್ತೆಯಿಂದಾಗಿ ಬನ್ನಂಜೆ ಕಡೆಗೆ ಹೋಗುವುದು.

Spread the love