ಅಂಬೇಡ್ಕರ್ ಕನಸು ನನಸು ಮಾಡುವುದು ಎಲ್ಲರ ಕರ್ತವ್ಯ- ವಿನಯ ಕುಮಾರ್ ಸೊರಕೆ

Spread the love

ಉಡುಪಿ: ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ಮತ್ತು ಕನಸುಗಳನ್ನು ನನಸು ಮಾಡುವುದು ಎಲ್ಲಾ ಜನಪ್ರತಿನಿಧಿಗಳ ಮತ್ತು ಅಧಿಕಾರಿಗಳ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಅವರು ಗುರುವಾರ ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ನಗರಸಭೆ, ಸಮಾಜ ಕಲ್ಯಾಣ ಇಲಾಖೆ ಉಡುಪಿ ಹಾಗೂ ದಲಿತ ಸಂಘಟನೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ಶಿಲ್ಪ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

image001ambedkar-jayanthi-udupi-20160414 image003ambedkar-jayanthi-udupi-20160414 image004ambedkar-jayanthi-udupi-20160414 image005ambedkar-jayanthi-udupi-20160414 image006ambedkar-jayanthi-udupi-20160414 image007ambedkar-jayanthi-udupi-20160414 image008ambedkar-jayanthi-udupi-20160414 image009ambedkar-jayanthi-udupi-20160414 image010ambedkar-jayanthi-udupi-20160414 image011ambedkar-jayanthi-udupi-20160414 image012ambedkar-jayanthi-udupi-20160414 image013ambedkar-jayanthi-udupi-20160414 image014ambedkar-jayanthi-udupi-20160414 image015ambedkar-jayanthi-udupi-20160414 image016ambedkar-jayanthi-udupi-20160414 image017ambedkar-jayanthi-udupi-20160414

ಅಂಬೇಡ್ಕರ್ ಅವರು ಸಮಾಜದಲ್ಲಿನ ಅಸಮಾನತೆಯ ವಿರುದ್ದ ಹೋರಾಡಿದವರು, ಆದರೆ ಇಂದು ಅಸಮಾನತೆಯ ಪ್ರಮಾಣ ಹೆಚ್ಚುತ್ತಿದೆ, ಜನತೆ ಅಸಮಾನತೆಯ ವಿರುದ್ದ ಜಾಗೃತರಾಗಬೇಕು, ಸಮಾಜದ ಕಟ್ಟಕಡೆಯ ವ್ಯಕ್ತಿ ಸಹ ಸ್ವಾಭಿಮಾನದಿಂದ ಬದುಕುಬೇಕು ಎಂಬುದು ಅಂಬೇಡ್ಕರ್ ಕನಸಾಗಿತ್ತು, ಅದನ್ನು ನನಸು ಆಡುವುದು ಎಲ್ಲರ ಜವಾಬ್ದಾರಿ ಎಂದು ಸಚಿವರು ಹೇಳಿದರು.
ಈ ವರ್ಷ ಅಂಬೇಡ್ಕರ್ ಅವರ 125 ನೇ ಜನ್ಮ ದಿನಾಚರಣೆಯಾಗಿದ್ದು, ಇದನ್ನು ಇಡೀ ವರ್ಷ ಎಲ್ಲಾ ಇಲಾಖೆಗಳ ಸಹಕಾರದಲ್ಲಿ ಆಚರಿಸಲಾಗುವುದು, ಆದಿ ಉಡುಪಿಯಲ್ಲಿ ಅಂಬೇಡ್ಕರ್ ಭವನವನ್ನು 44 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳಿಸುತ್ತಿದ್ದು, ಹೊಸದಾಗಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ 3.5 ಕೋಟಿ ರೂ ಮಂಜೂರಾಗಿದ್ದು, ಸುಸುಜ್ಜಿತ ಭವನ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ಹೇಳಿದರು.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ಮಹಾ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಕಿರುಹೊತ್ತಿಗೆಯನ್ನು ಸಚಿವರು ಬಿಡುಗಡೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಕಂದಾಯ ಇಲಾಖೆಯ ಸಂಸದೀಯ ಕಾರ್ಯದರ್ಶಿ ಪ್ರಮೋದ್ ಮಧ್ವರಾಜ್ ಮಾತನಾಡಿ, ಅಂಬೇಡ್ಕರ್ ಅವರ ರಚನೆಯ ಸಂವಿಧಾನ ಇಡೀ ವಿಶ್ವದಲ್ಲೇ ಉತ್ತಮವಾಗಿದ್ದು, ದಲಿತರಿಗೆ ಮಾತ್ರವಲ್ಲದೇ ಎಲ್ಲಾ ವರ್ಗದವರಿಗೂ ಯೋಜನೆಗಳನ್ನು ರೂಪಿಸಿದ್ದ ಅವರು ವಿಶ್ವನಾಯಕರಾಗಿದ್ದರು , ಮಹಿಳೆಯರಿಗೆ ಸಮಾನ ಆಸ್ತಿಯ ಹಕ್ಕು ನೀಡುವ ಕುರಿತಂತೆ ಪ್ರತಿಪಾದಿಸಿದ್ದರು, ಕಾರ್ಮಿಕರಿಗೆ ನ್ಯಾಯ ಒದಗಿಸುವ ಕುರಿತ ಲೇಬರ್ ಆಕ್ಟ್ ಅವರದೇ ಕೊಡುಗೆ, ದಲಿತ ಮಾತ್ರವಲ್ಲದೇ, ಹಿಂದುಳಿದ, ಅಲ್ಪ ಸಂಖ್ಯಾತ ಮತ್ತು ಶೋಷಿತರ ಪರವಾಗಿ ಅವರು ನಿಂತಿದ್ದರು ಎಂದು ಹೇಳಿದರು.
ಉಡುಪಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 3.5 ಕೋಟಿ ಮಂಜೂರಾಗಿದ್ದು, ಈ ಅನುದಾನಕ್ಕೆ ಹೆಚ್ಚುವರಿಯಾಗಿ ಅನುದಾನ ಸೇರಿಸಿ 5 ರಿಂದ 6 ಕೋಟಿ ರೂ ವೆಚ್ಚದಲ್ಲಿ ವಿಶಾಲವಾದ ಮತ್ತು ಸುಸಜ್ಜಿತವಾದ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕರು ಹೇಳಿದರು.
ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಜೀವನದ ಕುರಿತು ಉಪನ್ಯಾಸ ನೀಡಿದ, ಕೋಟ ಪಡುಕರೆಯ ಲಕ್ಷ್ಮಿ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್,ನಾಯಕ್ ಮಾತನಾಡಿ, ಜಾತಿಯ ಸಂಕೋಲೆಯ ವಿರುದ್ದ ಸಿಡಿದೆದ್ದ ಮಹಾನ್ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್, ಸಾಮಾಜಿಕ ಸಮಾನತೆ ಸಾರಿದ ಅವರು , ಜಾತಿ ಎಂಬುದು ಕೇಲವ ಹುಟ್ಟುಮಾತ್ರ ಸಾಧನೆ ಮುಖ್ಯ, ಮನುಷ್ಯ ಜಾತಿ ತಾನೋಂದೇ ಕುಲಂ ಎಂಬುದನ್ನು ಸಾರಿದ ವ್ಯಕ್ತಿ ಎಂದು ಹೇಳಿದರು.
ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧ್ಯಕ್ಷರಾದ ವೆರೋನಿಕಾ ಕರ್ನೇಲಿಯೊ, ನಗರಸಭೆಯ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ಉಪಸ್ಥಿತದ್ದರು.
ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ಅಂಬೇಡ್ಕರ್ ಜಯಂತಿ ಕುರಿತು ಪ್ರಮಾಣ ವಚನ ಭೋಧಿಸಿದರು.


Spread the love