Home Mangalorean News Kannada News ಅಂಬೇಡ್ಕರ್ ಪ್ರಾತಃ ಸ್ಮರಣೀಯರು: ಶೀಲಾ ಶೆಟ್ಟಿ

ಅಂಬೇಡ್ಕರ್ ಪ್ರಾತಃ ಸ್ಮರಣೀಯರು: ಶೀಲಾ ಶೆಟ್ಟಿ

Spread the love

ಅಂಬೇಡ್ಕರ್ ಪ್ರಾತಃ ಸ್ಮರಣೀಯರು: ಶೀಲಾ ಶೆಟ್ಟಿ

ಉಡುಪಿ: ಪುರಾಣಗಳಂತೆ ನಿತ್ಯ ನೂತನವಾಗಿರುವ ಭಾರತದ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರು ಪ್ರಾತಃಸ್ಮರಣೀಯರು ಎಂದು ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದರು.

ಜಿಲ್ಲಾಡಳಿತ, ಜಿಪಂ, ಸಮಾಜ ಕಲ್ಯಾಣ ಇಲಾಖೆ, ದಲಿತ ಸಂಘಟನೆಗಳ ಆಶ್ರಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್‍ರವರ 126 ತಮಗಿದೋ ನಮ್ಮ ಗೌರವ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರ ಕಾರ್ಯ ಸಾಧನೆ ಮುಂದಿನ ಪೀಳಿಗೆಯೂ ನೆನಪಿಸುವಂತಾಗಿದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂಬುದು ಅಂಬೇಡ್ಕರ್ ಅವರ ಕನಸು. ಸವಿಂಧಾನದ ಕಾರಣದಿಂದಲೇ ಸಾಮಾನ್ಯ ನಾಗರಿಕನೂ ಉನ್ನತ ಹುದ್ದೆಗೆ ಏರಬಹುದು. ಅಂಬೇಡ್ಕರ್ ವಾಸಿಸಿದ 5 ಮನೆಗಳನ್ನು ಪಂಚ ತೀರ್ಥ ಎಂಬ ಹೆಸರಿನಲ್ಲಿ ಕೇಂದ್ರ ಸರಕಾರ ಅಭಿವೃದ್ಧಿ ಪಡಿಸುತ್ತಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಮಂಗಳೂರು ವಿವಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ. ಬಾರ್ಕೂರು ಉದಯ್ ಮಾತನಾಡಿ, ಅಂಬೇಡ್ಕರ್ ಅವರಿಂದಾಗಿಯೇ ಹಿಂದುಳಿದವರು ದನಿಎತ್ತಿ ಮಾತಾಡುವಂತಾಗಿದೆ. 80 ಮತ್ತು 90ರ ದಶಕ ದಲಿತ ಚಳುವಳಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲ ಎಂದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಸ್‍ಪಿ ಕೆ.ಟಿ. ಬಾಲಕೃಷ್ಣ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಸ್.ಎನ್.ರಮೇಶ್ ಉಪಸ್ಥಿತರಿದ್ದರು.


Spread the love

Exit mobile version