ಅಂಬೇಡ್ಕರ್ ಸಿದ್ಧಾಂತಕ್ಕೆ ಚ್ಯುತಿ ಬಾರದಂತೆ ಕಾಪು ಕ್ಷೇತ್ರದ ಅಭಿವೃದ್ಧಿ: ವಿನಯ ಕುಮಾರ್ ಸೊರಕೆ
ಕಾಪು: ದೇಶದಲ್ಲಿ ಯಾವುದೇ ಯೋಜನೆಗಳು ಜಾರಿಯಾಗಬೇಕಾದರೆ ಪ್ರತಿಯೊಂದು ಯೋಜನೆ ಗಳಲ್ಲಿ ಅಂಬೇಡ್ಕರ್ ಸಿದ್ಧಾಂತದ ರೂಪುರೇಷೆ ಗಳು ಇದ್ದೇ ಇರುತ್ತದೆ. ಈ ಸಿದ್ಧಾಂತ ಕ್ಕೆ ಚ್ಯುತಿ ಬಾರದಂತೆ ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿ ಬಗ್ಗೆ ದುಡಿತೀನಿ ಅಂತಾ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಎಸ್ಸಿ ಮತ್ತು ಎಸ್ಟಿ ವಿಭಾಗದ ವತಿಯಿಂದ ಕಾಪು ಬಂಗ್ಲೆ ಮೈದಾನದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಸಂವಿಧಾನ ಶಿಲ್ಪ ಡಾ. ಬಿ. ಆರ್ .ಅಂಬೇಡ್ಕರ್ ಭಾವಚಿತ್ರಕ್ಕೆ ವಿನಯ್ ಕುಮಾರ್ ಸೊರಕೆ ಮಾಲಾರ್ಪಣೆ ಮಾಡಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಉಪನ್ಯಾಸಕ ಡಾ. ವಾಸುದೇವ ಬೆಳ್ಳೆ ಮಾತನಾಡಿ ಡಾ. ಬಿ. ಆರ್. ಅಂಬೇಡ್ಕರ್ ಸಮಾನತೆ , ಸಾಮರಸ್ಯತೆ ಹಾಗೂ ಸಾಮಾಜಿಕ ನ್ಯಾಯದ ಪ್ರತಿಪಾದಕರಾಗಿದ್ದು , ಅದರ ಹಿಂದಿನ ಪ್ರೇರಣಾ ಶಕ್ತಿಯಾಗಿದ್ದು ಅಂಬೇಡ್ಕರ್ ಜಯಂತಿಯನ್ನು ದೇಶ ಕಟ್ಟುವುದಕ್ಕಾಗಿ ಆಚರಿಸಿ ಎಂದು ಕರೆಕೊಟ್ಟರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ ಚಂದ್ರ ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಗಫೂರ್, ಕಾರ್ಯದರ್ಶಿ ದೇವಿ ಪ್ರಸಾದ್ ಶೆಟ್ಟಿ, ಜಿಲ್ಲಾ ಎಸ್ಸಿ ಸೆಲ್ ನ ಅಧ್ಯಕ್ಷ ನಾರಾಯಣ್, ಕಾಂಗ್ರೆಸ್ ಮುಖಂಡರಾದ ಕಾಪು ದಿವಾಕರ ಶೆಟ್ಟಿ, ವಿಲ್ಸನ್ ರೊಡ್ರಿಗಸ್, ಮಾಲಿನಿ, ಪ್ರಭಾವತಿ, ಗೀತಾ ವಾಗ್ಲೆ, ಶಿವಾಜಿ ಸುವರ್ಣ, ವಿಶ್ವಾಸ್ ಅಮೀನ್, ದಿನೇಶ್ ಕೋಟ್ಯಾನ್, ದೀಪಕ್ ಎರ್ಮಾಳ್, ಅಬ್ದುಲ್ಲಾ, ರಮೇಶ್ ಬೈರಂಪಳ್ಳಿ. ಮೆಲ್ವಿನ್ ಡಿಸೋಜ, ಗಣೇಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಕಾಪು ದಕ್ಷಿಣ ವಲಯ ಎಸ್ಸಿ ಘಟಕದ ಅಧ್ಯಕ್ಷ ಕೇಶವ ಸಾಲ್ಯಾನ್ ಸ್ವಾಗತಿಸಿದರು. ಕಾಪು ಬ್ಲಾಕ್ ಪ್ರದಾನ ಕಾರ್ಯದರ್ಶಿ ಅಮೀರ್ ಮೊಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.