Home Mangalorean News Kannada News ಅಕ್ಟೋಬರ್ 15 ರಂದು ಶತಾಬ್ದಿ ಸಹಕಾರಿ ಸಮಾವೇಶ

ಅಕ್ಟೋಬರ್ 15 ರಂದು ಶತಾಬ್ದಿ ಸಹಕಾರಿ ಸಮಾವೇಶ

Spread the love

ಅಕ್ಟೋಬರ್ 15 ರಂದು ಶತಾಬ್ದಿ ಸಹಕಾರಿ ಸಮಾವೇಶ

ಮಂಗಳೂರು: ಶತಾಬ್ದಿ ಸಹಕಾರಿ ಸಮಾವೇಶ ಸಹಕಾರಿ ರಂಗದ ಆಧುನಿಕರಣ, ಶುದ್ಧೀಕರಣ ಹಾಗೂ ಸಬಲೀಕರಣಕ್ಕಾಗಿ ಸಹಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಮಂಗಳೂರು ತಾಲೂಕಿನ ಎಲ್ಲಾ ಸಹಕಾರಿಗಳು ಸೇರಿ ಶತಾಬ್ದಿ ಸಹಕಾರಿ ಸಮಾವೇಶವನ್ನು ಅಕ್ಟೋಬರ್ 15 ರಂದು ಪೂರ್ವಾಹ್ನ 10.00 ಗಂಟೆಗೆ ನಗರದ ಪುರಭವನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಬಿನಾ ಸಂಸ್ಕಾರ್ ನಹೀ ಸಹಕಾರ್, ಬಿನಾ ಸಹಕಾರ್ ನಹೀ ಉದ್ದಾರ್’ ಎಂಬ ಧ್ಯೆಯದೊಂದಿಗೆ ಪ್ರಾರಂಭವಾದ ಸಹಕಾರ ಭಾರತಿ ಸಂಸ್ಥಾಪಕರಾದ ಮಾನನೀಯ ದಿವಗಂತ ಲಕ್ಷ್ಮಣ ರಾವ್ ಇನಾಂದಾರ್ ರವರ ಜನ್ಮ ಶತಮಾನೋತ್ಸವದ ಹಿನ್ನಲೆಯಲ್ಲಿ ಈ ಶತಾಬ್ದಿ ಸಹಕಾರಿ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಮಂಗಳೂರು ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕುಗಳು ಮತ್ತು ಇತರ ಎಲ್ಲಾ ರೀತಿಯ ಸಹಕಾರ ಸಂಘಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಮಾವೇಶದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಸಹಕಾರ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀ ಕೊಂಕೋಡಿ ಪದ್ಮನಾಭ, ಕಾರ್ಯಕ್ರಮದ ಪ್ರಸ್ತಾವನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಹರೀಶ್ ಆಚಾರ್ ಹಾಗೂ ಮುಖ್ಯ ಅತಿಥಿಗಳಾಗಿ ಕೆ. ರವಿರಾಜ್ ಹೆಗ್ಡೆ, ಅಧ್ಯಕ್ಷರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ಯಶ್‍ಪಾಲ್ ಸುವರ್ಣ, ಅಧ್ಯಕ್ಷರು ದ.ಕ. ಮತ್ತು ಉಡುಪಿ ಜಿಲ್ಲಾ ಮೀನುಮಾರಾಟ ಸಹಕಾರ ಮಹಾಮಂಡಳ, ಸರಳಾ ಬಿ. ಕಾಂಚನ್ ನಿರ್ದೇಶಕರು, ಕರ್ನಾಟಕ ರಾಜ್ಯ ಸಹಕಾರ ಮಹಿಳಾ ಮಂಡಳ, ದಯಾನಂದ ಅಡ್ಯಾರ್ ನಿರ್ದೇಶಕರು, ಕರ್ನಾಟಕ ಸಹಕಾರ ಕುಕ್ಕೂಟ ಮಹಾಮಂಡಳ, ಬಿ.ಕೆ. ಸಲೀಂ ಸಹಕಾರ ಸಂಘಗಳ ಉಪ ನಿಬಂಧಕರು ಉಪಸ್ಥಿತರಿರಲಿದ್ದಾರೆ.

ಸಮಾವೇಶದ ಸಮಾರೋಪ ಭಾಷಣವನ್ನು ಕ್ಯಾಪ್ಕೋ ಅಧ್ಯಕ್ಷರಾದ ಸತೀಶ್ಚಂದ್ರರವರು ನಡೆಸಿಕೊಡಲಿದ್ದು, ಸಂಜೀವ್ ಟಿ. ಸಹಕಾರ ಭಾರತಿ ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಮಾವೇಶದಲ್ಲಿ ಎರಡು ನಿರ್ಣಯ ಗೋಷ್ಠಿಗಳು ನಡೆಯಲಿದ್ದು,    1) ವಿಷಯ : ಸಹಕಾರಿ ಸಂಘಗಳ ಮೇಲೆ ಆದಾಯ ತೆರಿಗೆಯ ಸವಾಲುಗಳು 2) ಸಹಕಾರಿ ಕಾಯ್ದೆ ಅದರ ತಿದ್ದುಪಡಿ ಹಾಗೂ ಪೂರಕ ವಿಷಯಗಳು ಎಂಬ ವಿಷಯಗಳ ಮೇಲೆ ಚರ್ಚೆ ಮತ್ತು ನಿರ್ಣಯ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯ ಅಧ್ಯಕ್ಷತೆಯನ್ನು ಪ್ರಸನ್ನ ನಿರ್ದೇಶಕರು ಜನತಾ ಬಜಾರ್, ವಿಷಯ ಮಂಡನೆಯನ್ನು ಜಯಕರ ಶೆಟ್ಟಿ ಇಂದ್ರಾಳಿ ಪ್ರಧಾನ ವ್ಯವಸ್ಥಾಪಕರು, ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ, ಉಡುಪಿ ಹಾಗೂ ಚಿತ್ತರಂಜನ್ ಬೋಳಾರ್ ಅಧ್ಯಕ್ಷರು, ಆತ್ಮಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘ, ಮಂಗಳೂರು ಇವರು ನಡೆಸಿಕೊಡಲಿದ್ದಾರೆ.


Spread the love

Exit mobile version