Home Mangalorean News Kannada News ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಮರಳು ವಶ

ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಮರಳು ವಶ

Spread the love

ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಮರಳು ವಶ

ಮಂಗಳೂರು: ಪಣಂಬೂರು ಠಾಣಾ ವ್ಯಾಪ್ತಿಯ ಕಸಬಾ ಬೆಂಗ್ರೆ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಮರಳನ್ನು ಪಣಂಬೂರು ಠಾಣೆಯ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಬೀಟ್ ಅಧಿಕಾರಿಗಳಾದ ಎಎಸ್‌ಐ ಪುರಂದರ ಗೌಡ ಮತ್ತು ಹೆಡ್‌ ಕಾನ್‌ಸ್ಟೆಬಲ್‌ ಶೈಲೆಂದ್ರ ಅವರು ಬೀಟ್ ಕರ್ತವ್ಯದ ಬಗ್ಗೆ ತೆರಳಿದ ಸಂದರ್ಭದಲ್ಲಿ ಮರಳು ಸಂಗ್ರಹಿಸಿ ಇಟ್ಟಿರುವುದು ಪತ್ತೆಯಾಗಿದೆ.

ಕಸಬಾ ಬೆಂಗ್ರೆ ಗ್ರಾಮಕ್ಕೆ ಸಂಬಂಧಪಟ್ಟ ಅಕ್ಷಯ ಕಾರ್ಪೋರೇಶನ್ ಸ್ಥಳದಲ್ಲಿ ಇರಿಸಿದ್ದ ಸುಮಾರು 20 ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಪಣಂಬೂರು ಇನ್‌ಸ್ಪೆಕ್ಟರ್‌ ರಫೀಕ್ ಕೆ.ಎಂ. ಪ್ರಕರಣ ದಾಖಲಿಸಿದ್ದು, ಮರಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.


Spread the love

Exit mobile version