ಅಕ್ರಮವಾಗಿ ಸಾಗಿಸುತ್ತಿದ್ದ 1.5 ಕೆ.ಜಿ. ಚಿನ್ನ ಕಸ್ಟಮ್ಸ್ ಅಧಿಕಾರಿಗಳಿಂದ ವಶ ; ಆರೋಪಿ ಸೆರೆ

Spread the love

ಅಕ್ರಮವಾಗಿ ಸಾಗಿಸುತ್ತಿದ್ದ 1.5 ಕೆ.ಜಿ. ಚಿನ್ನ ಕಸ್ಟಮ್ಸ್ ಅಧಿಕಾರಿಗಳಿಂದ ವಶ ; ಆರೋಪಿ ಸೆರೆ

ಮಂಗಳೂರು : 59 ಲಕ್ಷ ರೂ. ಮೌಲ್ಯದ ಒಂದೂವರೆ ಕೆಜಿ ಚಿನ್ನವನ್ನು ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಭಟ್ಕಳದ ಸಿಬ್ಗತುಲ್ಲಾ ಕೋಲಾ (31) ಎಂದು ಗುರುತಿಸಲಾಗಿದೆ.

ಈತ ಬೆಂಗಳೂರಿನಿಂದ ಕೆಎಸ್ಸಾರ್ಟಿಸಿ ಐರಾವತ ಬಸ್ನಲ್ಲಿ ಉಡುಪಿಗೆ ಪ್ರಯಾಣಿಸುತ್ತಿದ್ದಾಗ ದಾರಿ ಮಧ್ಯೆ ಮಂಗಳೂರು ಬಸ್ ನಿಲ್ದಾಣದಲ್ಲಿ ಈತನನ್ನು ಡಿಆರ್ಐ ಅಧಿಕಾರಿಗಳು ಬಂಧಿಸಿ, ಚಿನ್ನ ವಶಪಡಿಸಿಕೊಂಡಿದ್ದಾರೆ.
ಯಾರಿಗೂ ಸುಳಿವು ಸಿಗದಿರಲು ಈತ 13 ಚಿನ್ನದ ಗಟ್ಟಿಗಳನ್ನು ಸಿಗರೆಟ್ ಪ್ಯಾಕ್ ಒಳಗಿಟ್ಟು ಚಾಣಾಕ್ಷತೆ ಮೆರೆದಿದ್ದ. ಅಧಿಕಾರಿಗಳು ವಿಚಾರಣೆ ನಡೆಸಿದಾಗ ಈ ಚಿನ್ನಕ್ಕೆ ಯಾವುದೇ ರಶೀದಿ ಅಥವಾ ಬಿಲ್ ನೀಡಲಿಲ್ಲ. ಹಾಗಾಗಿ ಕೂಡಲೆ ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಈತ ಚಿನ್ನವನ್ನು ದುಬೈನಿಂದ ಸಿಂಗಾಪುರ, ಅಲ್ಲಿಂದ ವಿಮಾನದ ಮೂಲಕ ಚೆನ್ನೈಗೆ ತೆಗೆದುಕೊಂಡು ಬಂದಿದ್ದಾಗಿ ತಿಳಿಸಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳನ್ನು ಮೋಸಗೊಳಿಸುವ ಸಲುವಾಗಿ ಈತ ಈ ಸುತ್ತು ಬಳಸುವ ಮಾರ್ಗವನ್ನು ಕಂಡುಕೊಂಡಿದ್ದ. ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಬಸ್ಸಿನ ಮೂಲಕ ಬೆಂಗಳೂರಿಗೆ ಬಂದಿದ್ದಾನೆ. ಅಲ್ಲಿಂದ ಕೆಎಸ್ಸಾರ್ಟಿಸಿ ಬಸ್ ಹತ್ತಿ ಉಡುಪಿಗೆ, ಅಲ್ಲಿಂದ ಭಟ್ಕಳಕ್ಕೆ ತೆರಳುವ ಪ್ಲಾನ್ ಹಾಕಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಂಡ 13 ಚಿನ್ನದ ಗಟ್ಟಿಗಳು 24 ಕ್ಯಾರಟ್ನ ಪರಿಶುದ್ಧವಾಗಿದ್ದು, 1,515.700 ಗ್ರಾಂ ತೂಕ, 59.52 ಲಕ್ಷ ರೂ. ಮಾರುಕಟ್ಟೆ ಮೌಲ್ಯ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.


Spread the love