ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ದಾಳಿ ಸೊತ್ತು ವಶ
ಮಂಗಳೂರು: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಸ್ಥಳಕ್ಕೆ ದಾಳಿ ನಡೆಸಿ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ಮಂಗಳೂರು ತಾಲೂಕು ಅದ್ಯಪಾಡಿ ಎಂಬಲ್ಲಿ ಶನಿವಾರ ನಡೆದಿದೆ.
ಮಂಗಳೂರು ತಾಲೂಕು, ಅದ್ಯಪಾಡಿ ಗ್ರಾಮದ, ಅದ್ಯಪಾಡಿ ಎಂಬಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಅನುಮತಿ ಇಲ್ಲದೇ ಮಾಕ್ಸಿಂ ಪಿಂಟೋ ಎಂಬುವರು ಅಕ್ರಮ ಕೆಂಪು ಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕರು ಹಾಗೂ ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯವರಾದ ಬಿ.ಕೆ ಮೂರ್ತಿ ರವರೊಂದಿಗೆ ಸೇರಿ ದಾಳಿ ನಡೆಸಿ ಪರಿಶೀಲಿಸಿ , ಸದ್ರಿ ಮಾಕ್ಸಿಂ ಪಿಂಟೋ ಎಂಬವರು ಗಣಿ ಮತ್ತು ಭೂ ವಿಜ್ಞಾನ ಲಾಖೆಯ ಯಾವುದೇ ಅನುಮತಿಯನ್ನು ಪಡೆಯದೇ ಕೆಂಪು ಕಲ್ಲಿನ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ಈ ಬಗ್ಗೆ ಗಣಿಗಾರಿಕೆ ನಡೆಸಲು ಬಳಸುತ್ತಿದ್ದ ಕೆಂಪು ಕಲ್ಲಿನ ಕಟ್ಟಿಂಗ್ ಮೇಶಿನ್ ಮತ್ತು ಕೆಂಪು ಕಲ್ಲನ್ನು ತೆಗೆಯಲು ಬಳಸುವ ಮೇಶಿನ್ ಮತ್ತು 2000 ಕೆಂಪು ಕಲ್ಲುಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮದ ಬಗ್ಗೆ ವರದಿಯೊಂದಿಗೆ ವಶಪಡಿಸಿಕೊಂಡ ಸ್ವತ್ತುಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಈ ಕಾರ್ಯಾಚಾರಣೆಯನ್ನು ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ ಗೌಡ, . ಐ.ಪಿ.ಎಸ್ರವರನಿರ್ದೇಶದಂತೆ ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವಮೂರ್ತಿ, ಸಿಬ್ಬಂದಿಗಳಾದ ಪ್ರಕಾಶ್ ಮೂರ್ತಿ, ರಾಜೇಶ್, ಶಶಿಧರ್ ಹಾಗೂ ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಎ.ಎಸ್.ಐ ಮಹಮ್ಮದ್ ಮತ್ತು ಸಿಬ್ಬಂದಿಯವರು ಭಾಗವಹಿಸಿರುತ್ತಾರೆ