ಮಂಗಳೂರು: ಅಕ್ರಮವಾಗಿ ಪರವಾನಿಗೆ ಇಲ್ಲದೇ ಗಾಂಜಾ ಮಾರಾಟ ಮಾಡಲು ಗಾಂಜಾವನ್ನು ತಂದಿದ್ದ ಒಟ್ಟು ಐದು ಜನರನ್ನು ಸಿ.ಸಿ.ಬಿ ಪೊಲೀಸರು ಮಂಗಳವಾರ ಬಂಧಿಸಿರುತ್ತಾರೆ.
ಬಂಧಿತರನ್ನು ಅಡ್ಯಾರ್ ನಿವಾಸಿ ಶರೀಪ್ ವಿ ಎಚ್ಚ್ (36), ಹರ್ಷಿತ್ (36), ಕುಲಶೇಖರ ನಿವಾಸಿ ದೀಕ್ಷೀತ್ ಪೂಜಾರಿ (37), ಮೂಡುಶೆಡ್ಡೆ ನಿವಾಸಿ ಇಮ್ರಾನ್ (30), ಶಕ್ತಿನಗರ ನಿವಾಸಿ ಇಮ್ರಾನ್ (25) ಎಂದು ಗುರುತಿಸಲಾಗಿದೆ.
ಮಂಗಳೂರು ತಾಲೂಕಿನ ತೊಕ್ಕೊಟ್ಟು ಒಳಪೇಟೆಯಲ್ಲಿ ಒಂದು ಪಿಯೇಟ್ ಪುಂಟೋ ಕಾರು ಮತ್ತು ಒಂದು ಬಜಾಜ್ ಡಿಸ್ಕವರಿ ಮೋಟಾರು ಸೈಕಲಿನಲ್ಲಿ ಐದು ಗಾಂಜಾ ಮಾರಾಟ ಮಾಡಲು ಬಂದಿರುತ್ತಾರೆ ಎಂದು ಸಿಸಿಬಿ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಸಿ.ಸಿ.ಬಿ ಪೊಲೀಸರು ಮಾನ್ಯ ತಹಶಿಲ್ದಾರರಾದ ಶ್ರೀ.ಶಿವಶಂಕರ್ರವರೊಂದಿಗೆ ಹೋಗಿ ದಾಳಿ ನಡೆಸಿ ಒಟ್ಟು ಐದು ಜನರನ್ನು ಬಂದಿಸಿರುತ್ತಾರೆ.
ಈ ಗಾಂಜಾವನ್ನು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದು, ಅಲ್ಲದೇ ಇವರುಗಳಿಂದ ಒಟ್ಟು 5 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಗಾಂಜಾ ಮಾರಾಟ ಮಾಡಲು ಬಂದಂತಹ ಪಿಯೇಟ್ ಪುಂಟೋ ಕಾರು, ಬಜಾಜ್ ಡಿಸ್ಕವರಿ ಮೋಟಾರು ಸೈಕಲ್ ಹಾಗೂ 9 ಮೊಬೈಲ್ ಪೋನ್ ಗಳು , ನಗದು ಹಣ 1,105 ರೂಪಾಯಿ ಒಟ್ಟು ಮೌಲ್ಯ 10 ಲಕ್ಷ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ
ಕಾಲೇಜ್ ಮತ್ತು ಇತರ ಪರಿಸರ ಹಾಗೂ ಇತರ ಕಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಗಾಂಜಾವನ್ನು ಪಡೆದು ಕೊಂಡಲ್ಲಿ ಹಾಗೂ ಗಾಂಜಾವನ್ನು ಉಪಯೋಗ ಮಾಡಿದ ಬಗ್ಗೆ ಮಾಹಿತಿ ಬಂದು ಪತ್ತೆ ಮಾಡಿದ್ದಲ್ಲಿ ಅಂತವರ ವಿರುದ್ಧವೂ ಸಹ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ. ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ ಪಾಟೀಲ್ ರವರ ಮಾರ್ಗದಶರ್ನದಲ್ಲಿ ಸಿ.ಸಿ.ಬಿ ಘಟಕದ ಇನ್ಸ್ ಪೆಕ್ಟರ್ ವೆಲೆಂಟೈನ್ ಡಿ ಸೋಜಾ ಮತ್ತು ಸಬ್ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.