ಅಕ್ರಮ ಗೋಸಾಗಾಟ ಇಬ್ಬರ ಬಂಧನ

Spread the love

ಅಕ್ರಮ ಗೋಸಾಗಾಟ ಇಬ್ಬರ ಬಂಧನ

ಮಂಗಳೂರು: ಸುಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾಸರಗೋಡು ನಿವಾಸಿ ಅನೀಶ್ (30) ಮತ್ತು ಹನೀಫ್ ಪಿ ಎಮ್ ಎಂದು ಗುರುತಿಸಲಾಗಿದೆ.

ಬಂಧಿತರು ಅಕ್ರಮವಾಗಿ ಗೋಸಾಗಾಟವನ್ನು ಮಾಡುತ್ತಿದ್ದ ಮಾಹಿತ ಮೇರೆಗೆ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರವಿಕಾಂತೇಗೌಡ ಸಾಹೇಬರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಜಿತ್ ವಿ.ಜೆ ಹಾಗೂ ಪೊಲೀಸ್ ಉಪಾಧೀಕ್ಷಕರಾದ ಶ್ರೀನಿವಾಸ್ ರವರ ನಿರ್ದೇಶನದಂತೆ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ಸತೀಶ್ ಆರ್ ರವರ ನೇತೃತ್ವದಲ್ಲಿ ಸುಳ್ಯ ಪೊಲೀಸ್ ಠಾಣಾ ಪಿ.ಎಸ್.ಐ ಮಂಜುನಾಥ ರವರು, ಅಪರಾಧ ವಿಭಾಗದ ಪಿಎಸ್ಐ ಮಾಧವ ಕೂಡ್ಲು, ಎಎಸ್ಐ ಗಳಾದ ಶಿವರಾಮ್ , ರವೀಂದ್ರ ಹಾಗೂ ಸಿಬ್ಬಂದಿಗಳಾದ ಪಿಸಿ ಸಂತೋಷ್. ಪಿಸಿ ಪುನೀತ್ ರವರು ಈ ದಿನ ದಿನಾಂಕ 07.08.18 ರಂದು 10:30 ಗಂಟೆಗೆ ಕಲ್ಲಪಳ್ಳಿ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದುಕೊಂಡು ಠಾಣೆಯಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


Spread the love