ಅಕ್ರಮ ಜಾನುವಾರು ಸಾಗಾಟ – ಪೊಲೀಸ್ ವಶಕ್ಕೆ
ಉಪ್ಪಿನಂಗಡಿ : ಪರವಾನಿಗೆಯಿಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತು ವ್ಯಕ್ತಿಗಳನ್ನು ಉಪ್ಪಿನಂಗಡಿ ಪೊಲೀಸರು ಗುರುವಾರ ವಶಪಡಿಸಕೊಂಡಿದ್ದಾರೆ
ಗುರುವಾರ ಬೆಳಿಗ್ಗೆ 9-45 ಗಂಟೆ ನೆಕ್ಕಿಲಾಡಿ ಜಂಕ್ಷನ್ ಎಂಬಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಯಾ ದಾಖಲಾತಿಗಳಿಲ್ಲದೇ “ಗೂಡ್ಸ್ ಲಾರಿ ಕೆಎ-20 ಸಿ-1230ನೇದರಲ್ಲಿ 20 ಜಾನುವಾರುಗಳನ್ನು ಎಲ್ಲಿಂದಲೋ ಕಳವು ಮಾಡಿ ಹಿಂಸಾತ್ಮಕ ರೀತಿಯಲ್ಲಿ ಕೈ-ಕಾಲು ಕಟ್ಟಿ ಮಾಂಸಕ್ಕಾಗಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದುದ್ದನ್ನು ಶ್ರೀ ಪ್ರದೀಪ್ ಗುಂಟಿ ಐ.ಪಿ.ಎಸ್ ,ಪ್ರೋಬೆಷನರಿ ಸಹಾಯಕ ಪೊಲೀಸ್ ಅಧೀಕ್ಷಕರು ಉಪ್ಪಿನಂಗಡಿ ಲೀಸ್ ಠಾಣೆ ಹಾಗೂ ಸಿಬ್ಬಂದಿಗಳು ಪತ್ತೆ ಹಚ್ಚಿ ಜಾನುವಾರುಗಳನ್ನು ಮತ್ತು “ಗೂಡ್ಸ್ ಲಾರಿ” ವಾಹನವನ್ನು ಪಂಚರುಗಳ ಸಮಕ್ಷಮ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದಾರೆ.
ಸ್ವಾಧೀನಪಡಿಸಿಕೊಂಡ ಜಾನುವಾರುಗಳ ಹಾಗೂ ಗೂಡ್ಸ್ ಲಾರಿ ವಾಹನದ ಒಟ್ಟು ಅಂದಾಜು ಮೌಲ್ಯ ರೂ 4,55,000/- ರೂ ಅಗಬಹುದು. ಮಹಮ್ಮದ್ ಸಮೀರ್ @ ಸಮೀರ್ ಎಂಬಾತನನ್ನು ಸ್ಥಳದಲ್ಲಿ ವಶಕ್ಕೆ ಪಡೆದುಕೊಂಡಿದ್ದು. ಓಡಿ ಪರಾರಿಯಾಗಲೂ ಯತ್ನಿಸಿದ ಇಸ್ಮಾಯಲ್ ಗೆ ಬಿದ್ದು ಪೆಟ್ಟಾಗಿದ್ದವನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ