Home Mangalorean News Kannada News ಅಕ್ರಮ ಜೂಜಾಟ ಅಡ್ಡೆಗೆ ದಾಳಿ: 9 ಮಂದಿ ಸೆರೆ

ಅಕ್ರಮ ಜೂಜಾಟ ಅಡ್ಡೆಗೆ ದಾಳಿ: 9 ಮಂದಿ ಸೆರೆ

Spread the love

ಅಕ್ರಮ ಜೂಜಾಟ ಅಡ್ಡೆಗೆ ದಾಳಿ: 9 ಮಂದಿ ಸೆರೆ

ಮಂಗಳೂರು: ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ದಂಬೇಲ್ ಎಂಬಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಅಕ್ರಮವಾಗಿ ಅಂದರ್ – ಬಾಹರ್ ಎಂಬ ಜೂಜಾಟವಾಡುತ್ತಿದ್ದ 9 ಜನರನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ದಿನಾಂಕ: 28-10-2018 ರಂದು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ದಂಬೇಲ್ ಎಂಬಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದರೆಂಬ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಜೂಜಾಟವಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾಗಿದ್ದ

ಮೋಹನ್ ಡಿ(28), ವಾಸ: ಅಶೋಕ ನಗರ, ಮಂಗಳೂರು, ಅಬೂಬಕ್ಕರ್ ಸಿದ್ದಿಕ್(26), ಕುಂಬ್ಳೆ ಕಾಸರಗೋಡು, ವಿನೋದ್ ಕುಮಾರ್(28), ತಲಪಾಡಿ, ಮಂಗಳೂರು, ದುರ್ಗಪ್ಪ ಗುಡಿಮನಿ(29), ರೋಣ ಗದಗ ಜಿಲ್ಲೆ, ಮೊಹಮ್ಮದ್ ಯೂಸೂಪ್(46), ಕಸಬಾ ಬೆಂಗ್ರೆ, ಮಂಗಳೂರು, ಸಂದೇಶ್ ಬಾಳಿಗಾ(29), ಕುಕ್ಕೂಂದೂರು, ಕಾರ್ಕಳ, ಬಾಲಪ್ಪ ಹೊನ್ನಪ್ಪ ಹೊರಗಿನಮನಿ(27), ಬಾಗಲಕೋಟೆ ಜಿಲ್ಲೆ, ಇಸ್ಮಾಯಿಲ್(55), ವಳಚ್ಚಿಲ್, ಮಂಗಳೂರು, ಪಮ್ಮಿ @ ಪ್ರವೀಣ್, ಕೊಡಿಯಾಲ್ ಬೈಲ್, ಮಂಗಳೂರು ಎಂಬವರನ್ನು ವಶಕ್ಕೆ ಪಡೆದುಕೊಂಡು, ಅವರ ವಶದಿಂದ ನಗದು ಹಣ ರೂ. 30,440/- ಹಾಗೂ ಜೂಜಾಟಕ್ಕೆ ಉಪಯೋಗಿಸಿದ ಇಸ್ಪೀಟ್ ಕಾರ್ಡ್ಗಳು, ಟೇಬಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.  ಜೂಜಾಟವಾಡುತ್ತಿದ್ದವರನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಶಾಂತಾರಾಮ, ಪಿಎಸ್ಐಯವರಾದ ಶ್ಯಾಮ್ ಸುಂದರ್, ಹೆಚ್.ಡಿ.ಕಬ್ಬಾಳ್ ರಾಜ್ ಹಾಗೂ ಸಿಸಿಬಿ ಘಟಕದ ಸಿಬ್ಬಂದಿಗಳು  ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Exit mobile version