Home Mangalorean News Kannada News ಅಕ್ರಮ ಡೊನೇಷನ್ ವಸೂಲಿ ವಿರುಧ್ದ ಎಸ್.ಎಫ್.ಐ ಹಕ್ಕೊತ್ತಾಯ ಧರಣಿ

ಅಕ್ರಮ ಡೊನೇಷನ್ ವಸೂಲಿ ವಿರುಧ್ದ ಎಸ್.ಎಫ್.ಐ ಹಕ್ಕೊತ್ತಾಯ ಧರಣಿ

Spread the love

ಡೊನೇಷನ್ ರಹಿತ ಶಿಕ್ಷಣ ಅಭಿಯಾನದ ಭಾಗವಾಗಿ ಜಿಲ್ಲೆಯಲ್ಲಿ ಡೊನೇಷನ್ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕರದ ಸಭೆ ಕರೆಯಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಜಿಲ್ಲಾಧಿಕಾರಿ ಕಛೇರಿ ಎದುರು ಇಂದು ಪ್ರತಿಭಟನಾ ಹಕ್ಕೊತ್ತಾಯ ಧರಣಿ ನಡೆಸಿತು.

sfi dharani 2

ಈ ಪ್ರತಿಭಟನೆಯನ್ನು ಉಧ್ಧೇಶಿಸಿ ಮಾತನಾಡಿದ ಎಸ್.ಎಫ್.ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್ ಜಿಲ್ಲೆಯಲ್ಲಿ ಶಿಕ್ಷಣದ ಮಾಫಿಯ ಆಡಳಿತವನ್ನು ನಿಯಂತ್ರಿಸುವಷ್ಟು ಬಲಿಷ್ಠವಾಗಿದ್ದು ಇತ್ತೀಚಿನ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವೇ ಇದಕ್ಕೆ ಸಾಕ್ಷಿಯಾಗಿದೆ. ಜಿಲ್ಲಾಡಳಿತ ಮತ್ತು ಇಲಾಖೆಯ ಅಧಿಕಾರಿಗಳು ಡೊನೇಷನ್ ವಸೂಲಿ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.ಡೊನೇóಷನ್ ವಸೂಲಿ ನಿಯಂತ್ರಿಸುವ ಸಲುವಾಗಿ ಜಿಲ್ಲಾ ಶಿಕ್ಷಣ ಪ್ರಾಧಿಕಾರದ ಸಭೆಯನು ಕೂಡಲೆ ಕರೆಯಬೇಕು ಅಲ್ಲದೇ ಕಳೆದ ವರ್ಷ ಪೋಷಕರು ಹಾಗೂ ವಿದ್ಯಾರ್ಥಿಗಳು ಅಧಿಕಾರಿಗಳ ಜೊತೆ ಕೆಲ ಖಾಸಗಿ ಸಂಸ್ಥೆಗಳ ಮೇಲೇ ದಾಳಿ ನಡೆಸಿ ಅಕ್ರಮಗಳ ಬಯಲಿಗೆಳೆದಿದ್ದು ಜಿಲ್ಲಾಧಿಕಾರಿಯವರಿಗೆ ದೂರು ಸಲ್ಲಿಸಿದ್ದು ಅಂತಹಾ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಡೊನೇಷನ್ ವಸೂಲಿ ಅಕ್ರಮವೆಂದು ಸುಪ್ರೀಮ್ ಕೋರ್ಟ್ ಆದೇಶಿಸಿದ್ದು ಹಾಗೂ ಶಿಕ್ಷಣ ಸಂಸ್ಥೆಗಳು ನೋ ಲಾಸ್, ನೋ ಲಾಸ್ ಪ್ರಕಾರದಂತೆ ನಡೆಯಬೇಕೆಂದು ಸೂಚಿಸಿದ್ದು ಈ ನಿಟ್ಟಿನಲ್ಲಿ ಡೊನೇಷನ್ ವಸೂಲಿಯಲ್ಲಿ ತೊಡಗಿರುವ ಕಾಲೇಜುಗಳ ಅನುಮತಿ ರದ್ದು ಪಡೆಸಬೇಕು ಎಂದು ಆಗ್ರಹಿಸಿದರು.
ಡಿ,ವೈ.ಎಫ್.ಐ ಜಿಲ್ಲಾ ಉಪಾಧಶ್ಯಕ್ಷ ಬಿ.ಕೆ ಇಮ್ತಿಯಾಜ್ ಮಾತನಾಡಿ ದ.ಕ ಜಿಲ್ಲೆ ಶಿಕ್ಷಣದ ರಾಜಧಾನಿ ಮಾತ್ರವಲ್ಲ ಶಿಕ್ಷಣದ ಮಾಫಿಯಾಕ್ಕೂ ಹೆಸರಾಗಿದೆ ಮೂಲಭೂತ ಹಕ್ಕಾದ ಶಿಕ್ಷಣ ಪಡೆಯುವ ಸಲುವಾಗಿ ವಿದ್ಯಾರ್ಥಿಯ ಪೋಷಕರು ಸಾಲಗಾರರಾಗಿ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ ಮಾತನಾಡಿ ಸರಕಾರವೇ ಖಾಸಗಿ ಸಂಸ್ಥೆಗಳ ಜೊತೆ ಶಾಮಿಲಾಗಿ ಡೊನೇóಷನ್ ವಸೂಲಿಯ ಪರವಾದ ನಿಯಮಗಳನ್ನು ರೂಪಿಸುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಡಿದ್ದರೂ ಸರಕಾರದಿಂದ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ನಿಯಮಗಳ ಸುತ್ತೋಲೆಗಳನ್ನು ಪ್ರಕಟಿಸಿಲ,್ಲ ಅದೇ ರೀತಿ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ 25 ಶೆಕಡಾ ಸೀಟನ್ನು ಉಚಿತವಾಗಿ ನೀಡಬೇಕಾದ ಶಿಕ್ಷಣ ಸಂಸ್ಥೆಗಳು ಮತೀಯ ಮತ್ತು ಭಾಷಾ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂದು ಹೇಳಿ ರಿಯಾಯಿತಿ ಪದೆದು ಕಾಯ್ದೆಯಿಂದ ಹೊರಗುಳಿದಿದ್ದು ಈ ಶಿಕ್ಷಣ ಸಂಸ್ಥೆಗಳು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಯಾವ ರೀತಿಯ ವಿನಾಯಿತಿ ನೀಡಿದ್ದಾರೆ ಏಂದು ಪ್ರಶ್ನಿಸಿದರು.
ಈ ಹಕ್ಕೊತ್ತಾಯ ಧರಣಿಯ ನೇತೃತ್ವವನ್ನು ಎಸ್.ಎಫ್.ಐ ಜಿಲ್ಲಾ ಜೊತೆ ಕಾರ್ಯದರ್ಶಿಯಾದ ಮಾಧುರಿ ಬೋಳಾರ್,ತುಳಸಿದಾಸ್ ವಿಟ್ಲ,ಉಪಾಧ್ಯಕ್ಷರಾದ ಹಂಝ ಕಿನ್ಯಾ,ಅಶ್ವಿದ್ ಉಳ್ಳಾಲ್ ಹಾಗೂ ಮುಖಂಡರಾದ ಮಧುವಂತ್ ಬಜಾಲ್,ಮುಯೂರಿ,ಚಸ್ಮಿತ,ಅಭಿಶೇಕ್ ವಹಿಸಿದ್ದರು.


Spread the love

Exit mobile version