Home Mangalorean News Kannada News ಅಕ್ರಮ ಬೆಟ್ಟಿಂಗ್ ದಂಧೆ – ಮೂವರು ಕ್ರಿಕೆಟ್ ಬುಕ್ಕಿಗಳ ಬಂಧನ

ಅಕ್ರಮ ಬೆಟ್ಟಿಂಗ್ ದಂಧೆ – ಮೂವರು ಕ್ರಿಕೆಟ್ ಬುಕ್ಕಿಗಳ ಬಂಧನ

Spread the love

ಅಕ್ರಮ ಬೆಟ್ಟಿಂಗ್ ದಂಧೆ – ಮೂವರು ಕ್ರಿಕೆಟ್ ಬುಕ್ಕಿಗಳ ಬಂಧನ

ಮಂಗಳೂರು: ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿಕೊಂಡ ಮೂವರನ್ನು ಮಂಗಳೂರು ಉತ್ತರ ರೌಡಿ ನಿಗ್ರಹ ದಳ ಮತ್ತು ಕಾವೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಮಂಗಳೂರು ಉಳಾಯಿಬೆಟ್ಟು ನಿವಾಸಿ ಮಯ್ಯದ್ದಿ (37), ಮೂಡುಶೆಡ್ಡೆ ನಿವಾಸಿ ಉಮೇಶ್ (47) ಮತ್ತು ಗುರುಪುರ ನಿವಾಸಿ ಕುಮಾರ ಶೆಟ್ಟಿ (39) ಎಂದು ಗುರುತಿಸಲಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಂಗಳೂರು ನಗರದ ಕಾವೂರು ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗಾಲ್ಪ್ ಕ್ಲಬ್ ಬಳಿ ಮಯ್ಯದ್ದೀ, ಕುಮಾರ್ ಮತ್ತು ಉಮೇಶ್ ಎಂಬವರು M market Play 63 Online, ಮತ್ತು M Market Play 63 online ಎಂಬ ಬೆಟ್ಟಿಂಗ್ ಮೊಬೈಲ್ ಅಪ್ಲಿಕೇಶನ್ ಮೂಲಕ RCB Vs Rajasthan Royals ಮಧ್ಯೆ ನಡೆಯುತ್ತಿರುವ ಏಕದಿನ ಕ್ರಿಕೆಟ್ ಮ್ಯಾಚ್ ಗೆ ಸಂಬಂಧಪಟ್ಟು , ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಾ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆ ಭಾತ್ಮಿದಾರರಿಂದ ಮಾಹಿತಿ ದೊರಕಿದ್ದು, ಅಲ್ಲದೇ ಇವರು ಬೆಟ್ಟಿಂಗ್ ನಲ್ಲಿ ಸಂಗ್ರಹವಾದ ಹಣವನ್ನು ಪಡೆದುಕೊಂಡು ಹೋಗಲು ಸದ್ರಿ ಸ್ಥಳಕ್ಕೆ ವಿಶಾಲ್ ಮತ್ತು ಅಶೋಕ್ ಎಂಬವರು ಬರುವ ಬಗ್ಗೆ ಹಾಗೂ ಈ ಇಬ್ಬರು ವ್ಯಕ್ತಿಗಳು ಈ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್ ನನ್ನು ಡೌನ್ ಲೋಡ್ ಮಾಡಿಕೊಡುವ ಬಗ್ಗೆ ಮಂಗಳೂರು ನಗರ ಉತ್ತರ ಉಪವಿಭಾಗ ರೌಡಿ ನಿಗ್ರಹ ದಳಕ್ಕೆ ಮಾಹಿತಿ ದೊರೆತ ಮೇರೆಗೆ ರೌಡಿ ನಿಗ್ರಹ ದಳದ ಪೊಲೀಸ್ ಉಪ ನಿರೀಕ್ಷಕರಾದ ಶೀತಲ್ ಅಲಗೂರು ಮತ್ತು ಅವರ ತಂಡ ಮಾಹಿತಿಯನ್ನು ಕೂಡಲೇ ಕಾವೂರು ಪೊಲೀಸ್ ನಿರೀಕ್ಷಕರಿಗೆ ಬರವಣಿಗೆಯಲ್ಲಿ ನೀಡಿ ಪೊಲೀಸ್ ನಿರೀಕ್ಷಕರು ಮತ್ತು ರೌಡಿ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾತ್ಮೀದಾರರು ತಿಳಿಸಿದ ಸ್ಳಳಕ್ಕೆ ಜಂಟಿಯಾಗಿ ಧಾಳಿ ನಡೆಸಿ ಕ್ರಿಕೇಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದ ಮಯ್ಯದ್ದೀ, ಕುಮಾರ್ ಮತ್ತು ಉಮೇಶ್ ಎಂಬವರನ್ನು ವಿಚಾರಿಸಿ ಅವರುಗಳು ಕ್ರಿಕೇಟ್ ಬೆಟ್ಟಿಂಗ್ ಅಕ್ರಮ ದಂಧೆಗೆ ಉಪಯೋಗಿಸುತ್ತಿದ್ದ ಆ್ಯಪ್ ಹೊಂದಿರುವ ಮೊಬೈಲ್, ಅವರುಗಳು ಸಾರ್ಜನಿಕರಿಂದ ಅಕ್ರಮ ಬೆಟ್ಟಿಂಗ್ ದಂಧೆಗೆ ಸಂಗ್ರಹಿಸಿದ್ದ ಹಣವನ್ನು ಪಂಚರ ಸಮಕ್ಷಮ ಸ್ವಾಧೀನಪಡಿಸಿಕೊಂಡು ಅವರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುವಲ್ಲಿ ಯಶಸ್ವೀಯಾಗಿರುತ್ತಾರೆ.

ಬಂಧಿತರಿಂದ 4 ಮೊಬೈಲ್ ಮತ್ತು ರೂ 26000 ನಗದು ಸೇರಿದಂತೆ ಒಟ್ಟು 66000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀನಿವಾಸ್ ಆರ್. ಗೌಡ. ಐ.ಪಿ.ಎಸ್. ಇವರ ನೇತ್ರತ್ವದಲ್ಲಿ ಪಣಂಬೂರು ಪೊಲೀಸ್ ನಿರೀಕ್ಷಕರಾದ ಕೆ. ಆರ್. ನಾಯಕ್. ಮಂಗಳೂರು ಉತ್ತರ ಉಪವಿಭಾಗ ರೌಡಿ ನಿಗ್ರಹದಳದ ಪೊಲೀಸ್ ಉಪ ನಿರೀಕ್ಷಕ ರಾದ ಶೀತಲ್ ಅಲಗೂರು, ರೌಡಿ ನಿಗ್ರಹದಳದ ಎ.ಎಸ್. ಐ. ಮೊಹಮ್ಮದ್, ಕುಶಲ ಮಣಿಯಾಣಿ, ಸತೀಶ್ ಎಂ. ವಿಜಯ ಕಾಂಚನ್, ಇಸಾಕ್, ಶರಣ್ ಕಾಳಿ ಮತ್ತು ಕಾವೂರು ಪೊಲೀಸರ ಪರಿಶ್ರಮದಿಂದ ನಡೆದಿರುತ್ತದೆ.


Spread the love

Exit mobile version