Home Mangalorean News Kannada News ಅಕ್ರಮ ಮರಳುಗಾರಿಕೆಗೆ ದಾಳಿ; ರೂ. 79.75 ಲಕ್ಷ ಮೌಲ್ಯದ ಸೊತ್ತು ವಶ

ಅಕ್ರಮ ಮರಳುಗಾರಿಕೆಗೆ ದಾಳಿ; ರೂ. 79.75 ಲಕ್ಷ ಮೌಲ್ಯದ ಸೊತ್ತು ವಶ

Spread the love

ಅಕ್ರಮ ಮರಳುಗಾರಿಕೆಗೆ ದಾಳಿ; ರೂ. 79.75 ಲಕ್ಷ ಮೌಲ್ಯದ ಸೊತ್ತು ವಶ

ಕಾರ್ಕಳ: ಅಕ್ರಮವಾಗಿ ಮರಳು ಕಳ್ಳತನ ಮಾಡಿ ಸಾಗಿಸುತ್ತಿರುವ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ರೂ. 79.75 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡ ಘಟನೆ ಕಾರ್ಕಳದಲ್ಲಿ ವರದಿಯಾಗಿದೆ.

ಮಾರ್ಚ್ 8ರಂದು ಬೆಳಗಿನ ಜಾವ 3 ಗಂಟೆಗೆ ಕಾರ್ಕಳ ತಾಲೂಕು ಮ ಮುಂಡ್ಕೂರು ಗ್ರಾಮದ ಪೊಸ್ರಾಲು ಎಂಬಲ್ಲಿರುವ ಶಾಂಭವಿ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿ ಟಿಪ್ಪರ್ ಗಳಿಗೆ ಲೋಡು ಮಾಡುತ್ತಿರುವ ಬಗ್ಗೆ ಕೃಷ್ಣಕಾಂತ್ ಐ.ಪಿ.ಎಸ್, ಸಹಾಯಕ ಪೊಲೀಸ್ ಅಧೀಕ್ಷಕರು ಕಾರ್ಕಳ ಉಪವಿಭಾಗ ಇವರಿಗೆ ದೊರೆತ ವರ್ತಮಾನದಂತೆ ಸ್ಥಳಕ್ಕೆ ಸಿಬ್ಬಂದಿ ಮತ್ತು ಅಧಿಕಾರಿಯವರೊಂದಿಗೆ ದಾಳಿ ನಡೆಸಿ 5 ಟಿಪ್ಪರ್ ಗಳನ್ನು, ಒಂದು ಮೋಟಾರ್ ಸೈಕಲ್, ತೂತುಗಳಿರುವ 10 ಕಬ್ಬಿಣದ ಬಾಲ್ದಿಗಳು, 5 ಹಾರೆಗಳು, 20 ಪ್ಲಾಸ್ಟಿಕ್ ಬುಟ್ಟಿಗಳು , 4 ಕಬ್ಬಿಣದ ಸ್ಟಾಂಡ್ಗಳು , ಹಾಗೂ 6 ಮರದ ಬೋಟುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ದಾಳಿಯ ವೇಳೆ ಆರೋಪಿತರಾದ ಸಂದೀಪ್ ಶೆಟ್ಟಿ, ಮಂಜುನಾಥ ಪೂಜಾರಿ, ವಿಲ್ ಪ್ರೆಡ್ ಮಸ್ಕರೇನಸ್, ಬೀಮಪ್ಪ , ಮರಿಯಪ್ಪ, ವಾಲ್ಟರ್, ಲಕ್ಷ್ಮಣ್ ಇವರು ಮುಂಡ್ಕೂರು ಗ್ರಾಮದ ಪೊಸ್ರಾಲು ಎಂಬಲ್ಲಿ ಶಾಂಭವಿ ನದಿಯಿಂದ ದೋಣಿಗಳನ್ನು ಉಪಯೋಗಿಸಿಕೊಂಡು ಮರಳನ್ನು ಕಳ್ಳತನ ಮಾಡಿದ್ದು ಆರೋಪಿತರ ಪೈಕಿ ದೀಪಕ್ ಕೋಟಿಯಾನ್ ಇನ್ನಾ ಓಡಿ ಹೋಗಿರುತ್ತಾರೆ.

ದಾಳಿಯ ವೇಳೆ ಸ್ವಾಧೀನ ಪಡಿಸಿದ ಸೊತ್ತುಗಳ ಮೌಲ್ಯ 79,75,000/- ಆಗಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ದದೆ.


Spread the love

Exit mobile version