ಅಕ್ರಮ ಮರಳುಗಾರಿಕೆ ಆರೋಪ- 12 ಲಕ್ಷ ರೂ. ಮೌಲ್ಯದ ಸೊತ್ತು ವಶ

Spread the love

ಅಕ್ರಮ ಮರಳುಗಾರಿಕೆ ಆರೋಪ- 12 ಲಕ್ಷ ರೂ. ಮೌಲ್ಯದ ಸೊತ್ತು ವಶ

ಬಂಟ್ವಾಳ: ಮಣಿನಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ಸೋಮವಾರ ತಡರಾತ್ರಿ ನಾಡದೋಣಿಗಳ ಸಹಾಯದಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಟ್ವಾಳ ಎಎಸ್ಪಿ ಸೋನಾವಣೆ ರಿಷಿಕೇಶ್ ಭಗವಾನ್ ನೇತೃತ್ವದ ಪೊಲೀಸರ ತಂಡ ಪತ್ತೆ ಹಚ್ಚಿ 12 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ

ದಿನಾಂಕ 16.10.2018 ರಂದು ರಾತ್ರಿ 12.30 ಗಂಟೆಗೆ ಬಂಟ್ವಾಳ ಉಪ ವಿಬಾಗದ ಸಹಾಯಕ ಪೊಲೀಸ್ ಅಧಿಕ್ಷಕರಾದ ಶ್ರೀ ಸೋನವಣೆ ಋಷಿಕೇಶ್ ಭಗವಾನ್ ರವರಿಗೆ ದೊರೆತ ಖಚಿತ ಮಾಹಿತಿಯಂತೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರಿಕ್ಷಕರು ಹಾಗೂ ಸಿಬ್ಬಂದಿಗಳನ್ನು ಜೊತೆಗೆ ಕರೆದುಕೊಂಡು ಬಂಟ್ವಾಳ ತಾಲೂಕು ಮಣಿ ನಾಲ್ಕೂರು ಗ್ರಾಮದ ಅಜಿಲ ಮೊಗ್ರು ಎಂಬಲ್ಲಿ ರಾತ್ರಿ 1.00 ಗಂಟೆಗೆ ದಾಳಿ ನಡೆಸಿದಾಗ 2 ನಾಡ ದೊಣಿಗಳ ಸಹಾಯದಿಂದ ಮರಳು ಗಾರಿಕೆ ನಡೆಸಿ ದಡದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಮರಳನ್ನು ಲೋಡು ಮಾಡಿತ್ತಿದ್ದು ಇಲಾಖಾ ಜೀಪನ್ನು ಕಂಡು ಮರಳುಗಾರಿಕೆಯಲ್ಲಿ ತೊಡಗಿದ್ದವರು ಅಲ್ಲಿಂದ ಓಡಿಹೋಗಿ ತಪ್ಪಿಸಿಕೊಂಡಿದ್ದು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಮರಳನ್ನು ಕಳ್ಳತನ ನಡೆಸಿ ಲಾರಿಗೆ ಲೋಡು ಮಾಡುತ್ತಿರುವುದು ಧ್ರಡಪಟ್ಟಮೇರೆಗೆ ಈ ಕೆಳಗಿನ ಸೊತ್ತುಗಳನ್ನು ಸ್ವಾದೀನ ಪಡಿಸಿಕೊಳ್ಳಲಾಯಿತು.

1. ಕೆಎ 19 ಎಎ2312 ನೇ ಟಿಪ್ಪರ್ ಲಾರಿ ಅದರಲ್ಲಿ ಬಾಗಶಃ ಮರಳು ತುಂಬಿಕೊಂಡಿದ್ದು ಟಿಪ್ಪರ್ ಲಾರಿಯ ಅಂದಾಜು ಮೌಲ್ಯ ರೂ 8 ಲಕ್ಷ ಹಾಗೂ ಅದರಲ್ಲಿದ್ದ ಮರಳಿನ ಮೌಲ್ಯ ರು 500 ಆಗಬಹುದು.

2. ಕಬ್ಬಿಣದ ದೋಣಿಗಳು -2 ಇದರ ಅಂದಾಜು ಮೌಲ್ಯ ರೂ 2,80,000 ಅಗಬಹುದು ಹಾಗೂ ಅದನ್ನು ಚಲಾಯಿಸಲು ಬಳಸುವ ಪೆಟ್ರೊಲ್ ಇಂಜಿನ್ 2 ಅಂದಾಜು ಮೌಲ್ಯ ರೂ 80,000 ಅಗಬಹುದು.ಹಾಗೂ ಪ್ರತಿ ದೊಣಿಯಲ್ಲಿ ಸುಮಾರು 2 ಟಿಪ್ಪರ್ ಲೋಡಿನಷ್ಟು ಮರಳು ತುಂಬಿದ್ದು ಅಂದಾಜು ಮೌಲ್ಯ ರೂ 12,000 ಆಗಬಹುದು.

ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ ರೂ 11,72,500 ಆಗಬಹುದು. ಸದ್ರಿ ವಶಪಡಿಸಿಕೊಂಡ ಮೇಲಿನ ಎಲ್ಲಾ ಸೊತ್ತುಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ.

ದಾಳಿಯಲ್ಲಿ ಬಂಟ್ವಾಳ ಉಪ ವಿಬಾಗದ ಮಾನ್ಯ ಸಹಾಯಕ ಪೊಲೀಸ್ ಅಧಿಕ್ಷಕರಾದ ಶ್ರೀ ಸೋನವಣೆ ಋಷಿಕೇಶ್ ಭಗವಾನ್ , ಬಂಟ್ವಾಳ ವೃತ್ತ ನಿರೀಕ್ಷಕರಾದ ಶ್ರೀ ಟಿ.ಡಿ.ನಾಗರಾಜ್, ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಪ್ರಸನ್ನ ಎಮ್ .ಎಸ್ ಹಾಗೂ ಸಿಬ್ಬಂದಿಗಳಾದ ಸುಂದರ, ಮಾದವ, ಬಸವರಾಜ್, ಕಿರಣ್, ಸತ್ಯ ಪ್ರಕಾಶ್ ಮೊದಲಾದವರು ಪಾಲ್ಗೊಂಡಿದ್ದರು.


Spread the love