ಅಕ್ರಮ ಮರಳು ಅಡ್ಡೆಗೆ ದಾಳಿ
ಮಂಗಳೂರು: ಅಕ್ರಮವಾಗಿ ದಾಸ್ತಾನು ಮಾಡಿದ ಮರಳು ಅಡ್ಡೆಗೆ ಉಳ್ಳಾಲ ಪೋಲಿಸರು ಮತ್ತು ಗಣಿಇಲಾಖೆ ದಾಳಿ ನಡೆಸಿ ಮರಳನನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ. 27-01-2018 ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಜೋಸೆಫ್ ನಗರ ಎಂಬ ಸ್ಥಳದಲ್ಲಿ ಸಾಮಾನ್ಯ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಇಟ್ಟಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಸದ್ರಿ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್ ರವರು ದಾಳಿ ಮಾಡಿ ಅಕ್ರಮ ಮರಳು ದಾಸ್ತಾನು ಅಡ್ಡೆಯ ನ್ನು ಪತ್ತೆ ಮಾಡಿ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕರೆಸಿಕೊಂಡು ಸುಮಾರು 1,000 ಟನ್ (ಸುಮಾರು 100 ಲೋಡ್) ಮರಳನ್ನು ವಶಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡಿರುವ ಮರಳಿನ ಅಂದಾಜು ಒಟ್ಟು ಮೌಲ್ಯ ರೂ.7,00,000/- ಆಗಿರುತ್ತದೆ. ಪತ್ತೆಯಾದ ಅಕ್ರಮ ಮರಳನ್ನು ಯಾರು ಯಾವ ಕಾರಣಕ್ಕಾಗಿ ಕಳವು ಮಾಡಿ ದಾಸ್ತಾನು ಮಾಡಿರುತ್ತಾರೆಯೇ ಎಂಬ ಬಗ್ಗೆ ತಿಳಿದುಕೊಳ್ಳಲು ತನಿಖೆ ಕೈಗೊಳ್ಳಲಾಗಿರುತ್ತದೆ. ಸದ್ರಿ ಮರಳನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಉಪ-ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮಂಗಳೂರು ರವರು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಉಳ್ಳಾಲ ಪೊಲೀಸ್ ಠಾಣಾ ಪೊಲಿಸ್ ನಿರೀಕ್ಷಕರಾದ ಗೋಪಿಕೃಷ್ಣ,ಕೆ.ಆರ್, ಮತ್ತು ಪೊಲೀಸ್ ಉಪ-ನಿರೀಕ್ಷಕರಾದ ವಿನಾಯಕ ತೋರಗಲ್ ಹಾಗೂ ಎಎಸ್ಐ, ಶಾಂತಪ್ಪ, ಸಿಬ್ಬಂದಿಗಳಾದ ಹೆಚ್.ಸಿ.411 ಸುರೇಶ್, ಮಹೆಚ್ಸಿ 2247 ಹೇಮಲತಾ, ಸಿಪಿಸಿ 553, ಲಿಂಗರಾಜ್, ಸಿಪಿಸಿ 559.ಬಸವರಾಜ್, ಸಿಪಿಸಿ 386 ರಂಜಿತ್, ಸಿಪಿಸಿ 481 ಚಂದ್ರ ನಾಯ್ಕ್ ರವರುಗಳು ಸಹಕರಿಸಿರುತ್ತಾರೆ. ಅಕ್ರಮ ಮರಳುಗಾರಿಕೆ, ಸಾಗಾಟ, ದಾಸ್ತಾನು, ಕಳವು, ಮಾರಾಟದ ಬಗ್ಗೆ ಮಾಹಿತಿಗಳು ಇದ್ದಲ್ಲಿ ಠಾಣಾಧಿಕಾರಿಯವರಿಗೆ ಮತ್ತು ಇಲಾಖಾ ಮೇಲಾಧಿಕಾರಿಯವರಿಗೆ ನೇರವಾಗಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಕೋರಲಾಗಿದೆ. ನೀಡಲಾಗುವ ಖಚಿತ ಮಾಹಿತಿಯ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುವುದು.