ಅಕ್ರಮ ಮರಳು ಅಡ್ಡೆಗೆ ದಾಳಿ; ರೂ 15 ಲಕ್ಷ ಮೊತ್ತದ ಸೊತ್ತು ವಶ

Spread the love

ಅಕ್ರಮ ಮರಳು ಅಡ್ಡೆಗೆ ದಾಳಿ; ರೂ 15 ಲಕ್ಷ ಮೊತ್ತದ ಸೊತ್ತು ವಶ

ಮಂಗಳೂರು: ದಕ ಜಿಲ್ಲೆಗೆ ನೂತನವಾಗಿ ಆಗಮಿಸಿ ಅಧಿಕಾರ ವಹಿಸಿಕೊಂಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಮರಳು ಮಾಫಿಯಾದ ವಿರುದ್ದ ಸಮರ ಸಾರಿದ್ದು, ಬಂಟ್ವಾಳದಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಧಾಳಿ ನಡೆಸಿ ಸುಮಾರು 15 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಫೆಬ್ರವರಿ 4 ರಂದು   ಖಚಿತ ಮಾಹಿತಿಯ ಮೇರೆಗೆ ಮಾನ್ಯ ಎಸ್.ಪಿ. ರವಿಕಾಂತೇಗೌಡ, IPS ರವರ ಮಾರ್ಗದರ್ಶನದಲ್ಲಿ ಅಡಿಷನಲ್ ಎಸ್ ಪಿ ಸಜಿತ್ ರವರ ನೇತೃತ್ವದಲ್ಲಿ ಬಂಟ್ವಾಳ ತಹಶಿಲ್ದಾರು ಪುರಂದರ ಹೆಗ್ಡೆ, ಡಿ.ಎಸ್.ಬಿ. ಇನ್ಸ್ ಪೆಕ್ಟರ್ ನಾಗರಾಜ್ ಟಿ. ಡಿ. ಮತ್ತು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರ  ತಂಡ  ಠಾಣಾ ವ್ಯಾಪ್ತಿಯ ಅರಳ ಗ್ರಾಮದ  ಮುಲಾರ ಪಟ್ಟಣದ ನೇತ್ರಾವತಿ ನದಿ ದಂಡೆಯಲ್ಲಿ ಅಕ್ರಮವಾಗಿ ನಾಡ ದೋಣಿಯನ್ನು ಬಳಸಿ ಮರಳು ತೆಗೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಮರಳು ತೆಗೆಯಲು ಬಳಸುತ್ತಿದ್ದ   10 ದೋಣಿ ಯನ್ನು, ಮರಳು ಸಾಗಟಕ್ಕೆ ಬಳಸುತ್ತಿದ್ದ  4 ಟಿಪ್ಪರ್ ಲಾರಿ ಮತ್ತು ಮರಳು ತೆಗೆಯುತ್ತಿದ್ದ  8 ಜನರನ್ನು ವಶಕ್ಕೆ ಪಡೆದಿರುತ್ತಾರೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು 15 ಲಕ್ಷ  ಆಗಿದೆ

 ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ  ಯಲ್ಲಿ  ಅ.ಕ್ರ. 21/2018 ಕಲಂ MMDR 4(1), 4(1A), 21(1),21(1A)21(6) KMMC  Rule 3(1), 31(R), 42,43,44 ಮತ್ತು 379 IPC ಯಂತೆ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆದಿರುತ್ತದೆ.


Spread the love