Home Mangalorean News Kannada News ಅಕ್ರಮ ಮರಳು ಸಾಗಾಟದ ಟಿಪ್ಪರ್ ಲಾರಿಗಳ ವಶ

ಅಕ್ರಮ ಮರಳು ಸಾಗಾಟದ ಟಿಪ್ಪರ್ ಲಾರಿಗಳ ವಶ

Spread the love

ಅಕ್ರಮ ಮರಳು ಸಾಗಾಟದ ಟಿಪ್ಪರ್ ಲಾರಿಗಳ ವಶ

ಮಂಗಳೂರು : ತಣ್ಣಿರುಬಾವಿ ಮುಖ್ಯ ರಸ್ತೆಯ ಫಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಗಳನ್ನು ಪೋಲಿಸರು ವಶಪಡಿಸಿಕೊಂಡಿದ್ದು ಮರಳು ಧಕ್ಕೆಯ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದವನನ್ನು ವಶಕ್ಕೆ ಪಡೆದಿದ್ದಾರೆ.

ಜನವರಿ 1 ರಂದು ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಆರ್.ಶ್ರೀನಿವಾಸ್ ಗೌಡ, ಐ.ಪಿ.ಎಸ್ ರವರು ಹೊಸ ವರ್ಷದ ನಿಮಿತ್ತ ವಿಶೇಷ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಕುದುರೆಮುಖ ಜಂಕ್ಷನ್ – ತಣ್ಣಿರುಬಾವಿ ಮುಖ್ಯ ರಸ್ತೆಯ ಫಲ್ಗುಣಿ ನದಿ ತೀರದಲ್ಲಿ ಅಕ್ರಮವಾಗಿ ಯಾವುದೇ ಪರವಾನಗೆ ಇಲ್ಲದೇ ಮರಳನ್ನು ಲಾರಿಗೆ ಲೋಡ್ ಮಾಡುತ್ತಿರುವುದನ್ನು ಕಂಡು ಬೆನ್ನಟ್ಟಿ ದಾಳಿ ನಡೆಸಿ ವಿಚಾರಿಸಿದಾಗ ರಾಮಚಂದ್ರ ಎಂಬವರ ಮರಳು ಧಕ್ಕೆಯಿಂದ ಲೋಡ್ ಮಾಡುತ್ತಿದ್ದ ಮರಳು ಇರುವ ಟಿಪ್ಪರ್ ಲಾರಿ ಕೆಎ 06 ಬಿ 6745ನೇಯದನ್ನು ಮತ್ತು ಅದರ ಚಾಲಕನನ್ನು , ಮರಳು ಧಕ್ಕೆಯ ವ್ಯವಹಾರ ನೋಡಿಕೊಳ್ಳುತ್ತಿದ್ದವನನ್ನು ವಶಕ್ಕೆ ಪಡೆದಿದ್ದು ಹಾಗೂ ಅದರ ಬಳಿಯಲ್ಲಿದ್ದ ಮರಳು ಲೋಡಿಗೆ ಬಂದಿದ್ದ ಕೆಎ 20 ಡಿ 6629 ಮತ್ತು ಕೆಎ 20 ಡಿ 7896ನೇ ಖಾಲಿ ಟಿಪ್ಪರ್ ಲಾರಿಯನ್ನು ಸಹ ವಶಕ್ಕೆ ಪಡೆದುಕೊಂಡಿದ್ದು ಅದರ ಚಾಲಕರು ಓಡಿ ಪರಾರಿಯಾಗಿರುತ್ತಾರೆ.

ಈ ವೇಳೆ ಪೋಲಿಸರು ಮೂರು ಟಿಪ್ಪರ್ ಲಾರಿ ಹಾಗೂ ಮರಳು ಧಕ್ಕೆ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಕೆಮ್ತೂರು ನಿವಾಸಿ ಕನಕಪ್ಪ (32) ಮತ್ತು ಸುರತ್ಕಲ್ ಕಾಟಿಪಳ್ಳ ನಿವಾಸಿ ಗಣೇಶ್ ಝಿ (26) ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಆರ್.ಶ್ರೀನಿವಾಸ್ ಗೌಡ, ಐ.ಪಿ.ಎಸ್ ರವರು ಹಾಗೂ ಪಣಂಬೂರು ಠಾಣಾ ಪಿ.ಐ ರಫೀಕ್ ಕೆ.ಎಮ್, ಪಿ.ಎಸ್.ಐ ಉಮೇಶ್ ಕುಮಾರ್.ಎಂ.ಎನ್ ಹಾಗೂ ಪಣಂಬೂರು ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.


Spread the love

Exit mobile version