ಅಕ್ರಮ ಮರ ಸಾಗಾಟ – ಸೊತ್ತು ವಶ

Spread the love

ಅಕ್ರಮ ಮರ ಸಾಗಾಟ – ಸೊತ್ತು ವಶ

ಉಪ್ಪಿನಂಗಡಿ : ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮರದ ದಿಮ್ಮಿಗಳನ್ನು ಸಾಗಿಸತ್ತಿದ್ದ ವೇಳೆ ತಡೆದು ಉಪ್ಪಿನಂಗಡಿ ಪೊಲೀಸರು ಕೇಸು ದಾಖಲಿಸಿದ ಘಟನೆ ನಡೆದಿದೆ.

ಭಾನುವಾರದಂದು ತೆಕ್ಕಾರು ಗ್ರಾಮದ ಅಜಿಲ ಮೊಗ್ರು ಸೇತುವೆ ಬಳಿ ಮದ್ಯಾಹ್ನ 13.45 ಪಿಕಪ್ ವಾಹನ ಕೆಎ:18-A-3924 ನೇದರಲ್ಲಿ ಯಾವುದೇ ಪರವಾಣಿಗೆ ಯಾ ದಾಖಲಾತಿಗಳಿಲ್ಲದೇ ಸರಕಾರದ ಅರಣ್ಯ ಸೊತ್ತಾದ ಹಲಸು ಜಾತಿಯ ಮರಗಳನ್ನು ಅಕ್ರಮವಾಗಿ ಎಲ್ಲಿಂದಲೊ ಕಡಿದು ಕಳವು ಮಾಡಿಕೊಂಡು ದಿಮ್ಮಿಗಳನ್ನು ಲೋಡ್ ಮಾಡಿ ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನವನ್ನು ಹಾಗೂ ಮರದ ದಿಮ್ಮಿಗಳನ್ನು , ಮಹಜರು ಮುಖೇನಾ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆರೋಪಿ ಪಿಕಪ್ ಚಾಲಕ ಶಾಂತಿಪ್ರಸಾದ್ ವಶಕ್ಕೆ ಪಡೆದುಕೊಂಡಿದ್ದು, ಮತ್ತೋರ್ವ ಆಪಾದಿತ ಹಕೀಂ ಓಡಿ ಪರಾರಿಯಾಗಿರುತ್ತಾನೆ. ಸ್ವಾಧೀನಪಡಿಸಿಕೊಂಡ ಮರದ ದಿಮ್ಮಿಗಳ ಅಂದಾಜು ಮೌಲ್ಯ ರೂ:25,000/- ಹಾಗೂ ಪಿಕಪ್ ವಾಹನದ ಅಂದಾಜು ಮೌಲ್ಯ ರೂ: 1.15 ಲಕ್ಷ ಆಗಬಹುದು, ಒಟ್ಟು ಎಲ್ಲಾ ಸೊತ್ತುಗಳ ಮೌಲ್ಯ: 1,40,000/- ಆಗಬಹುದು

ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Spread the love