Home Mangalorean News Kannada News ಅಕ್ರಮ ವೀಡಿಯೋ ಗೇಮ್ ಸೆಂಟರಿಗೆ ಧಾಳಿ 14 ಮಂದಿ ಬಂಧನ

ಅಕ್ರಮ ವೀಡಿಯೋ ಗೇಮ್ ಸೆಂಟರಿಗೆ ಧಾಳಿ 14 ಮಂದಿ ಬಂಧನ

Spread the love

ಅಕ್ರಮ ವೀಡಿಯೋ ಗೇಮ್ ಸೆಂಟರಿಗೆ ಧಾಳಿ 14 ಮಂದಿ ಬಂಧನ

ಮಂಗಳೂರು: ಮಂಗಳೂರು ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ವೀಡಿಯೋ ಗೇಮ್ ಎಂಬ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿದ ಮಂಗಳೂರು ಸಿಸಿಬಿ ಪೊಲೀಸರು ಒಟ್ಟು 14 ಮಂದಿಯನ್ನು ಹಾಗೂ ವೀಡಿಯೋ ಗೇಮ್ ಮೆಶಿನ್ ಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಬಂಧಿತರನ್ನು ಸುಶಾಂತ್ ಬಂಗೇರ, ಸಂದೇಶ್, ದಾಸಪ್ಪ, ಪ್ರಶಾಂತ್, ರಾಹುಲ್, ಶಿವಾನಂದ, ಇಬ್ರಾಹಿಂ, ಪವನ್ ಕುಮಾರ್, ಮುಸ್ತಾಫ, ಮೊಹಮ್ಮದ್ ಇಕ್ಬಾಲ್, ವಸಂತ ಕುಮಾರ್, ಹರ್ಷಿತ್, ಪ್ರಕಾಶನ್, ಅಕ್ಬರ್ ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮಂಗಳೂರು ನಗರದ ಪಂಪ್ ವೆಲ್ ಲಕ್ಷ್ಮಿ ಆರ್ಕೆಡ್ ಕಟ್ಟಡದ 2 ನೇ ಮಹಡಿಯ ಮಾನಸ ರಿಕ್ರಿಯೇಶನ್ ಕ್ಲಬ್ ನಲ್ಲಿ ವೀಡಿಯೋ ಗೇಮ್ ಎಂಬ ಅದೃಷ್ಠದ ಆಟವಾಡುತ್ತಿದ್ದ ಆರೊಪಿಗಳನ್ನು ವಶಕ್ಕೆ ಪಡೆದುಕೊಂಡು ಅವರಿಂದ ಒಟ್ಟು ರೂ. 32,100/- ನಗದು ಹಾಗೂ ಜೂಜಾಟಕ್ಕೆ ಬಳಸಿದ ವೀಡಿಯೋ ಗೇಮ್ ಮೆಶಿನ್ ಗಳು-3, ಹೀಗೆ ಒಟ್ಟು ರೂ. 1,15,100/- ಮೊತ್ತದ ಸೊತ್ತನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ.

ಸಿಸಿಬಿ ಘಟಕದ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯ್ಕ್ ಮತ್ತು ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love

Exit mobile version