ಅಕ್ಷತಾ ಪ್ರಕರಣ ಬೈಂದೂರಿನಲ್ಲಿ ಬೃಹತ್ ಪ್ರತಿಭಟನೆ

Spread the love

ಬೈಂದೂರು: ಅಮಾನುಷವಾಗಿ ಕೊಲೆಗೀಡಾದ ಬೈಂದೂರು ಪದವಿಪೂರ್ವ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿನಿ ಅಕ್ಷತಾ ದೇವಾಡಿಗ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ದೇವಾಡಿಗ ಒಕ್ಕೂಟ ಸೋಮವಾರ ಕರೆನೀಡಿದ ಬೈಂದೂರು ಬಂದ್‍ಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಂಪೂರ್ಣ ಯಶಸ್ವಿಯಾಯಿತು. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಾರ್ವಜನಿಕರು ಬೃಹತ್ ಪ್ರತಿಭಟನೆ ನಡೆಸಿದರು.

BYN-Jun22-5-Pratibhatane-   2 BYN-Jun22-5-Pratibhatane-   4 BYN-Jun22-5-Pratibhatane-  3 BYN-Jun22-5-Pratibhatane-1

ಬೈಂದೂರು ಶ್ರೀ ಶಾರದಾ ವೇದಿಕೆಯಲ್ಲಿ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಗಿರೀಶ್ ಬೈಂದೂರು, ಅಕ್ಷತಾ ಪ್ರಕರಣದಂತಹ ಅಮಾನುಷ ದುಷ್ಕøತ್ಯಗಳು ಖಂಡನೀಯವಾಗಿದೆ, ಆರೋಪಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬಹುದಾಗಿದೆ. ಹೇನ್‍ಬೇರ್ ಭಾಗದ ಅರಣ್ಯ ತಪ್ಪಲು ಪ್ರದೇಶದಲ್ಲಿ ಅರಣ್ಯ ಇಲಾಖೆ ಆಕೇಶಿಯಾ ಗಿಡಗಳನ್ನು ನೆಟ್ಟ ಪರಿಣಾಮ, ಕಿಡಿಗೇಡಿಗಳಿಗೆ ಅನೈತಿಕ ಚಟುವಟಿಕೆಗಳನ್ನು ನಡೆಸು ಅಡ್ಡೆಯಾಗಿ ಮಾರ್ಪಟ್ಟಿದೆ. ಇಲಾಖೆ ಕಾಲು ದಾರಿಯಲ್ಲಿರುವ ಅಕೇಶಿಯಾ ಗಿಡಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಶಿರೂರು ಕಾಲೇಜು ವಿದ್ಯಾರ್ಥಿನಿ ರತ್ನಾ ಕೊಠಾರಿಯ ಮನೆಯವರಿಗೂ ಕೂಡಾ ಆಕೆಯ ಸಾವಿನ ನ್ಯಾಯ ಸಿಗಬೇಕು. ಪ್ರತಿಭಟನೆ ಮಾಡುವುದು ನಮ್ಮ ಹಕ್ಕು. ಚುನಾವಣಾ ಸಂದರ್ಭದಲ್ಲಿ ರಾಜಕೀಯ ನಾಯಕರಿಗೆ ನಮ್ಮ ನೆನಪು ಆಗುತ್ತದೆ. ಆದರೆ ನಮಗಾದ ಅನ್ಯಾಯ ಖಂಡಿಸಿ ನ್ಯಾಯಕ್ಕಾಗಿ ಪ್ರತಿಭಟಿಸುತ್ತಿದ್ದರೆ ಈ ನಾಯಕರು ಹಿಂದಿನಿಂದ ವ್ಯಂಗ್ಯ ಮಾಡುತ್ತಾರೆ. ಈ ತನಿಖೆಯಲ್ಲಿ ರಾಜಕೀಯ ಮಾಡಿದರೆ ಗಲ್ಲಿ-ಗಲ್ಲಿಯಲ್ಲಿ ಉಗ್ರವಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಶಂಕರ್ ಅಂಕದಕಟ್ಟೆ ಎಚ್ಚರಿಸಿದರು. ಹಲವಾರು ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿದರು. ದೇವಾಡಿಗರ ಒಕ್ಕೂಟಕ್ಕೆ ಜಾತಿ, ಧರ್ಮ ಭೇಧವಿಲ್ಲದೇ ಸಾರ್ವಜನಿಕರೂ ಕೈಜೋಡಿಸಿದರು. ಎಬಿವಿಪಿ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಹೆಚ್ಚಿನ ಕಾವು ಪಡೆದು ಯಶಸ್ವೀಯಾಯಿತು. ಅಹಿತಕರ ಘಟನೆ ನಡೆಯದಂತೆ ಕುಂದಾಪುರ ಡಿವೈಎಸ್‍ಪಿ ಮಂಜುನಾಥ ಶೆಟ್ಟಿ ಸ್ಥಳದಲ್ಲಿದ್ದು, ಬಿಗು ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.

ವಿಶೇಷ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸುವ ಮೊದಲು ಮನವಿಯಲ್ಲಿರುವ ವಿಷಯಗಳನ್ನು ಸಾರ್ವಜನಿಕರಿಗೆ ಓದಿ ತಿಳಿಸಲಾಯಿತು. ಬಳಿಕ ಮನವಿ ಸ್ವೀಕರಿಸಿ ಮಾತನಾಡಿದ ಬೈಂದೂರು ವಿಶೇಷ ತಹಶೀಲ್ದಾರ ಕಿರಣ್ ಜಿ. ಗೌರಯ್ಯ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ಮೊದಲು ಎಬಿವಿಪಿ ಕಾರ್ಯಕರ್ತರು ರಾ.ಹೆ. ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿದರು.


Spread the love