Home Mangalorean News Kannada News ಅಗಸ್ಟ್ 06 ರಂದು ಬ್ಲಡ್ ಹೆಲ್ಪ್ ಲೈನ್ ಪ್ರಥಮ ವರ್ಷಾಚರಣೆ ಮತ್ತು ರಕ್ತದಾನ ಶಿಬಿರ

ಅಗಸ್ಟ್ 06 ರಂದು ಬ್ಲಡ್ ಹೆಲ್ಪ್ ಲೈನ್ ಪ್ರಥಮ ವರ್ಷಾಚರಣೆ ಮತ್ತು ರಕ್ತದಾನ ಶಿಬಿರ

Spread the love

ಅಗಸ್ಟ್ 06 ರಂದು ಬ್ಲಡ್ ಹೆಲ್ಪ್ ಲೈನ್ ಪ್ರಥಮ ವರ್ಷಾಚರಣೆ ಮತ್ತು ರಕ್ತದಾನ ಶಿಬಿರ

ಮಂಗಳೂರು: ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಪ್ರಥಮ ವರ್ಷಾಚರಣೆಯ ಸಂಭ್ರಮ ಮತ್ತು ಸಾರ್ವಜನಿಕ ಬೃಹತ್ ಕರ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ಅಗಸ್ಟ್ 06 ಭಾನುವಾರ ಬೆಳಿಗ್ಗೆ 9ಗಂಟೆಗೆ ಮಂಗಳೂರು ನಗರದ ಫೋರಂ ಫಿಝಾ ಮಾಲ್‍ನಲ್ಲಿ ನಡೆಯಲಿದೆ ಎಂದು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಎಡ್ಮನ್ ಜನಾಬ್ ಇಫ್ತಿಕಾರ್ ಕೃಷ್ಟಾಪುರ ಹೇಳಿದರು. ಅವರು ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಹಾರ ಮತ್ತು ನಾಗರಿಕ ಸರಬರಜು ಸಚಿವ ಜನಾಬ್ ಯು.ಟಿ ಖಾದರ್ ಕಾರ್ಯಕ್ರಮ ಉದ್ಘಾಟಿಸಲ್ಲಿದ್ದಾರೆ. ಮುಖ್ಯ ಆತಿಥಿಗಳಾಗಿ ಅರಣ್ಯ ಸಚಿವ ಬಿ.ರಮಾನಾಥ ರೈ, ಮಂಗಳೂರು ನಗರ ಪೋಲಿಸ್ ಅಯುಕ್ತ ಟಿ.ಆರ್ ಸುರೇಶ್ ಐ.ಪಿ.ಎಸ್, ಮಂಗಳೂರು ಟ್ರಾಫಿಕ್ ಇಲಾಖಾಧಿಕಾರಿ ಹನುಮಂತ್ ರೈ, ಮಂಗಳೂರು ವಿಧಾನ ಸಭಾ ಕ್ಷೇತ್ರ ಶಾಸಕರುಗಳಾದ ಜನಾಬ್ ಬಿ.ಎ ಮೊಯ್ದಿನ್ ಬಾವ, ಜೆ.ಆರ್ ಲೋಬೋ, ಮಂಗಳೂರು ಮಹಾನಗರ ಪಾಲಿಕ ಮೇಯರ್ ಕವಿತಾ ಸನಿಲ್, ಕರ್ನಾಟಕ ಮಹಿಳಾ ಕಾಂಗ್ರೇಸ್ ಪ್ರ.ಕಾರ್ಯದರ್ಶಿ ಪ್ರತಿಭಾ ಕುಳಾಯಿ, ಉದ್ಯಮಿ ಝಕರಿಯಾ ಜೋಕಟ್ಟೆ, ಫೋರಂ ಫಿಝಾ ಮಾಲ್‍ನ ಮಾಲಕ ಬಿ.ಎಂ ಫಾರೂಖ್, ದ.ಕ ಜಿಲ್ಲಾ ಎಸ್‍ಡಿಪಿಐ ಅಧ್ಯಕ್ಷ ಹನೀಫ್ ಖಾನ್ ಕೋಡಾಜೆ, ಗುರುಪುರ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ ಇಬ್ರಾಹೀಂ, ಬ್ಲಡ್ ಹೆಲ್ಪ್ ಲೈನ್ ಸಲಹೆಗಾರ ಮುಸ್ತಫಾ ಅಡ್ಡೂರು ದೆಮ್ಮಲೆ ಮುಂತಾದ ಧಾರ್ಮಿಕ ಹಾಗೂ ರಾಜಕೀಯ ಸಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇಡ್ಮಿನ್‍ಗಳಾದ ಇಫ್ತಿಕಾರ್ ಕೃಷ್ಣಾಪುರ, ಇಮ್ರಾನ್ ಅಡ್ಡೂರು, ಮುಝ್ಮೀಲ್ ನೂಯಿ ಅಡ್ಡೂರು, ಸದಸ್ಯ ಬ್ಯಾರಿ ಝುಲ್ಫಿ, ಸಲಹೆಗಾರ ಮುಸ್ತಫಾ ಅಡ್ಡೂರು ದೆಮ್ಮಲೆ ಉಪಸ್ಥಿತರಿದರು.


Spread the love

Exit mobile version