ಅಗಸ್ಟ್ 11 : ರಾಹುಲ್ ಈಶ್ವರ್ ಅವರಿಂದ ಸಂವಾದ ಕಾರ್ಯಕ್ರಮ

Spread the love

ಅಗಸ್ಟ್ 11 : ರಾಹುಲ್ ಈಶ್ವರ್ ಅವರಿಂದ ಸಂವಾದ ಕಾರ್ಯಕ್ರಮ

ಮಂಗಳೂರು: ಸಧೃಡ ಸಮಾಜ ಮತ್ತು ಅಖಂಡ ರಾಷ್ಟ್ರದ ಕಲ್ಪನೆಯನ್ನು ಸಾಕಾರಗೊಳಿಸುವ ರಾಜಕಿಯೇತರ ಸಂಘಟನೆ ಸಿಟಿಜನ್ ಕೌನ್ಸಿಲ್ ಇದರ ಮಂಗಳೂರು ಘಟಕ ಇದೇ ಶನಿವಾರ, ಅಗಸ್ಟ್ 11 ರಂದು ಸಂಜೆ 6 ಗಂಟೆಗೆ ಪ್ರಖ್ಯಾತ ಲೇಖಕ ರಾಹುಲ್ ಈಶ್ವರ್ ಅವರಿಂದ ಸಂವಾದ ಕಾರ್ಯಕ್ರಮ ಆಯೋಜಿಸಿದೆ.

ಮಂಗಳೂರಿನ ಪ್ರತಾಪನಗರದಲ್ಲಿರುವ ಸಂಘನಿಕೇತನದಲ್ಲಿ “ಶಬರಿಮಲೆ ಸತ್ಯಾನ್ವೇಶಣೆ” ಎನ್ನುವ ವಿಷಯದ ಮೇಲೆ ರಾಹುಲ್ ಈಶ್ವರ್ ಪ್ರಧಾನ ಭಾಷಣ ಮಾಡಲಿದ್ದಾರೆ. ಕೇರಳ ಮೂಲದ ರಾಹುಲ್ ಈಶ್ವರ್ ಅವರು ಶಬರಿಮಲೆಯ ಮುಖ್ಯ ಅರ್ಚಕರಾಗಿರುವ ಕಂಡರಾರು ಮಹೇಶ್ವರರು ಇವರ ಮೊಮ್ಮೊಗ. ಹಿಂದೂಗಳ ಪವಿತ್ರ ಕ್ಷೇತ್ರ ಶಬರಿಮಲೆ ದೇವಸ್ಥಾನಕ್ಕೆ ಹತ್ತರಿಂದ ಐವತ್ತು ವಯಸ್ಸಿನ ಒಳಗಿನ ಮಹಿಳೆಯರ ಪ್ರವೇಶ ನಿಷೇಧ ರದ್ದುಗೊಳಿಸಬೇಕೆನ್ನುವ ವಿಷಯ ಪ್ರಸ್ತುತ ಸಾಕಷ್ಟು ಚರ್ಚೆಯಲ್ಲಿದೆ. ಹಿಂದೂ ವಿರೋಧಿ ನೀತಿ ಅನುಸರಿಸುವ ಕೇರಳ ರಾಜ್ಯ ಸರಕಾರ ಶಬರಿಮಲೆಯ ಪ್ರಾವಿತ್ರ್ಯತೆಗೆ ದಕ್ಕೆ ಮಾಡುವ ಉದ್ದೇಶದಿಂದ ಇಂತಹ ಒಂದು ಕ್ರಮಕ್ಕೆ ಮುಂದಾಗಿದೆ. ರಾಹುಲ್ ಈಶ್ವರ್ ಈ ವಿಷಯದಲ್ಲಿ ಆಳವಾದ ಅಧ್ಯಯನ ನಡೆಸಿದ್ದು ಈ ಬಗ್ಗೆ ಅರ್ಥಗರ್ಭಿತವಾಗಿ ಮಾತನಾಡಬಲ್ಲರು. ಪುಣ್ಯಕ್ಷೇತ್ರ ಶಬರಿಮಲೆಯ ಸಾನಿಧ್ಯ, ಅಲ್ಲಿನ ಐತಿಹಾಸಿಕತೆ ಮತ್ತು ಹತ್ತರಿಂದ ಐವತ್ತು ವರ್ಷ ವಯಸ್ಸಿನ ಮಹಿಳೆಯರ ಪ್ರವೇಶ ನಿಷೇಧದ ಆಚರಣೆ ಮತ್ತು ಎಡಪಕ್ಷಗಳ ಕುತಂತ್ರದ ಕುರಿತು ಅವರು ಮಾತನಾಡಲಿದ್ದಾರೆ. ಮಂಗಳೂರಿನ ಪ್ರಜ್ಞಾವಂತ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಿಟಿಜನ್ ಕೌನ್ಸಿಲ್ ಪ್ರಕಟನೆಯಲ್ಲಿ ವಿನಂತಿಸಿದೆ.


Spread the love