ಅಗಸ್ಟ್ 18 : ಉಡುಪಿ ಜಿಲ್ಲೆಯಲ್ಲಿ ಮತ್ತೆ ಏರಿಕೆ ಕಂಡ ಕೊರೋನಾ, 421 ಮಂದಿಗೆ ಪಾಸಿಟಿವ್ ದೃಢ
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 421 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8659 ಕ್ಕೆ ಏರಿಕೆಯಾಗಿದೆ.
ಸೋಂಕಿತರಲ್ಲಿ ಉಡುಪಿಯ 203, ಕುಂದಾಪುರದ 158, ಕಾರ್ಕಳದ 50 ಹಾಗೂ ಇತರೆ ಜಿಲ್ಲೆಗಳ 10 ರೋಗಿಗಳು ಇದ್ದಾರೆ. 142 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 279 ಮಂದಿಗೆ ಲಕ್ಷಣಗಳು ಇಲ್ಲ.
ಪ್ರಾಥಮಿಕ ಸಂಪರ್ಕದಿಂದ 150, ಐಎಲ್ಐ ಲಕ್ಷಣಗಳಿರುವ 90, ‘ಸಾರಿ’ ಲಕ್ಷಣಗಳಿರುವ 17 ಹಾಗೂ ಹೊರ ಜಿಲ್ಲೆಗಳ ಪ್ರಯಾಣ ಹಿನ್ನೆಲೆ ಹೊಂದಿರುವ 6 ಮಂದಿಗೆ ಸೋಂಕು ತಗುಲಿದ್ದು, 158 ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 1837 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಮಂಗಳವಾರ 1200 ವರದಿಗಳು ನೆಗೆಟಿವ್ ಬಂದಿದ್ದು, 421 ಪಾಸಿಟಿವ್ ಬಂದಿವೆ. 1086 ವರದಿಗಳು ಬರುವುದು ಬಾಕಿ ಇದೆ.
ಜಿಲ್ಲೆಯಲ್ಲಿ ಮಂಗಳವಾರ 321 ಮಂದಿ ಗುಣಮುಖರಾಗಿದ್ದು ಇದುವರೆಗೂ 5951 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2637 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 78ಮಂದಿ ಸಾವನಪ್ಪಿದ್ದಾರೆ