ಅಗಸ್ಟ್ 26: ಮಾದಕ ವ್ಯಸನ ವಿರೋಧಿ ಅಭಿಯಾನದ ಪ್ರಯುಕ್ತ ಸೈಕ್ಲಾಥಾನ್

Spread the love

ಅಗಸ್ಟ್ 26: ಮಾದಕ ವ್ಯಸನ ವಿರೋಧಿ ಅಭಿಯಾನದ ಪ್ರಯುಕ್ತ ಸೈಕ್ಲಾಥಾನ್

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್, ಉಡುಪಿ ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಇವರ ಜಂಟಿ ಸಹಯೋಗದೊಂದಿಗೆ ಆಯೋಜಿಸಿರುವ ಎರಡು ತಿಂಗಳುಗಳ ಕಾಲ ಮಾದಕ ವ್ಯಸನ ವಿರೋಧಿ ಅಭಿಯಾನದ ಪ್ರಯುಕ್ತ ಸೈಕ್ಲಾಥನ್ ಕಾರ್ಯಕ್ರಮವನ್ನು ಭಾನುವಾರ ಅಗಸ್ಟ್ 26ರಂದು ಬೆಳಿಗ್ಗೆ ಉಡುಪಿಯಲ್ಲಿ ಆಯೋಜಿಸಲಾಗಿದೆ.

ಸೈಕ್ಲಥಾನ್ ಕಾರ್ಯಕ್ರಮ ಬೆಳಿಗ್ಗೆ 6 ಗಂಟೆಗೆ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಇದರ ಮುಂಬಾಗದಲ್ಲಿ ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಹಸಿರು ನಿಶಾನೆ ತೋರಲಿದ್ದಾರೆ.

ಸೈಕ್ಲಾಥಾನ್ ಮಾರ್ಗವು ಈ ರೀತಿ ಇದೆ. ಬಡಗಬೆಟ್ಟು ಕೋ ಅಪರೇಟಿವ್ ಸೊಸೈಟಿ ಬಳಿಯಿಂದ ಆರಂಭವಾಗಿ, ಲಯನ್ಸ್ ಸರ್ಕಲ್, ಬಿಗ್ ಬಜಾರ್ – ಡಯಾನಾ ಹೋಟೆಲ್, ಅಜ್ಜರಕಾಡಿ, ಬ್ರಹ್ಮಗಿರಿ- ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ, ಕರಾವಳಿ ಬೈಪಾಸ್, ಸಂತೆಕಟ್ಟೆ ಮಾರ್ಗವಾಗಿ ಅಲ್ಲಿಂದ ತಿರುಗಿ ಸಂತೆಕಟ್ಟಿ, ಅಂಬಾಗಿಲು, ಕಲ್ಸಂಕ, ಕಡಿಯಾಳಿ, ಎಮ್ ಜಿ ಎಮ್ ಕಾಲೇಜು ಬಸ್ಟ್ಯಾಂಡ್, ಸಾಗಿ ಸಿಟಿ ಬಸ್ ಸ್ಟ್ಯಾಂಡ್, ಬನ್ನಂಜೆ, ಎಸ್ಪಿ ಕಚೇರಿ, ಬ್ರಹ್ಮಗಿರಿ, ಅಜ್ಜರಕಾಡಿ, ಡಯಾನಾ ಹೊಟೇಲ್, ಬಿಗ್ ಬಜಾರ್, ಲಯನ್ಸ್ ಸರ್ಕಲ್ ಮೂಲಕ ಬಡಗಬೆಟ್ಟಿ ಸೊಸೈಟಿ ಬಳಿ ಸಮಾಪನಗೊಳ್ಳಲಿದೆ. ಸೈಕ್ಲಾಥಾನ್ ಕಾರ್ಯಕ್ರಮದಲ್ಲಿ 300ಕ್ಕೂ ಅಧಿಕ್ ಸೈಕ್ಲಿಂಗ್ ಉತ್ಸಾಹಿಗಳು ಭಾಗವಹಿಸಲಿದ್ದು, ಭಾಗವಹಿಸಿದವರಿಗೆಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ಸೈಕ್ಲಾಥಾನ್ ಕಾರ್ಯಕ್ರಮಕ್ಕೆ ಬಡಗಬೆಟ್ಟು ಕೊ ಅಪರೇಟಿವ್ ಸೊಸೈಟಿ, ಇಂಡಿಯನ್ ಮೆಡಿಕಲ್ ಎಸೋಸೀಯೇಶನ್, ಉಡುಪಿ ಹಾಗೂ ಉಡುಪಿ ಸೈಕ್ಲಿಂಗ್ ಅಸೊಶೀಯೇಶನ್ ಸಹಕಾರ ನೀಡಲಿದ್ದು ಹೆಚ್ಚಿನ ಸಂಖೆಯ ಸೈಕಲಿಂಗ್ ಉತ್ಸಾಹಿಗಳು ಭಾಗವಹಿಸುವಂತೆ ಕೋರಿದ್ದಾರೆ. ಸೈಕ್ಲಾಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ದಿವಾಕರ್ ಹಿರಿಯಡ್ಕ (9900407474), ಪಲ್ಲವಿ ಸಂತೋಷ್ (9632767780).


Spread the love