Home Mangalorean News Kannada News ಅಗಸ್ಟ್ 6 : ಉಡುಪಿ ಜಿಲ್ಲೆಯಲ್ಲಿ ಮತ್ತೆ 217 ಮಂದಿಗೆ ಕೊರೋನಾ ಪಾಸಿಟಿವ್, 1685 ನೆಗೆಟಿವ್

ಅಗಸ್ಟ್ 6 : ಉಡುಪಿ ಜಿಲ್ಲೆಯಲ್ಲಿ ಮತ್ತೆ 217 ಮಂದಿಗೆ ಕೊರೋನಾ ಪಾಸಿಟಿವ್, 1685 ನೆಗೆಟಿವ್

Spread the love

ಅಗಸ್ಟ್ 6 : ಉಡುಪಿ ಜಿಲ್ಲೆಯಲ್ಲಿ ಮತ್ತೆ 217 ಮಂದಿಗೆ ಕೊರೋನಾ ಪಾಸಿಟಿವ್, 1685 ನೆಗೆಟಿವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರ ಒಟ್ಟು 217 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 5353 ಕ್ಕೆ ಏರಿಕೆಯಾಗಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ, ಶೀತಜ್ವರ, ಉಸಿರಾಟದ ಸಮಸ್ಯೆ ಇರುವ 1991 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಗುರುವಾರ 1685 ವರದಿಗಳು ನೆಗೆಟಿವ್ ಬಂದಿದ್ದು, 217 ಪಾಸಿಟಿವ್ ಬಂದಿವೆ. 1229 ವರದಿಗಳು ಬರುವುದು ಬಾಕಿ ಇದೆ.

ಜಿಲ್ಲೆಯಲ್ಲಿ ಇದುವರೆಗೂ 3157 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2153 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಗುರುವಾರ 6 ಮಂದಿ ಕೋವಿಡ್ ಸೋಂಕಿನಿಂದ ಮೃತರಾಗಿದ್ದು ಜಿಲ್ಲೆಯಲ್ಲಿ ಒಟ್ಟು ಸಾವನಪ್ಪಿದವರ ಸಂಖ್ಯೆ 50 ಕ್ಕೆ ಏರಿಕೆಯಾಗಿದೆ


Spread the love

Exit mobile version