Home Mangalorean News Kannada News ಅಜ್ಜನ ಸ್ಮರಣೆಗೆ ಶಾಲಾ ಮಕ್ಕಳಿಗೆ ಮೊಮ್ಮಗಳ ಡ್ರಾಯಿಂಗ್ ಬುಕ್ ಕೊಡುಗೆ

ಅಜ್ಜನ ಸ್ಮರಣೆಗೆ ಶಾಲಾ ಮಕ್ಕಳಿಗೆ ಮೊಮ್ಮಗಳ ಡ್ರಾಯಿಂಗ್ ಬುಕ್ ಕೊಡುಗೆ

Spread the love

ಅಜ್ಜನ ಸ್ಮರಣೆಗೆ ಶಾಲಾ ಮಕ್ಕಳಿಗೆ ಮೊಮ್ಮಗಳ ಡ್ರಾಯಿಂಗ್ ಬುಕ್ ಕೊಡುಗೆ

ಬಂಟ್ವಾಳ: ಸಾಧಾರಣವಾಗಿ ಶಾಲಾ ವಿದ್ಯಾರ್ಥಿಗಳ ಮನೆಯಲ್ಲಿ ಕಾರ್ಯಕ್ರಮಗಳು ಇದ್ದರೆ ಶಾಲಾ ಮಕ್ಕಳಿಗೆ ಸಿಹಿ ತಿಂಡಿಗಳನ್ನು ಹಂಚುತ್ತಾರೆ. ಆದರೆ ಬಂಟ್ವಾಳ ತಾಲೂಕಿನ ಪರ್ಲಿಯಾ ನಿವಾಸಿಯಾದ ರಿಯಾಝ್ ಜವಾನ್ ಹಾಗೂ ನೌಶೀನ ದಂಪತಿಗಳ ಪುತ್ರಿ 4 ವರ್ಷ ಪ್ರಾಯದ ಅನ್ಹಾ ಮರಿಯಮ್ ರಶೀದಾ ಅಗಲಿದ ತನ್ನ ತಾತನ 13ನೇ ವರ್ಷದ ಸ್ಮರಣೆಯನ್ನು ಕೊಡಂಗೆ ಸರ್ಕಾರಿ ಶಾಲೆಯ 1ನೇ ತರಗತಿ ವಿದ್ಯಾರ್ಥಿಗಳಿಗೆ ಡ್ರಾಯಿಂಗ್ ಬುಕ್ ಕೊಡುಗೆಯಾಗಿ ನೀಡುವ ಮೂಲಕ ಆಚರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾಭಿವೃಧ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಬಿ.ಎಂ.ಇಸ್ಮಾಯಿಲ್ ಮಾತನಾಡಿ ವಿದ್ಯಾರ್ಥಿಗಳು ಈ ರೀತಿಯ ವಿಶಿಷ್ಟ ರೀತಿಯ ಕೊಡುಗೆಯನ್ನು ನೀಡಿದರೆ ಮತ್ತಷ್ಟು ಕ್ರಿಯಾಶೀಲರಾಗುತ್ತಾರೆ ಮುಂದಿನ ದಿನಗಳಲ್ಲಿ ಇಂತಹಾ ಕೊಡಗೆಗಳು ಇತರರು ಕೂಡಾ ನೀಡುವಂತಾಗಲಿ ಅನ್ಹಾ ಮರಿಯಮ್ ರಶೀದಾ ಮಾದರಿಯಾಗಲಿ ಎಂದು ಶುಭಹಾರೈಸಿದರು.

ಎಸ್.ಡಿ.ಎಂ.ಸಿ ಸದಸ್ಯರಾದ ಮೊಹಮ್ಮದ್ ಹನೀಫ್ ಪರ್ಲಿಯಾ, ಮೊಹಮ್ಮದ್ ಹನೀಫ್ ಕೊಡಂಗೆ, ಕೆ.ಹೈದರ್ ಪರ್ಲಿಯಾ, ಶಾಲಾ ಮುಖ್ಯೋಪಾದ್ಯಾಯರಾದ ಸೋನಿತಾ ಕೆ. ರಿಯಾಝ್ ಜವಾನ್, ಪಿ.ಅಬ್ದುಲ್ ಬಶೀರ್ ಪರ್ಲಿಯಾ, ಜವಾನ್ ಫ್ರೆಂಡ್ಸ್‍ನ ಸತ್ತಾರ್ ನಂದರಬೆಟ್ಟು, ಆಶಿಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.


Spread the love

Exit mobile version