ಅಟೋರಿಕ್ಷಾಗಳಲ್ಲಿ ಎಲ್‍ಇಡಿ ಜಾಹೀರಾತು: ಆರ್‍ಟಿಓ ಎಚ್ಚರಿಕೆ
ಮಂಗಳೂರು: ಮಂಗಳೂರು ನಗರ ಪ್ರದೇಶದಲ್ಲಿ ಓಡಾಡುವ ಕೆಲವು ಆಟೋರಿಕ್ಷಾಗಳ ಹಿಂಬದಿಯಲ್ಲಿ ಎಲ್‍ಇಡಿ ಜಾಹೀರಾತು ಫಲಕಗಳನ್ನು ಅಳವಡಿಸಿರುವುದು ಕಂಡುಬಂದಿದೆ. ಈ ರೀತಿ ಜಾಹೀರಾತು ಅಳವಡಿಸಿರುವುದು ಕಾನೂನು ಬಾಹಿರವಾಗಿದ್ದು, ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಹ ಕೆಲವು ಆಟೋರಿಕ್ಷಾ ಮಾಲಕರು ಜಾಹೀರಾತುಗಳನ್ನು ತೆಗೆದಿರುವುದಿಲ್ಲ.
ಈ ರೀತಿ ಜಾಹೀರಾತು ಅಳವಡಿಸಿರುವುದು ರಸ್ತೆ ಸುರಕ್ಷತೆಗೆ ತೊಂದರೆ ಉಂಟಾಗುತ್ತಿದ್ದು, ಈ ಬಗ್ಗೆ ವಾಹನ ತನಿಖೆ / ತಪಾಸಣೆ ಕೈಗೊಳ್ಳಲಾಗುವುದು. ಜಾಹೀರಾತನ್ನು ತೆಗೆದು ಹಾಕದೇ ಇದ್ದಲ್ಲಿ ಪರವಾನಿಗೆ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅನುಮತಿ ಪಡೆಯುವ ತನಕ ಇಂತಹ ಜಾಹೀರಾತು ಅಳವಡಿಸಬಾರದೆಂದು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಮತ್ತು ಉಪಸಾರಿಗೆ ಆಯುಕ್ತರ ಪ್ರಕಟನೆ ತಿಳಿಸಿದೆ.