Home Mangalorean News Kannada News ಅಡಿಕೆ ಕಳ್ಳತನ – ಆರೋಪಿಯ ಬಂಧನ

ಅಡಿಕೆ ಕಳ್ಳತನ – ಆರೋಪಿಯ ಬಂಧನ

Spread the love

ಅಡಿಕೆ ಕಳ್ಳತನ – ಆರೋಪಿಯ ಬಂಧನ

ಮಂಗಳೂರು: ಅಡಿಕೆ ಕಳ್ಳತನ ಮಾಡಿದ ಆರೋಪದಲ್ಲಿ ಒರ್ವ ಆರೋಪಿಯನ್ನು ಪುತ್ತೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ 11/2019 ಕಲಂ 379 ಐಪಿಸಿ ಪ್ರಕರಣದಲ್ಲಿ ಫಿರ್ಯಾದುದಾರರು ಎಸ್.ಅಶೋಕ ಬೋಗಲೆ ಪಡುವನ್ನೂರು ಗ್ರಾಮರವರು ದಿ.25.01.2019 ರಂದು ರಾತ್ರಿ 10.00 ಗಂಟೆಯಿಂದ ಬೆಳಗ್ಗೆ ವೇಳೆ ಯಾರೋ ಕಳ್ಳರು ಸುಮಾರು 15,000 ರೂ ಮೌಲ್ಯದ ಅಡಿಕೆಯನ್ನು ಕಳವು ಮಾಡಿದ ಬಗ್ಗೆ ದೂರನ್ನು ನೀಡಿದಂತೆ ಸದ್ರಿ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಕೆ.ಸಯ್ಯದ್ ತಮೀಮ್ ಮತ್ತು ರವಿ.ಎನ್ ಎಂಬವರನ್ನು ದಸ್ತಗಿರಿ ಮಾಡಿ 3,000 ಸುಲಿಯದ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾವನ್ನು ವಶ ಪಡಿಸಿಕೊಂಡಿದ್ದು ಸದ್ರಿ ಪ್ರಕರಣದಲ್ಲಿ ತನಿಖೆ ಮುಂದುವರಿಸಿ ಮತ್ತೊಬ್ಬ ಆರೋಪಿಯಾದ ಪಡುವನ್ನೂರು ನಿವಾಸಿ ಮಾಧವ ಮೂಲ್ಯ (27) ಎಂಬಾತನನ್ನು ಠಾಣಾ ಪಿಎಸ್ಐ ಶ್ರೀ ಸಕ್ತಿವೇಲು.ಇ ಮತ್ತು ಸಿಬ್ಬಂದಿಯವರಾದ ಹೆಚ್ ಸಿ 811 ನೇ ಅದ್ರಾಮ, ಪಿಸಿ 1042 ನೇ ವಿನಯ್ ಕುಮಾರ್ ಇವರು ಪತ್ತೆ ಮಾಡಿ ದಸ್ತಗಿರಿ ಮಾಡಿ ಈತನಿಂದ ಬಚ್ಚಿಟ್ಟಿದ್ದ ಕಳವಾದ ಅಡಿಕೆಯ ಪೈಕಿ ಸುಮಾರು 50 ಕೆ.ಜಿ ಸುಲಿದ ಅಡಿಕೆಯನ್ನು ವಶ ಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.


Spread the love

Exit mobile version