Home Mangalorean News Kannada News ಅತಂತ್ರ ಪರಿಸ್ಥಿತಿಯಲ್ಲಿ ಮಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತದ ಕಾರ್ಮಿಕರು

ಅತಂತ್ರ ಪರಿಸ್ಥಿತಿಯಲ್ಲಿ ಮಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತದ ಕಾರ್ಮಿಕರು

Spread the love

ಅತಂತ್ರ ಪರಿಸ್ಥಿತಿಯಲ್ಲಿ ಮಂಗಳೂರಿನಲ್ಲಿ ನೆಲೆಸಿರುವ ಉತ್ತರ ಭಾರತದ ಕಾರ್ಮಿಕರು

ನಗರದ ಕುದ್ರೋಳಿ ಮಂಡಿ ಪ್ರದೇಶದಲ್ಲಿ ಸುಮಾರು 70 ಕ್ಕೂ ಮಿಕ್ಕಿ ಉತ್ತರ ಭಾರತದ ಸಿವಾಸಿಗಳಾದ ಕೂಲಿ ಕಾರ್ಮಿಕರು ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಸ್ಥಳೀಯ ಜನರಿಂದ ಮಾಹಿತಿ ಪಡೆದ ಮಾಜಿ ಶಾಸಕ  ಜೆ.ಆರ್.ಲೋಬೊರವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ನಿರಾಶ್ರಿತರ ಅಹವಾಲುಗಳನ್ನು ಸ್ವೀಕರಿಸಿದರು.

ತದನಂತರ ಅವರು ಮೂಡಾ ಆಯುಕ್ತ ದಿನೇಶ್ ಕುಮಾರ್ ಮತ್ತು ಕಾರ್ಮಿಕ ಇಲಾಖೆಯ ಉಪ ಆಯುಕ್ತ ನಾಗರಾಜ್ ರವರಿಗೆ ಫೋನ್ ಮೂಲಕ ಸಂಪರ್ಕಿಸಿ , ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಅದಲ್ಲದೇ ನಿರಾಶ್ರಿತರಿಗೆ ಅವರಿಗೆ ಬೇಕಾಗುವ ಆಹಾರ ಸಾಮಾಗ್ರಿ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳನ್ನು ತಕ್ಷಣ ಒದಗಿಸಿಕೊಡುವಂತೆ ಮನವಿ ಮಾಡಿದರು. ಈ ಕಾರ್ಮಿಕರು ಉತ್ತರ ಭಾರತದ ಕಲ್ಕತ್ತಾ , ಜಾರ್ಖಂಡ್, ಅಸ್ಸಾಂ , ಉತ್ತರ ಪ್ರದೇಶದ ಜನರಾಗಿದ್ದು, ಇವರ ಊರಿಗೆ ಕಳುಹಿಸಲು ಸರಕಾರ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಿದರು.


Spread the love

Exit mobile version