ಅತ್ತಾವರದಲ್ಲಿ ಡ್ರಗ್ಸ್ ಜಾಲ ಪತ್ತೆ: ನಾಲ್ವರ ಬಂಧನ
ಮಂಗಳೂರು: ಡ್ರಗ್ಸ್ ಹಾವಳಿ ವಿರುದ್ಧ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ದಾಳಿ ಮುಂದುವರಿದಿದ್ದು, 1 ಕೆ.ಜಿ. 200 ಗ್ರಾಂ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.
ಎಕ್ಕೂರು ಕಲ್ಕರ್ ಮನೆ ನಿವಾಸಿ ಪೃಥ್ವಿ ಪಿ. ಕುಮಾರ್(19), ವೆಲೆನ್ಸಿಯಾದ ಕ್ಲೆವಿನ್ ಸಲ್ಡಾನಾ(21), ಅತ್ತಾವರ ಬಾಬುಗುಡ್ಡೆಯ ವಿ.ಎಸ್. ನಿಖಿಲ್ (21) ಹಾಗೂ ಮಂಗಳಾದೇವಿಯ ಸಾಗರ್ ಅಮೀನ್ (23) ಬಂಧಿತ ಆರೋಪಿಗಳು.
ಎಸಿಪಿ ಸೆಂಟ್ರಲ್ ಮತ್ತು ತಂಡ ನಡೆಸಿದ ಮಹತ್ವದ ಕಾರ್ಯಾಚರಣೆಯೊಂದರಲ್ಲಿ ನಿನ್ನೆ ಅತ್ತಾವರ ಬಾಬುಗುಡ್ಡೆ ಒಂದನೇ ಕ್ರಾಸ್ ರಸ್ತೆಯಲ್ಲಿ ಇವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 1 ಕೆ.ಜಿ. 200 ಗ್ರಾಂ ಗಾಂಜಾ ಹಾಗೂ ಐದು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ .
ಈ ಪ್ರಕರಣದ ಕಾರ್ಯಾಚರಣೆಯು ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಸಂದೀಪ್ ಪಾಟೀಲ್ ಐ.ಪಿ.ಎಸ್. ಮಂಗಳೂರು ನಗರ. ಹಾಗೂ ಪೊಲೀಸ್ ಉಪ ಆಯುಕ್ತರುಗಳಾದ ಮಾನ್ಯ ಶ್ರೀ ಹನುಮಂತರಾಯ ಐ.ಪಿ.ಎಸ್. ಮತ್ತು ಶ್ರೀ ಲಕ್ಷ್ಮೀ ಗಣೇಶ್ ಇವರ ಮಾರ್ಗದರ್ಶನದಂತೆ ಮಂಗಳೂರು ಸೆಂಟ್ರಲ್ ಉಪ ವಿಭಾಗದ ಎಸಿಪಿ ಶ್ರೀ ಭಾಸ್ಕರ್ ವಿ.ಬಿ ದಕ್ಷಿಣ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಮಂಜುಳಾ ಎಲ್ ಮತ್ತು ಸಿಬ್ಬಂದಿಗಳು, ಮಂಗಳೂರು ಸೆಂಟ್ರಲ್ ಎಸಿಪಿ ರವರ ನೇತೃತ್ವದ ವಿಶೇಷ ಪತ್ತೆ ದಳದ ಸಿಬ್ಬಂದಿಯವರು ಭಾಗವಹಿಸಿರುತ್ತಾರೆ.