Home Mangalorean News Kannada News ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ನೊವೆನಾ ಪ್ರಾರ್ಥನೆಗೆ ಚಾಲನೆ

ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ನೊವೆನಾ ಪ್ರಾರ್ಥನೆಗೆ ಚಾಲನೆ

Spread the love

 ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ವಾರ್ಷಿಕ ಮಹೋತ್ಸವದ ನೊವೆನಾ ಪ್ರಾರ್ಥನೆಗೆ ಚಾಲನೆ

ಕಾರ್ಕಳ: ಸಂತ ಲಾರೆನ್ಸ್ ಬಸಿಲಿಕ ಅತ್ತೂರು ಇದರ ಮಹೋತ್ಸವದ ನೊವೆನಾ ಪ್ರಾರ್ಥನೆಗೆ ಚಾಲನೆ ಹಾಗೂ ಸಂತ ಸೇಬೆಸ್ಟಿಯನ್ ನವರ ಹಬ್ಬದ ಆಚರಣೆ ಭಾನುವಾರ ಜರುಗಿತು.

ದಿವ್ಯ ಬಲಿಪೂಜೆಯನ್ನು ದಿವ್ಯ ಜ್ಯೋತಿ ಕೇಂದ್ರದ ಸಂಚಾಲಕರಾದ ವಂದನೀಯ ಸಿರಿಲ್ ಲೋಬೊ ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ತದನಂತರ ಸಂತ ಸೇಬಸ್ಟಿಯನ್ ನವರ ಮೂರ್ತಿಯನ್ನು ಹೊತ್ತು ಮೆರವಣಿಗೆಯಲ್ಲಿ ಬಂದು ಆಶೀರ್ವಚನವನ್ನು ನೀಡಲಾಯಿತು.

ಬಲಿಪೂಜೆಯ ಬಳಿಕ ನಡೆದ ಕಾರ್ಯಕ್ರಮದಲ್ಲಿ ಸ್ವಂತ ಲಾರೆನ್ಸರ ಬಸಿಲಿಕಾದ ವಾರ್ಷಿಕ ಮಹೋತ್ಸವಕ್ಕೆ ಅಧಿಕೃತ ಚಾಲನೆಯನ್ನು ನೀಡಲಾಯಿತು.

ನಿಟ್ಟೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ನಿತಿನ್ ಸಾಲಿಯಾನ್, ಸದಸ್ಯರಾದ ರಾಜೇಶ್ ಪುಣ್ಯ ಕ್ಷೇತ್ರದ ಪ್ರಧಾನ ಧರ್ಮ ಗುರು ವಂದನಿಯ ಆಲ್ಬನ್ ಡಿಸೋಜ, ಸಹಾಯಕ ಧರ್ಮ ಗುರುಗಳಾದ ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಧರ್ಮ ಗುರುಗಳಾದ ರೋಮನ್ ಮಸ್ಕೇರೆನ್ಹಸ್ ದಿವ್ಯಜ್ಯೋತಿಯ ನಿರ್ದೇಶಕರಾದ ವ0  ಸಿರಿಲ್ ಲೋಬೊ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಕಾರ್ಯದರ್ಶಿ ರೋನಾಲ್ಡ್ ನೋರೊನ್ಹ, 20 ಆಯೋಗದ ಸಂಚಾಲಕರಾದ ಬೆನ್ನಡಿಕ್ಟ ನೋರೊನ್ಹ, ಇವರು ದೀಪ ಬೆಳಗಿಸುವ ಮೂಲಕ ವಾರ್ಷಿಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು.

ಈ ವೇಳೆ ಮಾತನಾಡಿದ ಪಂಚಾಯತ್ ಉಪಾಧ್ಯಕ್ಷರಾದ ನಿತಿನ್ ಸಾಲಿಯಾನ್ ಈ ಹಬ್ಬ ನಮ್ಮ ಊರಿನ ಜಾತ್ರೆಯಾಗಿದೆ ಹಬ್ಬವನ್ನು ವಿಜ್ರಂಭಣೆಯಿಂದ ಆಚರಣೆ ಮಾಡಲು ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಸಹಾಯಕ ಧರ್ಮಗುರು ವಂ ಲ್ಯಾರಿ ಪಿಂಟೊ ಇವರು ಪ್ರಾರ್ಥನೆಯ ಮೂಲಕ ಹಬ್ಬದ ಮೇಲೆ ಆಶೀರ್ವಚನವಿತ್ತರು. ಪಾಲನ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಸಿಲ್ವಾ ಇವರು ಕಾರ್ಯಕ್ರಮ ನೆರವೇರಿಸಿದರು. ಪಾಲನಾ ಮಂಡಳಿ ಕಾರ್ಯದರ್ಶಿ ರೊನಾಲ್ ನೊರೊನ್ಹಾ ಧನ್ಯವಾದ ಸಮರ್ಪಿಸಿದರು. ಅತ್ತೂರು ಚರ್ಚ್ ಪಾಲನಾ ಮಂಡಳಿ ಸದಸ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.


Spread the love

Exit mobile version